’ಸಿಲ್ಲಿಲಲ್ಲಿ’ ಮತ್ತೊಮ್ಮೆ ನಿಮ್ಮ ಮುಂದೆ; ಕ್ಷಮೆ ಕೇಳಿದ ವಿಠ್ಠಲ್ ರಾವ್
ಕನ್ನಡ ಧಾರಾವಾಹಿ ಲೋಕದಲ್ಲಿ ಸಿಲ್ಲಿಲಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿತ್ತು. ಈ ಧಾರಾವಾಹಿ ಮತ್ತೊಮ್ಮೆ ನಿಮ್ಮ ಮುಂದೆ ಬರಲಿದೆ.
ಕನ್ನಡದ ಜನಪ್ರಿಯ ಧಾರಾವಾಹಿ ’ಸಿಲ್ಲಿ ಲಲ್ಲಿ’ ಪ್ರೇಕ್ಷಕರ ನೆಚ್ಚಿನ ಮನರಂಜನಾ ಧಾರಾವಾಗಿಯಾಗಿತ್ತು. ಎಲ್ಲರ ಮನೆಯಲ್ಲೂ ಈ ಧಾರಾವಾಹಿಯನ್ನು ಮಿಸ್ ಮಾಡುತ್ತಿರಲಿಲ್ಲ. ಇದೀಗ ಮತ್ತೆ ಸಿಲ್ಲಿ ಲಲ್ಲಿ ನಿಮ್ಮ ಮುಂದೆ ಬರಲಿದೆ. ಈ ಧಾರಾವಾಹಿಯಲ್ಲಿ ವಿಠ್ಠಲ್ ರಾವ್ ಪಾತ್ರಧಾರಿ ರವಿಶಂಕರ್ ಗೌಡ ಎಲ್ಲರ ಪ್ರೀತಿಯ ಡಾಕ್ಟರ್ ಆಗಿದ್ರು. ಸಿಲ್ಲಿ ಲಲ್ಲಿ ಧಾರಾವಾಹಿ ಮತ್ತೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ.
ಆತ್ಮೀಯ ಗೆಳೆಯ/ ಗೆಳತಿಯರೇ,
ತುಂಬಾ ವರ್ಷಗಳಿಂದ ಸಿಲ್ಲಿ ಲಲ್ಲಿ ಮತ್ತೆ ಯಾವಾಗ ಎಂದು ಪ್ರಶ್ನೆ ಕೇಳುತ್ತಿದ್ದೀರಿ. ಇದೋ ಮತ್ತೊಮ್ಮೆ ನಿಮ್ಮ ಮುಂದೆ ಸಿಲ್ಲಿ ಲಲ್ಲಿ! ಡಾ. ವಿಠ್ಠಲ್ ರಾವ್ ಪಾತ್ರದಲ್ಲಿ ನಿಮ್ಮ ಮನಸ್ಸು ಗೆದ್ದಿದ್ದ ನಾನು ಇಲ್ಲಿಲ್ಲ. ಕ್ಷಮೆ ಇರಲಿ ಎಂದಿದ್ದಾರೆ.
— Ravishankar Gowda (@RavishankarGow5) April 20, 2019
ಈ ಧಾರಾವಾಹಿ ಪ್ರಾರಂಭ ಮಾಡಿದಾಗ ನಾವೂ ಕೂಡಾ ಹೊಸಬರೇ ಆದರೂ ಸಿಹಿ ಕಹಿ ಚಂದ್ರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದರು. ಆವತ್ತಿನ ದಿನ ಆ ಪಾತ್ರವನ್ನು ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಎಷ್ಟೋ ಬರಿ ಅವಮಾನವಾಗಿ ಕಣ್ಣೀರು ಹಾಕಿದ್ದುಂಟು. ಆದರೆ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಚಂದ್ರಣ್ಣನ ಪ್ರೋತ್ಸಾಹ ಸರಾಗವಾಗಿ ಅಭಿನಯಿಸುವಂತೆ ಹಾಗೂ ನಿಮ್ಮ ಅಭಿಮಾನ ಗಳಿಸುವಂತೆ ಮಾಡಿತ್ತು. ಇರಲಿ. ಹೊಸ ತಂಡವನ್ನು ಕಟ್ಟಿಕೊಂಡು ಚಂದ್ರಣ್ಣ ಮತ್ತೊಮ್ಮೆ ಸಿಲ್ಲಿ ಲಲ್ಲಿ ಯನ್ನು ಕಿರುತೆರೆಗೆ ಅರ್ಪಣೆ ಮಾಡುತ್ತಿದ್ದಾರೆ. ಆ ತಂಡಕ್ಕೆ ನಿಮ್ಮ ಪ್ರೋತ್ಸಾಹ ಅಗತ್ಯ. ನಾನು ಕೂಡಾ ನನ್ನ ಪಾತ್ರವನ್ನು ಹಾಗೂ ನನ್ನ ಸಹವರ್ತಿಗಳ ಪಾತ್ರವನ್ನು ಮತ್ತೊಬ್ಬರು ನಿರ್ವಹಿಸುವುದನ್ನು ನೋಡಬೇಕೆಂದು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.