1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿದ್ದು ಕ್ರಿಕೆಟ್ ಪ್ರೇಮಿಗಳು ಮರೆಯಲಾಗದ ದಿನ. ಆ ಕ್ಷಣವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಎಲ್ಲರಿಗೂ ಮತ್ತೊಮ್ಮೆ ಅವಕಾಶ ಸಿಗುತ್ತಿದೆ. 

’ಸಿಲ್ಲಿಲಲ್ಲಿ’ ಮತ್ತೊಮ್ಮೆ ನಿಮ್ಮ ಮುಂದೆ; ಕ್ಷಮೆ ಕೇಳಿದ ವಿಠ್ಠಲ್‌ ರಾವ್

ಬಾರೀ ನಿರೀಕ್ಷೆ ಮೂಡಿಸಿದ್ದ 1983 ರ ವಿಶ್ವಕಪ್ ಸಿನಿಮಾ 83 ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಪ್ರತಿಯೊಬ್ಬ ಕಲಾವಿದರೂ ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದಿದ್ದಾರೆ. ಅದರ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

 

ಕಪಿಲ್ ದೇವ್ ಪಾತ್ರದಲ್ಲಿ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಖುದ್ದು ಕಪಿಲ್ ದೇವ್ ರಣವೀರ್ ಸಿಂಗ್ ಗೆ ಟ್ರೇನಿಂಗ್ ಕೊಡುತ್ತಿದ್ದಾರೆ. ಸುನೀಲ್ ಗವಾಸ್ಕರ್ ಪಾತ್ರದಲ್ಲಿ ತಹೀರ್ ರಾಜ್ ಭಾಸಿನ್ ಕಾಣಿಸಿಕೊಳ್ಳುತ್ತಿದ್ದಾರೆ. 

ಖ್ಯಾತ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಪಾತ್ರವನ್ನು ಸಾಹಿಲ್ ಖಟ್ಟರ್, ಕೃಷ್ಣಮಚಾರಿ ಶ್ರೀಕಾಂತ್ ಪಾತ್ರವನ್ನು ಜೀವಾ, ದಿಲೀಪ್ ವೆಂಗಸರ್ಕರ್ ಪಾತ್ರವನ್ನು ಮರಾಠಿ ನಟ ಆದಿನಾಥ್ ಕೊಠಾರೋ ನಿಭಾಯಿಸುತ್ತಿದ್ದಾರೆ.  ವಿಶೇಷ ಎಂದರೆ ಎಲ್ಲಾ ಕಲಾವಿದರಿಗೆ ಆಯಾ ಆಟಗಾರರೇ ಟ್ರೇನಿಂಗ್ ನೀಡುತ್ತಿದ್ದಾರೆ. 

'ಸುಮ್ಮನೆ' ಯೂಟ್ಯೂಬ್‌ನಲ್ಲಿ ಟ್ರೆಂಡಾದ ಜೂನಿಯರ್ ಅಮರ್!

ಬಾಲಿವುಡ್ ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಏಕ್ತಾ ಟೈಗರ್, ಭಜರಂಗಿ ಬಾಯ್ ಜಾನ್ ನಮತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಬೀರ್ ಖಾನ್ ಇದೀಗ 1983 ರ ವಿಶ್ವಕಪ್ ನ್ನು ಮತ್ತೊಮ್ಮೆ ತೆರೆ ಮೇಲೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ಏಪ್ರಿಲ್ 10, 2020 ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.

ಫಾರಿನ್‌ನಲ್ಲಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ವೈರಲ್ 

ಕ್ರಿಕೆಟ್‌ನಲ್ಲಿ ಭಾರತ ಅಂಬೆಗಾಲಿಡುತ್ತಿದ್ದ ಕಾಲ. ಮೊದಲೆರೆಡು ವಿಶ್ವಕಪ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ವೆಸ್ಟ್ ಇಂಡೀಸ್ ಮಾತ್ರವಲ್ಲ, ಇಡೀ ವಿಶ್ವದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ 1983ರ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಈ ವಿಶ್ವಕಪ್ ಗೆಲುವು ಭಾರತದ ಕ್ರಿಕೆಟ್‌ಗೆ ಹೊಸ ದಿಕ್ಕು ನೀಡಿತು. ಕ್ರಿಕೆಟ್ ರಾಷ್ಟ್ರಗಳಲ್ಲಿ ಭಾರತ ಬಲಿಷ್ಠ ತಂಡವಾಗಿ ರೂಪುಗೊಂಡಿತು. ಇದಾದ ಬಳಿಕ 2011ರಲಲ್ಲಿ ಎಂ.ಎಸ್.ಧೋನಿ ನೇತತ್ವದ ಟೀಂ ಇಂಡಿಯಾ 2ನೇ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.