Asianet Suvarna News Asianet Suvarna News

ಅದು ಅವರಿಗೆ ಬಿಟ್ಟಿದ್ದು, ವೈಯಕ್ತಿಕ ವಿಚಾರವನ್ನ ಕ್ಯಾಮರಾ ಮುಂದೆ ಹೇಳಲು ಆಗಲ್ಲ; ಬ್ಯಾನ್‌ಗೆ ರಶ್ಮಿಕಾ ರಿಯಾಕ್ಷನ್

ನಟಿ ರಶ್ಮಿಕಾ ಮಂದಣ್ಣ ಬ್ಯಾನ್ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಮಾತು ಕೇಳಿಬಂದಿತ್ತು. 

Rashmika Mandanna finally breaks Silence on facing ban from Kannada film industry sgk
Author
First Published Dec 9, 2022, 12:03 PM IST

ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗನ ದಿನಗಳಲ್ಲಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಆಂಗ್ಲ ಮಾಧ್ಯಮದ ಸಂದರ್ಶನವೊಂದರಲ್ಲಿ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ರಶ್ಮಿಕಾ ಅವರ ಅಹಂಕಾರದ ವರ್ತನೆ ಕನ್ನಡಿಗರನ್ನು ಕೆರಳಿಸಿತ್ತು. ಕನ್ನಡ ಸಿನಿಮಾರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಕೇಳಿ ಬಂದಿದೆ. ರಶ್ಮಿಕಾ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು, ಬಾಯ್ಕಟ್ ರಶ್ಮಿಕಾ ಸಿನಿಮಾ ಎಂದು ಟ್ರೆಂಡ್ ಮಾಡಲಾಗಿತ್ತು. ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಮೊದಲ ಬಾರಿಗೆ ರಶ್ಮಿಕಾ ಬ್ಯಾನ್ ಮತ್ತು ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ. 

ತೆಲುಗು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ರಶ್ಮಿಕಾ, 'ನಾನು ಅವರನ್ನು ತುಂಬಾ ಇಷ್ಟ ಪಡುತ್ತೀನಿ' ಎಂದು ಹೇಳಿದ್ದಾರೆ. 'ನಾನು ಅವರನ್ನು ತುಂಬಾ ಇಷ್ಟ ಪಡುತ್ತೀನಿ. ಬೇರೆಯದ್ದು ನನಗೆ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿದ್ದು' ಎಂದಿದ್ದಾರೆ. ಇನ್ನು ಕಾಂತಾರ ಸಿನಿಮಾ ನೋಡಿಲ್ಲ ಎಂದು ಟ್ರೋಲ್ ಆದ ಬಗ್ಗೆಯೂ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.  'ನಾನು ಸಂದರ್ಶ ಕೊಡುವಾಗ ಕಾಂತಾರ ರಿಲೀಸ್ ಆಗಿ ಎರಡೂ ಮೂರು ದಿನ ಆಗಿತ್ತು. ಆಗ ನಾನು ನೋಡಿರಲಿಲ್ಲ. ನಂತರ ಸಿನಿಮಾ ನೋಡಿ ಟೀಂಗೆ ಮೆಸೇಜ್ ಹಾಕಿದ್ದೆ. ಆ ಕಡೆಯಿಂದನೂ ಧನ್ಯವಾದ ಎಂದು ಪ್ರತಿಕ್ರಿಯೆ ಬಂದಿತ್ತು. ಒಳಗಡೆ ಏನಾಗ್ತಿದೆ ಎಂದು ಈ  ಪ್ರಪಂಚಕ್ಕೆ ಗೊತ್ತಿಲ್ಲ. ಇಲ್ಲಿ ಏನಾಗಿದೆ ಎನ್ನುವುದು ದೇವರಿಗೆ ಗೊತ್ತು. ನಾನು ಎಲ್ಲಾ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಮುಂದೆ ಬಂದು ಹೇಳಲು ಸಾಧ್ಯವಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಜನ ಏನು ಹೇಳುತ್ತಾರೋ ಅದು ಮ್ಯಾಟರ್ ಆಗಲ್ಲ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದ್ರೆ ನಾವು ಅದರ ಬಗ್ಗೆ ಗಮನ ಕೊಡಬಹುದು. ಬ್ಯಾನ್ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.      

ನ್ಯಾಷನಲ್ ಕ್ರಶ್‌ಗೆ ಹಿನ್ನೆಡೆ: 'ರಶ್ಮಿಕಾ'ರನ್ನು ವಜಾ ಮಾಡಿದ ಆಭರಣ ಕಂಪನಿ

ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಇತ್ತೀಚಿಗಷ್ಟೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಹೆಸರು ಹೇಳದೆ ಸನ್ನೆ ಮಾಡಿದ್ದರು. ಸನ್ನೆ ಮೂಲಕ ಈ ಪ್ರೊಡಕ್ಷನ್ ಹೌಸ್ ನಿಂದ ಕಾಲ್ ಬಂದಿತ್ತು. ನಾನು ಸಿನಿಮಾ ಮಾಡಲು ಒಪ್ಪಿಕೊಂಡಿರಲಿಲ್ಲ, ಬಳಿಕ ಒಪ್ಪಿಕೊಂಡೆ' ಎಂದು ಹೇಳಿದರು. ರಶ್ಮಿಕಾ ಹೇಳಕೆ ಕನ್ನಡಿಗರನ್ನು ಕೆರಳಿಸಿತ್ತು. ತನ್ನನ್ನು ಬೆಳೆಸಿದ ಸಂಸ್ಥೆಗೆ ರಶ್ಮಿಕಾ ಅವಮಾನ ಮಾಡಿದ್ದಾರೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದರು. ಹತ್ತಿದ ಏಣಿಯನ್ನು ಒದ್ದ ರಶ್ಮಿಕಾ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಬಾರದು, ಬ್ಯಾನ್ ಮಾಡಬೇಕೆಂದು ಒತ್ತಾಯ ಕೇಳಿಬಂದಿತ್ತು. 

ದಳಪತಿ ವಿಜಯ್, ರಶ್ಮಿಕಾ ಮಂದಣ್ಣ 'ವಾರಿಸು' ತೆಲುಗು ಆವೃತ್ತಿ ಹಾಡು ಬಿಡುಗಡೆ!

ರಶ್ಮಿಕಾ ಸದ್ಯ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಅನೇಕ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ. ಈಗಾಗಲೇ ರಶ್ಮಿಕಾ ಹಿಂದಿಯಲ್ಲಿ ಗುಡ್ ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಾಗಾಗಿ ಮುಂದಿನ ಸಿನಿಮಾನಿಗಳ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 


 

Follow Us:
Download App:
  • android
  • ios