Asianet Suvarna News Asianet Suvarna News

ಬಾ ರೇ ಬಾ..!ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರ ರಿಲೀಸ್, ತರಾಟೆಗೆ ತೆಗೆದುಕೊಳ್ಳಲು ಕನ್ನಡಿಗರು ರೆಡಿ

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಮಿಷನ್ ಮಜ್ನು ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ರಿಲೀಸ್....
 

Rashmika Mandanna Mission majnu film release on janurary 20th on netflix vcs
Author
First Published Dec 13, 2022, 6:35 PM IST

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಜನವರಿ 20ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿದ್ಧಾರ್ಥ್‌ ಮಲ್ಹೋತ್ರಾಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈ ಸಿನಿಮಾ ಬಿ-ಟೌನ್‌ನಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿತ್ತು. ಗುಡ್‌ ಬೈ ಸಿನಿಮಾ ಚಿತ್ರೀಕರಣ ನಡೆಯುತ್ತಿರುವಾಗಲೇ ಸೈಲೆಂಟ್ ಆಗಿ ಸಹಿ ಮಾಡಿದ ಸಿನಿಮಾ ಇದು. ರಶ್ಮಿಕಾ ಅಭನಯ ನೋಡದೆ ಆಫರ್‌ ಕೊಟ್ಟಿದ್ದಾರೆ ಎನ್ನುವ ಗಾಸಿಪ್ ಕೂಡ ಕೇಳಿ ಬಂದಿತ್ತು. ಮಿಷನ್ ಮಜ್ನು ಸ್ಟೋರಿ ಏನು ಗೊತ್ತಾ?

ಮಿಷನ್ ಮಜ್ನು ಸಿನಿಮಾ ಹಿಂದಿನ ಜನ್ಮದಲ್ಲಿ ಮಾಡಿರದ ಒಂದು ಕೆಲಸ (ಮಿಷನ್)ವನ್ನು ಈ ಜನ್ಮದಲ್ಲಿ ನಾಯಕ ಮಾಡಿ ಮುಗಿಸುತ್ತಾನೆ. ನಿಷ್ಠೆ, ಪ್ರೀತಿ, ತ್ಯಾಗ ಮತ್ತು ದ್ರೋಹದ ಬಗ್ಗೆ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎನ್ನಲಾಗಿದೆ. ಆಕ್ಷನ್ ಪ್ಯಾಕ್‌ ಸಿನಿಮಾ ಗೆದ್ದರೆ ಸೂಪರ್ ಹಿಟ್ ಸೋತರೆ ಏನೂ ಮಾಡಲು ಆಗುವುದಿಲ್ಲ. ಸಂತಾನು ಬಾಗ್ಚಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆರ್‌ಎಸ್‌ವಿಪಿ ಮತ್ತು ಜಿಬಿಎಸ್‌ ನಿರ್ಮಾಣ ಮಾಡಿದ್ದಾರೆ. ಸಿದ್ಧಾರ್ಥ್‌ ಮತ್ತು ರಶ್ಮಿಕಾ ಮಾತ್ರವಲ್ಲ ಕುಮುದ ಮಿಶ್ರಾ,ಪರ್ಮೀತ್ ಸೇಥಿ, ಶರೀಬ್ ಹಶ್ಮಿ, ಮೀರ್ ಸರ್ವರ್ ಮತ್ತು ಜಾಕಿರ್ ಹುಸೇನ್ ಅಭಿನಯಿಸಿದ್ದಾರೆ. 

'ಮಿಷನ್ ಮಜ್ನು ಸಿನಿಮಾ ರಿಲೀಸ್‌ಗೆ ಕಾಯುತ್ತಿರುವೆ. ಸಿಕ್ಕಾಪಟ್ಟೆ ಖುಷಿಯಾಗಿರುವೆ. ಇದೇ ಮೊದಲು ನಾನು ಸ್ಪೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಭಾರತದ ಮೋಸ್ಟ್‌ ಥ್ರಿಲಿಂಗ್ ಕವರ್ಟ್‌ ಮಿಷನ್‌ ಕಥೆ ಹೇಳುತ್ತದೆ. 1970ರ ದಶಕದಲ್ಲಿ  ಭಾರತದಲ್ಲಿ ನಡೆದ ರಾಜಕೀಯ ಮತ್ತು ನೆರೆಯ ರಾಷ್ಟ್ರದ ಬಗ್ಗೆ ಕಥೆ ಹೇಳುತ್ತದೆ. ನೆರೆಯ ರಾಷ್ಟ್ರ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ದೊಡ್ಡ ಮಟ್ಟದಲ್ಲಿ ಸಿನಿಮಾ ಜನರಿಗೆ ತಲುಪುತ್ತದೆ ಹಾಗೂ ಇದರಿಂದ ದೇಶದಲ್ಲಿ ಸಣ್ಣ ಬದಲಾವಣೆ ಆಗಬಹುದು ಎನ್ನುವ ನಂಬಿಕೆ ಇದೆ' ಎಂದಿದ್ದಾರೆ ಸಿದ್ಧಾರ್ಥ್‌.

Rashmika Mandanna Mission majnu film release on janurary 20th on netflix vcs

'ಭಾರತ ಬೆಳೆಯುತ್ತಿರುವ ಪ್ರರಾಕ್ರಮ ಮತ್ತು ರಾಷ್ಟ್ರಗಳ ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ಆಗಿ ಸ್ಥಾನವಾಗಿ ಸ್ವೀಕರಿಸುವುದರ ಬಗ್ಗೆ ಮಿಷನ್ ಮಜ್ನು ಕಥೆ ಹೇಳುತ್ತದೆ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದೆ. ಈ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುವುದು ಬೆಸ್ಟ್‌. ಈ ಕಥೆಗೆ ರಶ್ಮಿಕಾ ಮತ್ತು ಸಿದ್ಧಾರ್ಥ್‌ ಜೀವನ ತುಂಬಿದ್ದಾರೆ.' ಎಂದು ನಿರ್ಮಾಪಕರು ಮಾತನಾಡಿದ್ದಾರೆ. 

ರಶ್ಮಿಕಾ ಹಿಂದಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಕರ್ನಾಟಕದ ಅಭಿಮಾನಿಗಳು ಹೈ ಅಲರ್ಟ್‌ ಆಗಿದ್ದಾರೆ. ನೆಟ್ಫ್ಲಿಕ್ಸ್ ರಿಲೀಸ್ ಆಗಿರುವುಕ್ಕೆ ಓಕೆ ಚಿತ್ರಮಂದಿರಗಳಲ್ಲಿ ಅಂತ ಹೇಳಿದ್ದರೆ ನಾನು ಬಿಡುತ್ತಿರಲಿಲ್ಲ. ಹಿಂದಿ ಸಿನಿಮಾ ಮಾತ್ರ ಮಾಡಬೇಕು ಕರ್ನಾಟಕಕ್ಕೆ ಬಾ ಆಗ ನಮ್ಮ ಪವರ್ ತೋರಿಸುತ್ತೀವಿ ಎಂದು ಗರಂ ಆಗಿದ್ದಾರೆ. ಅಲ್ಲದೆ ಅನಂತ್‌ ನಾಗ್ ಚಿತ್ರದ ಬಾರೇ ಬಾ ಎನ್ನು ಡೈಲಾಗ್‌ನ ಕೂಡ ಹೇಳಿ ರಶ್ಮಿಕಾಳನ್ನು ಹೆದರಿಸಲು ಶುರು ಮಾಡಿದ್ದಾರೆ. 

ಅಯ್ಯೋ..! ರಶ್ಮಿಕಾ ಹೆಸರಿಗೆ ಏನಾಯಿತು? ಇನ್ಸ್ಟಾಗ್ರಾಮ್‌ ನೋಡಿ ಫ್ಯಾನ್ಸ್ ಶಾಕ್; ಅಸಲಿ ವಿಚಾರ ಇಲ್ಲಿದೆ

ರಶ್ಮಿಕಾ ಬಗ್ಗೆ ಪ್ರಮೋಷದ್ ರಿಯಾಕ್ಷನ್:

'ರಶ್ಮಿಕಾನ ಬ್ಯಾನ್ ಮಾಡಬೇಕು ಆಕೆಯ ಸಿನಿಮಾಗಳನ್ನು ರಿಲೀಸ್ ಅಗಬಾರದು ಎಂದು ನಾವು ಹೇಳುವುದಿಲ್ಲ ಅದು ಅಭಿಮಾನಿಗಳ ಎಮೋಷನ್. ಯಾಕಂದರೆ ಅವರು ನಮ್ಮನ್ನು ಅಷ್ಟು ಪ್ರೀತಿ ಮಾಡಿರುತ್ತಾರೆ. ಅವರ ಪ್ರೀತಿಯನ್ನು ಈ ರೀತಿ ಹೊರ ಹಾಕುತ್ತಿದ್ದಾರೆ ಅಷ್ಟೆ. ಆದರೆ ಪ್ರತಿಯೊಬ್ಬರು ಹತ್ತಿದ ಮೆಟ್ಟಲು ಮರೀಬಾರ್ದು' ಎಂದು ಕನ್ನಡ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಪ್ರತಿಯೊಬ್ಬರು ತಾವು ಹತ್ತಿದ ಮೆಟ್ಟಿಲನ್ನು ಮರೆಯಬಾರದು. ಮರೆತರೆ ಅದು ನಿಮ್ಮ ಇಷ್ಟ. ಹಲವು ವರ್ಷಗಳಿಂದ ಹತ್ತಿದ ಮೆಟ್ಟಿಲು ಮರೆಯಬೇಡ ಎಂದು ದೊಡ್ಡವರು ಹೇಳುತ್ತಾ ಬರ್ತಿದ್ದಾರೆ. ನೀವು ಹತ್ತಿದ ಮೆಟ್ಟಿಲನ್ನು ಒದ್ದು ಹೋದರೆ ಬೇರೆಯವರು ಏರಲು ಅವಕಾಶ ಇರುವುದಿಲ್ಲ. ಆ ಮೆಟ್ಟಿಲು ಹಾಗೆ ಇದ್ದರೆ ಮತ್ತೊಬ್ಬರು ಹತ್ತಿ ಮೇಲೆ ಬರುತ್ತಾರೆ. ರಕ್ಷಿತ್, ರಿಷಬ್ ಅಥವಾ ನಾನಾಗಿರಬಹುದು. ನಮ್ಮದು ದೊಡ್ಡ ತಂಡ. ಮೇಲೆ ಮೂವರು ಶೆಟ್ಟರು ಕಂಡರೂ ನಮ್ಮದು ಬಹಳ ದೊಡ್ಡ ಗ್ಯಾಂಗ್. ಸಾಕಷ್ಟು ಜನ ಅಂದ್ರೆ ಬೇರೆಯವರು ನಮ್ಮ ಬಳಗದಲ್ಲಿ ಇದ್ದಾರೆ ನಾವೆಲ್ಲಾ ಒಟ್ಟಿಗೆ ಹೋಗಬೇಕು ಎಂದು ಆಸೆ ಪಡುತ್ತೇವೆ. ಹತ್ತಿದ ಮೆಟ್ಟಿಲು ಹಾಗೇ ಇರಬೇಕು. ಇವರು ಮರೆತಿದ್ದಾರೆ ಎಂದು ನಾವೇನು ಮಾಡೋಕೆ ಆಗೋಲ್ಲ' ಎಂದು ಪ್ರಮೋದ್ ಹೇಳಿದ್ದಾರೆ.

Follow Us:
Download App:
  • android
  • ios