'RRR' ಸಿನಿಮಾವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು
ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್ ಆರ್ ಆರ್ ಸಿನಿಮಾವನ್ನು ಟಾಲಿವುಡ್ ನಟರಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಹಾಡಿ ಹೊಗಳಿದ್ದಾರೆ. ಇಬ್ಬರು ಚಿತ್ರದ ವಿಮರ್ಶೆ ಮಾಡಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿಬಂದ ಆರ್ ಆರ್ ಆರ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆರ್ ಆರ್ ಆರ್ ನೋಡಿ ಪ್ರೇಕ್ಷಕರು ಮತ್ತು ಗಣ್ಯರು ಹಾಡಿ ಹೊಗಳುತ್ತಿದ್ದಾರೆ. ಜೂ ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾವನ್ನು ಟಾಲಿವುಡ್ ಸ್ಟಾರ್ ನಟರು ಸಹ ಹಾಡಿಹೊಗಳಿದ್ದಾರೆ. ಚಿತ್ರದ ಬಗ್ಗೆ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಇಬ್ಬರು ವಿಮರ್ಶೆ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಮೊದಲ ದಿನದ ಗಳಿಕೆಯಲ್ಲಿ ದಾಖಲೆ ನಿರ್ಮಿಸಿರುವ ಆರ್ ಆರ್ ಆರ್ ಚಿತ್ರವನ್ನು ಸ್ಟಾರ್ ಕಲಾವಿದರು ಸಹ ಹೊಗಳುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಟಾಲಿವುಡ್ ಸ್ಟಾರ್ ನಟರಾದ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಆರ್ ಆರ್ ಆರ್ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅಲ್ಲು ಅರ್ಜುನ್,' ಆರ್ ಆರ್ ಆರ್ ಇಡೀ ತಂಡಕ್ಕೆ ಹೃದಯ ಪೂರ್ವಕ ಅಭಿನೆಂದನೆಗಳು. ಎಂತಹ ಅದ್ಭುತ ಸಿನಿಮಾ. ಈ ಅದ್ಭುತ ಸೃಷ್ಟಿಸಿದ ರಾಜಮೌಳಿ ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ನನ್ನ ಸಹೋದರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಅವರ ಬಗ್ಗೆ ಹೆಮ್ಮೆ ತುಂಬಾ ಎನಿಸುತ್ತದೆ' ಎಂದಿದ್ದಾರೆ.
'ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರಿಗೆ ನನ್ನ ವಿಶೇಷ ಶುಭಾಶಯಗಳು. ಭಾರತೀಯ ಸಿನಿಮಾವನ್ನು ಹೆಮ್ಮೆ ಪಡುವಂತೆ ಮಾಡಿದ ಇಡೀ ತಂಡಕ್ಕೆ ಧನ್ಯವಾದಗಳು' ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗಕ್ಕೂ ಧನ್ಯವಾದ ತಿಳಿಸಿದ್ದಾರೆ.&
;
RRR ಅಂದರೇನು? ಸಿನಿಮಾಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್ ವಿಷಯಗಳು
ಇನ್ನು ನಟ ಮಹೇಶ್ ಬಾಬು ಸಹ ಆರ್ ಆರ್ ಆರ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ. 'ಇಂತಹ ದೊಡ್ಡ ಸಿನಿಮಾವನ್ನು ನೀಡಿದ ಇಡೀ ಆರ್ ಆರ್ ಆರ್ ತಂಡಕ್ಕೆ ಹ್ಯಾಟ್ಸ್ ಆಫ್. ತುಂಬಾ ಹೆಮ್ಮೆ ಎನಿಸುತ್ತೆ. ಅಭಿನಂದನೆಗಳು. ಜೂ ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದೀರಿ. ನಾಟು ನಾಟು ಹಾಡು ಅದ್ಭುತವಾಗಿದೆ' ಎಂದು ಹೇಳಿದ್ದಾರೆ.&
;
RRR: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ.!
ರಾಜಮೌಳಿ ಸಾರಥ್ಯದಲ್ಲಿ ಬಂದ ಆರ್ ಆರ್ ಆರ್ ಸಿನಿಮಾದ ಒಟ್ಟಿ ಕಲೆಕ್ಷನ್ ಸುಮಾರು 257 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಕರ್ನಾಟಕದಲ್ಲೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. 16.48 ಕೋಟಿ ರೂಪಾಯಿ ಸಿನಿಮಾ ಗಳಿಸಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಿನಿಮಾ 120 ಕೋಟಿ ರೂ.ಕಲೆಕ್ಷನ್ ಮಾಡಿದ್ರೆ, ಹಿಂದಿಯಲ್ಲಿ 25 ಕೋಟಿ ಗಳಿಸಿದೆ. ಕೇರಳದರಲ್ಲಿ 17 ವಿದೇಶದಲ್ಲಿ 78 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಎಲ್ಲಾ ಕಡೆಯಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾರಾಂತ್ಯದಲ್ಲಿ ಸಿನಿಮಾ ಮತ್ತಷ್ಟು ಕೋಟಿ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.