Asianet Suvarna News Asianet Suvarna News

Rashmika Mandanna: ವಿಜಯ್‌ ಜತೆ ಸಿನಿಮಾ ಒಪ್ಪಿಕೊಂಡಿದ್ಯಾಕೆ ಎಂದು ರಿವೀಲ್ ಮಾಡಿದ ರಶ್ಮಿಕಾ!

ರಶ್ಮಿಕಾ ಮತ್ತು ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಬಾಕ್ಸಾಫೀಸಿನಲ್ಲಿ ದುಡ್ಡು ಬಾಚೋದ್ರಲ್ಲಿ ಯಶಸ್ವಿ ಆಗಿದೆ. ಆದರೆ ಕಿರಿಕ್ ಬೆಡಗಿ ರಶ್ಮಿಕಾ ಈ ಸಿನಿಮಾದಲ್ಲಿ ತನ್ನ ಪಾತ್ರಕ್ಕೆ ಸ್ಕೋಪ್ ಇಲ್ಲದಿದ್ದರೂ ಒಪ್ಪಿಕೊಂಡೆ ಅಂದಿದ್ದಾರೆ. ಅದು ಯಾಕೆ ಅನ್ನೋದಕ್ಕೂ ಉತ್ತರ ಕೊಟ್ಟಿದ್ದಾರೆ.

 

Rashmika Mandanna opinion about her role in Varisu movie
Author
First Published Jan 23, 2023, 4:15 PM IST

ರಶ್ಮಿಕಾ ಮಂದಣ್ಣ ಅಂದರೆ ಟ್ರೋಲ್, ವಿವಾದ ಅನ್ನೋ ಹಾಗಾಗಿದೆ. ನ್ಯಾಶನಲ್ ಕ್ರಶ್ ಅಂತಲೇ ಫೇಮಸ್ ಆಗಿರೋ ಈ ಕೊಡಗಿನ ಹುಡುಗಿ ತನ್ನ ಸ್ಟೇಟ್‌ಮೆಂಟ್‌ಗಳಿಂದಲೇ ಫೇಮಸ್ಸು. ಇದೀಗ ವಾರಿಸು ಸಿನಿಮಾದ ತನ್ನ ಪಾತ್ರದ ಬಗ್ಗೆ ರಶ್ಮಿಕಾ ಆಡಿರೋ ಮಾತು ವೈರಲ್ ಆಗ್ತಿದೆ. ಈಗಾಗಲೇ ದಕ್ಷಿಣ ಭಾರತೀಯ ಚಿತ್ರಗಳು ಮಾತ್ರವಲ್ಲ, ಬಾಲಿವುಡ್‌ನಲ್ಲೂ ನಟಿ ಸೈ ಅನಿಸಿಕೊಂಡ ರಶ್ಮಿಕಾ ಇತ್ತೀಚೆಗೆ ಸಿನಿಮಾಗಳ ವಿಷಯದಲ್ಲಿ ಶ್ಯಾನೆ ಚ್ಯೂಸಿಯಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆರಂಭದಲ್ಲಿ ಫೇಮಸ್ ನಾಯಕರ ಜೊತೆಗೆ ನಟನೆಗೆ ಅವಕಾಶ ಸಿಕ್ಕಾಗ ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದ ರಶ್ಮಿಕಾಗೆ ಆಮೇಲಾಮೇಲೆ ಅವಕಾಶಗಳ ಸುರಿಮಳೆ ಆಗತೊಡಗಿತು. ಆ ಹೊತ್ತಿಗೆ ಎಚ್ಚೆತ್ತುಕೊಂಡ ರಶ್ಮಿಕಾ ತನ್ನ ಪಾತ್ರಕ್ಕೆ ಮಹತ್ವ ಇದ್ದರೆ ಮಾತ್ರ ಪಾತ್ರ ಒಪ್ಪಿಕೊಳ್ಳೋದಾಗಿ ಹೇಳಿದ್ದರು. ಅವರಿಗೆ ಸಾಕಷ್ಟು ಜಾಹೀರಾತಿಗಳಲ್ಲೂ ಅವಕಾಶ ಹರಿದುಬಂತು. ಇದೀಗ ವಿವಾದಗಳ ಜೊತೆಗೆ ವಾರಿಸು ಸಿನಿಮಾ ಮೂಲಕವೂ ಸುದ್ದಿಯಲ್ಲಿದ್ದಾರೆ.

ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ವಾರಿಸು' ಸಿನಿಮಾ ಸಂಕ್ರಾಂತಿಗೂ ಎರಡು ದಿನ ಮೊದಲೇ ರಿಲೀಸ್ ಆಗಿತ್ತು. ಸಿನಿಮಾಕ್ಕೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದರೂ, ಮಾಸ್ ಎಂಟರ್‌ಟೈನರ್ ಆಗಿ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರ ಹಿಂದಿ, ತೆಲುಗಿಗೂ ಡಬ್ ಆಗಿದೆ. ಅಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಅಲ್ಲಿಗೆ ಮತ್ತೊಂದು ದಕ್ಷಿಣ ಭಾರತೀಯ ಸಿನಿಮಾ ಕೋಟಿಗಳ ಬೇಟೆಯಲ್ಲಿ ಸಕ್ರಿಯವಾಗಿದೆ ಅನ್ನಬಹುದು. ಆದರೆ ಪ್ರಶ್ನೆ ಅದಲ್ಲ, ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಅನ್ನೋದು ಹೆಚ್ಚಿನೆಲ್ಲ ನಟ- ನಟಿಯರ ಕಾಮನ್ ಕೊಟೇಶನ್. ಇದಕ್ಕೆ ರಶ್ಮಿಕಾ ಕೂಡ ಹೊರತಾದವರಲ್ಲ. ಆದರೆ ರಶ್ಮಿಕಾ ಮಾತ್ರ 'ವಾರಿಸು' ಚಿತ್ರದಲ್ಲಿ ನಟನೆಗೆ ಅವಕಾಶ ಇಲ್ಲದೇ ಇದ್ದರೂ ಒಪ್ಪಿ ನಟಿಸಿದರಂತೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಆಕೆ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ ದೊಡ್ಡ ಬ್ಯುಸಿನೆಸ್‌ಮನ್ ಮಗನಾಗಿ ಕಾಣಿಸಿಕೊಂಡಿದ್ದಾರೆ. ಆತನ ಪ್ರೇಯಸಿ ದಿವ್ಯಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ.

ನೋಡಿದ್ರೆ ಬೇಸರ ಆಗುತ್ತೆ; ಹಾಟ್ ಫೋಟೋ ಶೇರ್ ಮಾಡಿದ ದಿಶಾಗೆ ನೆಟ್ಟಿಗರ ತರಾಟೆ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ವಾರಿಸು ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 'ಕಥೆ ಪೂರ್ತಿ ಕೇಳಿದ ಮೇಲೆ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇಲ್ಲ ಎನ್ನುವುದು ಮೊದಲೇ ಅರ್ಥವಾಗಿತ್ತು. ಆದರೂ ನಾನು ಒಪ್ಪಿಕೊಂಡೆ. ಇದು ನನ್ನ ಸ್ವಂತ ನಿರ್ಧಾರ. ಪ್ರಜ್ಞಾಪೂರ್ವಕವಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದಕ್ಕೆ ಕಾರಣವೂ ಇದೆ. ನನಗೆ ದಳಪತಿ ವಿಜಯ್ ಜೊತೆ ನಟಿಸುವ ಆಸೆ ಇತ್ತು. ನಾನು ಅವರ ಅಭಿಮಾನಿ. ಹಾಗಾಗಿ ಸಿಕ್ಕಿದ ಅವಕಾಶ ಬಿಡಲಿಲ್ಲ. ಚಿತ್ರದಲ್ಲಿ ಎರಡು ಹಾಡಿಗೆ ಡ್ಯಾನ್ಸ್ ಮಾಡಬೇಕು ಎಂದಾಗ ಮಿಸ್ ಮಾಡದೇ ಕುಣಿದು ಕುಪ್ಪಳಿಸಿದೆ. ಶೂಟಿಂಗ್ ವೇಳೆ ಒಮ್ಮೆ ಸ್ವತಃ ವಿಜಯ್ ಸರ್ ಬಳಿ ಈ ಚಿತ್ರದಲ್ಲಿ ನನಗೆ 2 ಹಾಡು ಬಿಟ್ಟರೆ ಬೇರೆ ಏನು ಕೆಲಸ ಇಲ್ಲ ಎಂದು ಹೇಳಿದ್ದೆ. ಒಟ್ನಲ್ಲಿ ನಟಿಯಾಗಿ ಎಲ್ಲಾ ತರಹದ ಪಾತ್ರಗಳನ್ನು ಮಾಡಬೇಕು. ಅದರಲ್ಲಿ ಕಮರ್ಷಿಯಲ್ ಸಿನಿಮಾಗಳು ಕೂಡ ಇರುತ್ತವೆ. ಆದರೆ ನಮ್ಮ ಪ್ರಯಾರಿಟಿ ಏನು ಅನ್ನೋದು ನಮಗೆ ಗೊತ್ತಿರಬೇಕು, ಅಷ್ಟೇ' ಎಂದಿದ್ದಾರೆ.

ಹಾಗೆ ನೋಡಿದರೆ ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದರು. 'ಇದರಲ್ಲಿ ನನ್ನದು ಚಿಕ್ಕ ಪಾತ್ರ. ಆಗ ಇಂಡಸ್ಟ್ರಿಗೆ ಎಂಟ್ರಿ ತಗೊಂಡ ಹೊಸತಲ್ವಾ, ಅವಕಾಶ ಅಷ್ಟೇ ಮುಖ್ಯ ಆಗುತ್ತೆ. ಪಾತ್ರಕ್ಕಿರುವ ಮಹತ್ವದ ಬಗ್ಗೆ ಯೋಚಿಸೋದಕ್ಕಾಗಲ್ಲ' ಅಂತ ರಶ್ಮಿಕಾ ಈ ಸಿನಿಮಾ ಬಗ್ಗೆ ಹೇಳಿದ್ದರು. ಆದರೆ ಈ ಸಿನಿಮಾ ಪ್ರಚಾರದಲ್ಲೂ ಅವರಷ್ಟು ಸಕ್ರಿಯ ಆಗಿರಲಿಲ್ಲ. ಆದರೆ ವಾರಿಸು ಸಿನಿಮಾಕ್ಕೆ ಭರ್ಜರಿ ಪ್ರಚಾರ ಕೊಟ್ಟಿದ್ದಾರೆ. ತಾನ್ಯಾಕೆ ಈ ಸಿನಿಮಾ ಒಪ್ಪಿಕೊಂಡೆ ಅನ್ನೋದನ್ನೂ ಓಪನ್‌(Open) ಆಗಿ ಹೇಳಿದ್ದಾರೆ. ಸದ್ಯ ಈ ವಿಷಯದಲ್ಲಾದರೂ ಕಿರಿಕ್ ಸುಂದರಿ ಕಿರಿಕ್ ಮಾಡಿಲ್ವಲ್ಲ ಅಂತ ಆಕೆಯ ಫ್ಯಾನ್ಸ್ (Fans) ನಿಟ್ಟುಸಿರು ಬಿಟ್ಟಿದ್ದಾರೆ.

NiKhil Kumarswamy: ಬರ್ತ್​ಡೇ ದಿನವೇ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ನಿಖಿಲ್​ ಕುಮಾರಸ್ವಾಮಿ ​

Follow Us:
Download App:
  • android
  • ios