Asianet Suvarna News Asianet Suvarna News

ಅಯ್ಯೋ..! ರಶ್ಮಿಕಾ ಹೆಸರಿಗೆ ಏನಾಯಿತು? ಇನ್ಸ್ಟಾಗ್ರಾಮ್‌ ನೋಡಿ ಫ್ಯಾನ್ಸ್ ಶಾಕ್; ಅಸಲಿ ವಿಚಾರ ಇಲ್ಲಿದೆ

ಇನ್ಸ್ಟಾಗ್ರಾಮ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆರು ಉಲ್ಟಾ ಆಗಿದ್ದು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಈ ಬಗ್ಗೆ ರಶ್ಮಿಕಾ ಅವರೇ ಈಗ ಬಹಿರಂಗ ಪಡಿಸಿದ್ದಾರೆ.

rashmika mandanna has revealed why the name is reverse on Instagram sgk
Author
First Published Dec 13, 2022, 1:58 PM IST

ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ನಟಿ. ಸಿನಿಮಾ, ಟ್ರೋಲ್, ವೈಯಕ್ತಿಕ ವಿಚಾರ ಅಂತ ರಶ್ಮಿಕಾ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ, ತನ್ನ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ 35 ಮಿಲಿಯನ್ ಫಾಲೋವರ್ಸ್ ಹೊಂದಿರುವ ರಶ್ಮಿಕಾ ಬ್ರ್ಯಾಂಡ್ ಪ್ರಮೋಷನ್ ಕೂಡ ಮಾಡುತ್ತಿರುತ್ತಾರೆ. ಇತ್ತೀಚಿಗೆ ರಶ್ಮಿಕಾ ಇನ್ಸ್ಟಾಗ್ರಾಮ್ ನೋಡಿದ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ರಶ್ಮಿಕಾ ಮಂದಣ್ಣ ಹೆಸರು ಉಲ್ಟಾ ಕಾಣಿಸುತ್ತಿದೆ. ಏನಾಗಿದೆ ಎಂದು ಅನೇಕರು ತಲೆಕೆಡಿಸಿಕೊಂಡಿದ್ದರು. ಇದು ಹ್ಯಾಕರ್​ಗಳ ಕೈವಾಡ ಎಂದೇ ಅನೇಕರು ಭಾವಿಸಿದ್ದರು. ಆದರೀದ ಅಸಲಿ ವಿಚಾರ ಏನು ಎಂದು ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ರಿವೀಲ್ ಮಾಡಿದ್ದಾರೆ. 

ರಶ್ಮಿಕಾ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖಾಸಗಿ ಕಂಪನಿಯೊಂದರ ಜೊತೆ ಕೈ ಜೋಡಿಸಿರುವ ರಶ್ಮಿಕಾ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಮೂಡುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಸರನ್ನು ಉಲ್ಟಾ ಮಾಡಿದ್ದಾರೆ.  'ಓದಲು ಬಾರದ ಹೆಣ್ಣು ಮಕ್ಕಳಿಗೆ ಇದೇ ರೀತಿ ಅನಿಸುತ್ತದೆ’ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಶೇರ್ ಮಾಡಿರುವ ರಶ್ಮಿಕಾ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದ್ದಾರೆ. 

ಚಿಕ್ಕವಯಸ್ಸಿನ  ಫೋಟೋ ಶೇರ್ ಮಾಡಿ, 'ನಾನು ಕೂಡ ದೊಡ್ಡ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗಿ. ನನ್ನ ಕಲಿಕೆಗಳು, ಅವಕಾಶಗಳು ಮತ್ತು ನನ್ನ ಪ್ರಯತ್ನ ಒಟ್ಟಿಗೆ ಸೇರಿಕೊಂಡು ಇಂದು ನಾನು ಇರುವಲ್ಲಿಗೆ  ಬರಲು ಕಾರಣವಾಗಿದೆ. ಒಂದು ಹೆಣ್ಣು ಮಗುವಿಗೆ ಶಾಲೆಗೆ ಹೋಗಿ ಕಲಿಯುವ ಧೈರ್ಯ ಮತ್ತು ಅವಕಾಶ ಬಂದಾಗ ಅದು ಮುಖ್ಯವಾಗಿದೆ. ಅವಳು ಬದಲಾವಣೆಯನ್ನು ಸೃಷ್ಟಿಸುತ್ತಾಳೆ, ಅನೇಕರಿಗೆ ಸ್ಫೂರ್ತಿಯಾಗುತ್ತಾಳೆ' ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಕಾಮೆಂಟ್ ಭೇಷ್ ಎನ್ನುತ್ತಿದ್ದಾರೆ. 

ಅದು ಅವರಿಗೆ ಬಿಟ್ಟಿದ್ದು, ವೈಯಕ್ತಿಕ ವಿಚಾರವನ್ನ ಕ್ಯಾಮರಾ ಮುಂದೆ ಹೇಳಲು ಆಗಲ್ಲ; ಬ್ಯಾನ್‌ಗೆ ರಶ್ಮಿಕಾ ರಿಯಾಕ್ಷನ್

ರಶ್ಮಿಕಾ ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಅಂದಹಾಗೆ ರಶ್ಮಿಕಾ ಹೆಚ್ಚಾಗಿ ಟ್ರೋಲ್ ಗಳಿಂದನೇ ಸದ್ದು ಮಾಡುತ್ತಿದ್ದಾರೆ. ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಬಳಿಕ ತನ್ನ ಮೊದಲ ನಿರ್ಮಾಣ ಸಂಸ್ಥೆ ಹೆಸರು ಹೇಳದೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಕರ್ನಾಟಕದಲ್ಲಿ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇನ್ನುವ ಒತ್ತಾಯ ಕೂಡ ಕೇಳಿಬಂದಿತ್ತು. ಹೀಗೆ ಅನೇಕ ವಿಚಾರಗಳಿಗೆ ರಶ್ಮಿಕಾ ಸುದ್ದಿಯಲ್ಲಿದ್ದರು.


ಹತ್ತಿದ ಮೆಟ್ಟಿಲು ಮರೀಬಾರ್ದು, ಒದ್ದು ಹೋದರೆ ಏರಲು ಅವಕಾಶವಿಲ್ಲ: ರಶ್ಮಿಕಾಗೆ ಪ್ರಮೋದ್ ಶೆಟ್ಟಿ ಟಾಂಗ್

ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾರೆ ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ನಟ ವಿಜಯ್ ಜೊತೆ ವಾರಿಸು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಹಾಡು ರಿಲೀಸ್ ಆಗಿದೆ. ತೆಲುಗಿನಲ್ಲಿ ಪುಷ್ಪ-2 ಹಾಗೂ ಹಿಂದಿಯಲ್ಲಿ ಅಭಿಷೇಕ್ ಬಚ್ಚನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಹಿಂದಿಯಲ್ಲಿ ರಶ್ಮಿಕಾ ನಟನೆಯ ಮೊದಲ ಸಿನಿಮಾ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಮಿಷನ್ ಮಜ್ನು ಸಿನಿಮಾ ಮೂಲಕ ಒಟಿಟಿಯಲ್ಲಿ ಬರಲು ಸಜ್ಜಾಗಿದ್ದಾರೆ ರಶ್ಮಿಕಾ. 


 

Follow Us:
Download App:
  • android
  • ios