'ನಾಟು ನಾಟು...'ಹಾಡು ಹೇಳಿ 'RRR' ಸಿನಿಮಾವನ್ನು ಹೊಗಳಿದ ರಣವೀರ್ ಸಿಂಗ್
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಹೊಗಳಿದ್ದಾರೆ. ನಾಟು ನಾಟು..ಹಾಡು ಹೇಳಿ ಚಿತ್ರದ ಬಗ್ಗೆ ಮಾತನಾಡಿ, ಹಾಲಿವುಡ್ ಸಿನಿಮಾಗಳ ಕಲೆಕ್ಷನ್ ಬೀಟ್ ಮಾಡಿದೆ ಎಂದಿದ್ದಾರೆ.
ಎಸ್ ಎಸ್ ರಾಜಮೌಳಿ(Rajamouli) ಸಾರಥ್ಯದಲ್ಲಿ ಬಂದ ಆರ್ ಆರ್ ಆರ್(RRR) ಸಿನಿಮಾ ಚಿತ್ರಮಂದಿರದಲ್ಲಿ ಧೂಳ್ ಎಬ್ಬಿಸುತ್ತಿದೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ರಾಜಮೌಳಿ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸಿನಿಮಾ ಗಣ್ಯರು ಸಹ ಸಿನಿಮಾ ವೀಕ್ಷಿಸಿ ಹಾಡಿ ಹೊಗಳಿದ್ದಾರೆ. ರಾಜಮೌಳಿ ದೃಶ್ಯಕಾವ್ಯ ಮೆಚ್ಚಿಕೊಂಡವರಲ್ಲಿ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಒಬ್ಬರು. ದುಬೈ ಎಕ್ಸ್ ಪೋ 2022ನಲ್ಲಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಆರ್ ಆರ್ ಆರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ರಾಜಮೌಳಿ ಅವರ ಆರ್ ಆರ್ ಆರ್ ಹಾಲಿವುಡ್ ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕುತ್ತಿದೆ ಎಂದು ಹೇಳಿದ್ದಾರೆ. 'ಆರ್ ಆರ್ ಆರ್ ಸಿನಿಮಾ ಹಾಲಿವುಡ್ ಸಿನಿಮಾಗಳ ಕಲೆಕ್ಷನ್ ಗಳನ್ನು ಹಿಂದಿಕ್ಕುತ್ತಿದೆ. ಇದು ಭಾರತೀಯ ಸಿನಿಮಾರಂಗಕ್ಕೆ ಹೆಮ್ಮೆಯ ಕ್ಷಣ' ಎಂದಿದ್ದಾರೆ.
'RRR' ಸಿನಿಮಾವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು
ರಾಜಮೌಳಿ ಸರ್ ಕಥೆ ಹೇಳುವ ರೀತಿ ನಮಗೆ ತುಂಬಾ ಇಷ್ಟವಾಗುತ್ತೆ ಎಂದಿದ್ದಾರೆ. ಜೊತೆಗೆ ಆರ್ ಆರ್ ಆರ್ ಸಿನಿಮಾದ ಸೂಪರ್ ಹಿಟ್ ನಾಟು ನಾಟು...ಹಾಡನ್ನು ಹೇಳಿ ಖುಷಿ ಪಟ್ಟಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಬಗ್ಗೆ ಈ ಸಲ್ಮಾನ್ ಖಾನ್ ಸಹ ಪ್ರತಿಕ್ರಿಯೆ ನೀಡಿ, ಬಾಲಿವುಡ್ ಸಿನಿಮಾಗಳು ದಕ್ಷಿಣದಲ್ಲಿ ಯಾಕೆ ಓಡಲ್ಲ ಎನ್ನುವುದು ಆಶ್ವರ್ಯವಾಗುತ್ತೆ ಎಂದಿದ್ದರು. ರಾಜಮೌಳಿ ಅವರ ಬಾಹುಬಲಿ ಸಿನಿಮಾ ಕೂಡ ದಾಖಲೆ ಗಳಿಕೆ ಮಾಡಿ ಗಮನ ಸೆಳೆದಿತ್ತು. ಆರ್ ಆರ್ ಆರ್ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿತ್ತು. ಅದರಂತೆ ರಾಜಮೌಳಿ ಅಭಿಮಾನಿಗಳ ನಿರೀಕ್ಷೆಗೂ ಮೀರಿ ಆರ್ ಆರ್ ಆರ್ ಮಾಡಿ ಸಿನಿಮಾ ಮಾಡಿ ಗೆದ್ದಿದ್ದಾರೆ.
RRR ಅಂದರೇನು? ಸಿನಿಮಾಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು
ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.