Asianet Suvarna News Asianet Suvarna News

ರಶ್ಮಿಕಾ ಸ್ವಯಂವರದಲ್ಲಿ ಈ ಮೂವರು ಇರಲೇ ಬೇಕಂತೆ; ಯಾರವರು?

ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತನ್ನ ಸ್ವಯಂವರದ ಬಗ್ಗೆ ಮಾತನಾಡಿದ್ದಾರೆ. ತನ್ನ ಸ್ವಯಂವರದಲ್ಲಿ ಈ ಸ್ಟಾರ್ಸ್ ಇರಲೇ ಬೇಕೆಂದು ಬಹಿರಂಗ ಪಡಿಸಿದರು. 

Rashmika Mandanna pic name of ranbir vijay and allu arjun for her swayamvar sgk
Author
First Published Oct 5, 2022, 4:40 PM IST

ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಮೊದಲ ಸಿನಿಮಾ ಬಿಡುಗಡೆಯ ಕಾತರದಲ್ಲಿದ್ದಾರೆ ರಶ್ಮಿಕಾ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಸೇರಿದಂತೆ ಅನೇಕ ದೊಡ್ಡ ಕಲಾವಿದರ ಜೊತೆ ತೆರೆಹಂಚಿಕೊಂಡಿರುವ ರಶ್ಮಿಕಾ ನಟನೆಯ ಗುಡ್‌ಬೈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ರಶ್ಮಿಕಾ ಈ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿ ಹಾಗೂ ಯೂಟ್ಯೂಬರ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ವಿಜಯ್ ದೇವರೊಕೊಂಡ ಜೊತೆ ಲಿಪ್‌ಲಾಕ್ ಮಾಡಿ ಟ್ರೋಲ್ ಆಗಿದ್ದ ಬಗ್ಗೆ ಮಾತನಾಡಿದ್ದರು. ಅದರಿಂದ ತುಂಬಾ ನೋವಾಗಿತ್ತು ಎಂದು ಬಹಿರಂಗ ಪಡಿಸಿದ್ದರು. ಇದೀಗ ತನ್ನ ಸ್ವಯಂವರದ ಬಗ್ಗೆ ಮಾತನಾಡಿದ್ದಾರೆ. 

ನಿರೂಪಕ ಒಂದು ವೇಳೆ ಸ್ವಯಂವರ ನಡೆದರೆ ಯಾವ ಪ್ರಸಿದ್ಧ ವ್ಯಕ್ತಿಗಳು ಇರಬೇಕೆಂದು ಬಯಸುತ್ತೀರಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಲು ರಶ್ಮಿಕಾ ಮಂದಣ್ಣ ಮೊದಲು ಹಿಂದೇಟು ಹಾಕಿದರು. ಆದರೆ ಬಳಿಕ ಜಾಣ್ಮೆಯ ಉತ್ತರ ನೀಡಿದರು. ಸದ್ಯ ತಾನು ಕೆಲಸ ಮಾಡುತ್ತಿರುವ ನಟರು ಸ್ವಯಂವರದಲ್ಲಿ ಇರಬೇಕೆಂದು ಹೇಳಿದರು. ರಣಬೀರ್ ಕಪೂರ್, ಅಲ್ಲು ಅರ್ಜುನ್ ಮತ್ತು ದಳಪತಿ ವಿಜಯ್ ಸ್ವಯಂವರದಲ್ಲಿ ಇಬರಬೇಕೆಂದು ಹೇಳಿದರು. 

ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಮಾಡಿ ಟ್ರೋಲ್ ಆದಾಗ ತುಂಬಾ ಅತ್ತಿದ್ದೆ; ರಶ್ಮಿಕಾ ಮಂದಣ್ಣ

ಇನ್ನು ಅದೇ ಸಂದರ್ಶನದಲ್ಲಿ ಕಾಪಿ ವಿತ್ ಕರಣ್ ಶೋನಲ್ಲಿ ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಇಬ್ಬರೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಅದು ತುಂಬಾ ಇಂಟ್ರಸ್ಟಿಂಗ್ ಆಗಿತ್ತು. ವಿಜಯ್ ದೇವರಕೊಂಡ ಅವರನ್ನು ಭೇಟಿಯಾದರೆ ಅವರ ಹೆಚ್ಚು ಆಟವಾಡುತ್ತೇನೆ. ನಾನೆ ಗೆಲ್ಲುತ್ತೇನೆ. ಆದರೆ ವಿಜಯ್ ಬ್ಯಾಡ್ಮಿಂಟನ್ ಚೆನ್ನಾಗಿ ಆಡುತ್ತಾರೆ ಹಾಗಾಗಿ ಯಾವಾಗಲೂ ಅವರೇ ಗೆಲ್ಲುತ್ತಾರೆ ಎಂದು ಹೇಳಿದರು.

Rashmika Mandanna ದೊಗಳೆ ಪ್ಯಾಂಟ್ ಶರ್ಟ್‌ ಧರಿಸಿ ಏರ್ಪೋರ್ಟ್‌ ನಿಂದ ಹೊರ ಬಂದ ರಾಶ್!

 ರಶ್ಮಿಕಾ ಸದ್ಯ ಗುಡ್‌ಬೈ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಹಿಂದಿ ಸಿನಿಮಾ ರಿಲೀಸ್‌ನ ಉತ್ಸುಕದಲ್ಲಿದ್ದಾರೆ ರಶ್ಮಿಕಾ. ಈ ಸಿನಿಮಾಗಾಗಿ ರಶ್ಮಿಕಾ ಉತ್ತಮ ಭಾರತದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾ ಜೊತೆಗೆ ಈಗಾಗಲೇ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮಿಷನ್ ಮಜ್ನು ಚಿತ್ರಕರಣ ಸಹ ಮುಗಿಸಿದ್ದಾರೆ. ಸದ್ಯ ರಣಬೀರ್ ಕಪೂರ್ ಜೊತೆ ಹೊಸ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ.  ಮಿಷನ್ ಮಜ್ನು ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಹಾರಿದರು. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟೈಗರ್ ಶ್ರಾಪ್ ಮತ್ತು ಕಾರ್ತಿಕ್ ಆರ್ಯನ್ ಜೊತೆಯೂ ರಶ್ಮಿಕಾ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇನ್ನು ದಕ್ಷಿಣದಲ್ಲಿ ರಶ್ಮಿಕಾ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ -2 ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಬಾರಿ ನಿರೀಕ್ಷೆ ಮೂಡಿಸಿದೆ. ತಮಿಳಿನಲ್ಲಿ ದಳಪತಿ ವಿಜಯೋ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ, ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ.   

Follow Us:
Download App:
  • android
  • ios