ಮತ್ತೊಬ್ಬ ತೆಲುಗು ಸ್ಟಾರ್ ಜತೆ ತೆರೆ ಮೇಲೆ ಮಿಂಚಲಿರುವ ರಶ್ಮಿಕಾ ಮಂದಣ್ಣ

ನಿರ್ದೇಶಕ ಗೋಪಿಚಂದ್ ಮಲಿನೇನಿ ಮುಂಬರುವ ಚಿತ್ರಕ್ಕಾಗಿ ರವಿ ತೇಜ-ರಶ್ಮಿಕಾ ಜೋಡಿಯನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ರಶ್ಮಿಕಾ ನಟಿಸಲಿರುವ ಮುಂದಿನ ತೆಲುಗು ಚಿತ್ರ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ರಶ್ಮಿಕಾ-ರವಿ ತೇಜ ಜೋಡಿ  ಜತೆಯಾಗಿ ನಟಿಸುವ ಮೂಲಕ ಅವರಿಬ್ಬರ ಅಭಿಮಾನಿ ಬಳಗ ಮತ್ತಷ್ಟು ಖುಷಿ ಅನುಭವಿಸಲಿದೆ.

Rashmika Mandanna and Ravi Teja teaming up for Gopichand Malineni project

ಕರ್ನಾಟಕದ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಗೂ ತೆಲುಗು ಚಿತ್ರಗಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ. ಅಲ್ಲು ಅರ್ಜುನ್ ಜತೆಗೆ ತೆಲುಗಿನ 'ಪುಷ್ಪ-2' ಚಿತ್ರದ ಶೂಟಿಂಗ್‌ ನಲ್ಲಿ ಸದ್ಯ ತೊಡಗಿಸಿಕೊಂಡಿದ್ದಾರೆ ರಶ್ಮಿಕಾ. ಬಳಿಕ ತೆಲುಗು ಸ್ಟಾರ್ ರವಿ ತೇಜ ಜತೆಗಿನ ಚಿತ್ರವೊಂದಕ್ಕೆ ನಾಯಕಿಯಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ ಎಂಬ ನ್ಯೂಸ್ ಸದ್ಯ ಕಾಲಿವುಡ್ ಅಂಗಳದಿಂದ ಕೇಳಿ ಬಂದಿದೆ. ಸುದ್ದಿ ನಿಜವಾದರೆ ರಶ್ಮಿಕಾ ಇದೇ ಮೊದಲ ಬಾರಿಗೆ ರವಿ ತೇಜಾ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. 

ನಿರ್ದೇಶಕ ಗೋಪಿಚಂದ್ ಮಲಿನೇನಿ ಮುಂಬರುವ ಚಿತ್ರಕ್ಕಾಗಿ ರವಿ ತೇಜ-ರಶ್ಮಿಕಾ ಜೋಡಿಯನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ರಶ್ಮಿಕಾ ನಟಿಸಲಿರುವ ಮುಂದಿನ ತೆಲುಗು ಚಿತ್ರ ಯಾವುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ತೆಲುಗು ಚಿತ್ರರಂಗದ ಮೂಲಕವೇ ರಶ್ಮಿಕಾ ಅತ್ಯಂತ ಹೆಚ್ಚು ಪ್ರಖ್ಯಾತಿ ಪಡೆದಿರುವ ನಟಿ ಎಂಬುದು ಸಾರ್ವಕಾಲಿಕ ಸತ್ಯ. ಮೊದಲು ರಶ್ಮಿಕಾ ನಟಿಸಿದ್ದು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ. ಅದು ಸ್ಯಾಂಡಲ್‌ವುಡ್‌ನ ಸೂಪರ್ ಹಿಟ್ ಚಿತ್ರವೂ ಹೌದು. ಬಳಿಕ ರಶ್ಮಿಕಾ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿ ಅಲ್ಲಿಯೇ ಹೆಚ್ಚು ಕ್ಲಿಕ್ ಆದರು. 

ನಾಗ ಚೈತನ್ಯ ಮುಂದಿನ ಚಿತ್ರಕ್ಕೆ ಬಲಗಾಲಿಟ್ಟು ಬಂದ 'ಲವ್ ಸ್ಟೋರಿ' ಬೆಡಗಿ!

ಆದರೆ ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಜತೆ ನಟಿಸಿದ 'ಗೀತ ಗೋವಿಂದಂ' ಚಿತ್ರ ಸೂಪರ್ ಹಿಟ್ ಆಗುವ ಮೂಲಕ ರಶ್ಮಿಕಾ ತೆಲುಗಿನಲ್ಲಿ ಬಹುಬೇಡಿಕೆ ನಟಿಯಾಗಿ ಬದಲಾದರು. ಬಳಿಕ ಅವರು ಕನ್ನಡದ ಯಾವುದೇ ಚಿತ್ರಕ್ಕೆ ಲಭ್ಯವಾಗುವುದು ಬಹುತೇಕ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು. ಈಗಂತೂ ರಶ್ಮಿಕಾ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದ ಕಣ್ಮಣಿ ಎಂಬಷ್ಟು ಖ್ಯಾತಿ ಹೊಂದಿದ್ದಾರೆ. ಇದೀಗ ಮತ್ತೊಂದು ತೆಲುಗು ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ನಟಿ ತಾವಿನ್ನೂ ಬೇಡಿಕೆ ಕಳೆದುಕೊಂಡಿಲ್ಲ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಿದ್ದಾರೆ. 

ಭಾರತ ಅಥವಾ ಇಂಡಿಯಾ ಚರ್ಚೆ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ಬಾಯ್ಬಿಟ್ಟು ಹೇಳಿದ್ದೇನು?

ನಟ ರವಿ ತೇಜಾ ಕೂಡ ತೆಲುಗಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಮತ್ತು ಮಾರುಕಟ್ಟೆ ಹೊಂದಿದ್ದಾರೆ. ರಶ್ಮಿಕಾ-ರವಿ ತೇಜ ಜೋಡಿ  ಜತೆಯಾಗಿ ನಟಿಸುವ ಮೂಲಕ ಅವರಿಬ್ಬರ ಅಭಿಮಾನಿ ಬಳಗ ಮತ್ತಷ್ಟು ಖುಷಿ ಅನುಭವಿಸಲಿದೆ. ಒಟ್ಟಿನಲ್ಲಿ, ರಶ್ಮಿಕಾ ಬೇಡಿಕೆ ಕಮ್ಮಿಯಾಗುತ್ತಿದೆ ಎನ್ನುವ ಹೊತ್ತಲ್ಲೇ, ಮತ್ತೆ ಮತ್ತೆ  ಹೊಸ ಚಿತ್ರಗಳಿಗೆ ಸಹಿ ಮಾಡುವ ಮೂಲಕ ಅವರು ತಮ್ಮ ಬಗ್ಗೆ ಹಬ್ಬಿಸಲಾಗುತ್ತಿರುವ ಸುದ್ದಿ ಸುಳ್ಳು ಎಂಬುದನ್ನು ನಿರೂಪಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios