Deepika Padukone ರಣವೀರ್ ಸಿಂಗ್ ದಾಂಪತ್ಯದಲ್ಲಿ ಬಿರುಕು? ಸತ್ಯ ಬಿಚ್ಚಿಟ ನಟ
ಮದುವೆಯಾದ 4 ವರ್ಷಕ್ಕೆ ಬಿರುಕು? ಭಿನ್ನಾಭಿಪ್ರಾಯದ ಬಗ್ಗೆ ಸ್ಪಷ್ಟನೆ ಕೊಟ್ಟ ರಣವೀರ್ ಸಿಂಗ್.....
ಬಾಲಿವುಡ್ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಫನ್ನಿ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವೈವಾಹಿಕ ಜೀವನಕ್ಕೆ ಕಾಲಿಟ್ಟು 4 ವರ್ಷ ಕಳೆದಿದೆ. ಸುಮಾರು 6 ವರ್ಷಗಳ ಕಾಲ ಪ್ರೀತಿಸಿ ಮೀಡಿಯಾದಿಂದ ದೂರ ಉಳಿಯಬೇಕು ಎಂದು ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿರುವ ಈ ಜೋಡಿ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ. ಭಿನ್ನಾಭಿಪ್ರಾಯ ಮೂಡಲು ಕಾರಣವೇನು? ಅಷ್ಟಕ್ಕೂ ಏನಾಗಿದೆ?
ಏನಿದು ಮ್ಯಾಟರ್?
'ಬ್ರೇಕಿಂಗ್!! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಏನೂ ಸರಿ ಇಲ್ಲ' ಎನ್ನುವ ಟ್ವೀಟ್ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಆತಂಕ ಶುರುವಾಯ್ತು. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ರಣವೀರ್ ಸಿಂಗ್ ಸಿಕ್ಕಾಗ ಮಾಧ್ಯಮ ಸ್ನೇಹಿತರು ವದಂತಿ ಬಗ್ಗೆ ಸ್ಪಷ್ಟನೆ ಪಡೆದುಕೊಂಡಿದ್ದಾರೆ. 'Touchwood...ನಾವು ಭೇಟಿ ಆಗಿದ್ದು 2012ರಲ್ಲಿ....ಈಗ 2022..ಅಂದ್ರೆ 10 ವರ್ಷಗಳ ನನ್ನ ದೀಪಿಕಾ ಪ್ರೀತಿಗೆ' ಎಂದು ರಣವೀರ್ ಹೇಳಿದ್ದಾರೆ.
ಈ ಸಮಯದಲ್ಲಿ ದೀಪಿಕಾ ಜೊತೆ ಸಿನಿಮಾ ಮಾಡ್ತೀರಾ ಎಂದು ಮತ್ತೊಂದು ಪ್ರಶ್ನೆ ಕೇಳಿದಾಗ 'ದೀಪಿಕಾ ಮೇಲೆ ನನಗೆ ಅಪಾರವಾದ ಗೌರವವಿದೆ. ಆಕೆಯನ್ನು ತುಂಬಾನೇ ಅಡ್ಮೈರ್ ಮಾಡುವ ವ್ಯಕ್ತಿ ನಾನು. ಸಿನಿಮಾ ಮಾತ್ರವಲ್ಲ ಪರ್ಸನಲ್ ಲೈಫ್‌ನಲ್ಲೂ ಆಕೆಯಿಂದ ತುಂಬಾ ವಿಚಾರಗಳು ಕಲಿತಿರುವೆ. ನಮ್ಮ ಮೇಲೆ ತುಂಬಾ ತುಂಬಾ ಪ್ರೀತಿ ತೋರಿಸುವ ನಿಮಗೆ ಒಂದು ಸ್ಪೆಷಲ್ ಗುಡ್ ನ್ಯೂಸ್ ಇದೆ..ಅದುವೇ ನಮ್ಮನ್ನು ಮತ್ತೆ ಪರದೆ ಮೇಲೆ ನೀವು ಒಟ್ಟಿಗೆ ನೋಡಬಹುದು. ನನ್ನ ಜೀವನದಲ್ಲಿ ಸಿಕ್ಕಿರುವ ಬೆಸ್ಟ್ ವ್ಯಕ್ತಿ ದೀಪಿಕಾ' ಎಂದು ರಣವೀರ್ ಹೇಳಿದ್ದರು.
ಓವರ್ ಸೈಜ್ ಟೀ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ ದೀಪಿಕಾ ಪಡುಕೋಣೆ!
ರಣವೀರ್ ಸಿಂಗ್ ಮಾತುಗಳನ್ನು ಕೇಳಿದ ಮೇಲೆ ಅಭಿಮಾನಿಗಳಿಗೆ ಕೊಂಚ ಸಮಾಧಾನವಾಗಿದೆ.
ದೀಪಿಕಾ ಪಡುಕೋಣೆ ಅಸ್ವಸ್ಥ, ಮುಂಬೈ ಆಸ್ಪತ್ರೆಗೆ ದಾಖಲು:
ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾದ ದೀಪಿಕಾ ಪಡುಕೋಣೆ ಮುಂಬೈನ ಬ್ರೀಚ್ ಕ್ಯಾಂಡಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ತಡ ರಾತ್ರಿ ದೀಪಿಕಾ ಪಡುಕೋಣೆ ಅಸ್ವಸ್ಥರಾಗಿದ್ದಾರೆ. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಾಗಿತ್ತು. ವೈದ್ಯರ ತಂಡ ಪಡುಕೋಣೆಯನ್ನು ತಪಾಸಣೆ ಮಾಡಿದ್ದಾರೆ. ಹಲವು ಪರೀಕ್ಷೆಗಳನ್ನು ಮಾಡಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಿಂಕ್‌ವಿಲ್ಲ ಮಾಧ್ಯಮ ವರದಿ ಮಾಡಿದೆ. ಆದರೆ ದೀಪಿಕಾ ಪಡುಕೋಣೆ ತಂಡ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ದೀಪಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಕೆಲ ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಶೀಘ್ರ ಗುಣಮುಖಕ್ಕಾಗಿ ಪ್ರಾರ್ಥಿಸಿದ್ದಾರೆ. ಆದರೆ ಯಾರೂ ಆತಂಕಪಡುವ ಅಗತ್ಯವಿಲ್ಲ. ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಸುಧಾರಣೆಯಾಗಿದ ಎಂದು ವೈದ್ಯರು ಹೇಳಿದ್ದಾರೆ.
ಶಾರುಖ್ ಮನೆ ಪಕ್ಕದಲ್ಲಿ ಹೊಸ ಮನೆ ಖರೀದಿಸಿದ ರಣ್ವೀರ್-ದೀಪಿಕಾ; ಬೆಲೆ ಕೇಳಿದ್ರೆ ಹೌಹಾರ್ತೀರಾ
ಗಂಡನ ನಗ್ನ ಫೋಟೋ ಶೂಟ್ ಇಷ್ಟ:
ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ನಟಿ ಮಣಿಯರಿಗಿಂತ ತಾನೇನು ಕಮ್ಮಿ ಇಲ್ಲ ಎಂದು ಇದೇ ಮೊದಲ ಬಾರಿಗೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿದ್ದು, ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಮಾತ್ರವಲ್ಲ ಭಾರೀ ಟೀಕೆಗೆ ಗುರಿಯಾಗಿದ್ದ ನಟ ಬಳಿಕ ನೆಟ್ಟಿಗರಿಗೇ ಕ್ಲಾಸ್ ತೆಗೆದುಕೊಂಡಿದ್ದರು. ಮಾತ್ರವಲ್ಲ ಪತ್ನಿ, ನಟಿ ದೀಪಿಕಾ ಪಡುಕೋಣೆಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ ಮಾಡಿ, ನಿಮ್ಮ ಗಂಡನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಿದ್ದರು. ಇದೀಗ ಪತ್ನಿ ದೀಪಿಕಾ ಗಂಡನ ಫೋಟೋ ಶೂಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಂಡನ ಫೋಟೋಶೂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದೀಪಿಕಾ ಬೆಂಬಲ ಸೂಚಿಸಿದ್ದಾರೆ. ಫೋಟೋಗಳು ತುಂಬಾ ಚೆನ್ನಾಗಿವೆ ಎಂದಿದ್ದಾರೆ. ಈ ಮೂಲಕ ಪತಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮಾತ್ರವಲ್ಲ ಫೋಟೋಗಳು ಪಬ್ಲಿಕ್ ಆಗುವ ಮುನ್ನವೇ ಪತ್ನಿ ದೀಪಿಕಾ ನೋಡಿದ್ದರಂತೆ. ಜೊತೆಗೆ ಫೋಟೋಶೂಟ್ ನಡೆಯುವ ಬಗ್ಗೆ ಸಂಪೂರ್ಣ ಮಾಹಿತಿ, ಯೋಜನೆ, ಎಲ್ಲವೂ ದೀಪಿಕಾಗೆ ಗೊತ್ತಿತ್ತಂತೆ. ಸಂಪೂರ್ಣ ಚಿತ್ರೀಕರಣದ ರೂಪುರೇಷೆಯನ್ನು ಇಷ್ಟಪಟ್ಟಿದ್ದರಂತೆ. ಚಿತ್ರೀಕರಣ ನಡೆಯುವಾಗ ದೀಪಿಕಾ ಕೂಡ ಜೊತೆಗೆ ಇದ್ದರು ಎಂದು ವರದಿಗಳು ತಿಳಿಸಿವೆ.