ಕೊಂಕಣಿ ಸಮಾವೇಶದಲ್ಲಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ ವೀರ್‌ದೀಪ್ಸ್: ವಿಡಿಯೋ ವೈರಲ್
ದೀಪಿಕಾ ಕೊಂಕಣಿ ಸಮುದಾಯದವರಾಗಿದ್ದು ಕ್ಯಾಲಿಪೋರ್ನಿಯಾದಲ್ಲಿ ನಡೆದ ಕೊಂಕಣಿ ಸಮಾವೇಶದಲ್ಲಿ ಭಾಗವಹಿಸಿದ ರಣವೀರ್ ಹಾಗೂ ದೀಪಿಕಾ ವಿಶೇಷವಾಗಿ ರಣವೀರ್ ಪ್ರೇಕ್ಷಕರನ್ನು ತಮ್ಮ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದ್ದಾರೆ.
ರಣವೀರ್ ಸಿಂಗ್ ಹಾಗೂ ದೀಪೀಕಾ ಪಡುಕೋಣೆ ಬಾಲಿವುಡ್‌ನ ಮೋಸ್ಟ್ ಫೇವರೇಟ್ ಕಪಲ್ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಬಿಡುವಿಲ್ಲದ ಕಮೀಟ್‌ಮೆಂಟ್‌ಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಅಮೆರಿಕಾಗೆ ತೆರಳಿರುವ ಜೋಡಿ ಅಲ್ಲಿ ಜೊತೆಯಾಗಿ ಸ್ವಲ್ಪ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ. ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಸಮಯ ಕಳೆಯುತ್ತಿರುವ ರಣವೀರ್ ಸಿಂಗ್, ತಮ್ಮ ಪತ್ನಿಯೊಂದಿಗೆ ಕೊಂಕಣಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ದೀಪಿಕಾ ಕೊಂಕಣಿ ಸಮುದಾಯದವರಾಗಿದ್ದು ಕ್ಯಾಲಿಪೋರ್ನಿಯಾದಲ್ಲಿ ನಡೆದ ಕೊಂಕಣಿ ಸಮಾವೇಶದಲ್ಲಿ ಭಾಗವಹಿಸಿದ ರಣವೀರ್ ಹಾಗೂ ದೀಪಿಕಾ ವಿಶೇಷವಾಗಿ ರಣವೀರ್ ಪ್ರೇಕ್ಷಕರನ್ನು ತಮ್ಮ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದ್ದಾರೆ.
ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಅವರ ಜೋಡಿ ಮದುವೆ 'ಟು ಸ್ಟೇಟ್' ಸಿನಿಮಾ ಕತೆಯಂತಿದೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಏಕೆಂದರೆ ಇತ್ತ ನಟ ರಣ್‌ವೀರ್ ಸಿಂಧಿ (Sindhi) ಕುಟುಂಬಕ್ಕೆ ಸೇರಿದವರಾಗಿದ್ದರೆ ದೀಪಿಕಾ ಕೊಂಕಣಿ ಸಮುದಾಯಕ್ಕೆ ಸೇರಿದವರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೊಂಕಣಿ ಸಮಾವೇಶದಲ್ಲಿ ಮಾತನಾಡಿದ ಈ ಜೋಡಿ ಮಕ್ಕಳನ್ನು ಹೊಂದುವ ಬಗ್ಗೆ ಮತ್ತು ಅವರಿಗೆ ತಮ್ಮ ಮಾತೃಭಾಷೆಯನ್ನು ಕಲಿಸುವ ಬಗ್ಗೆ ಪ್ರಾಮಾಣಿಕವಾಗಿ ಹೇಳಿದರು. ಈ ವೇಳೆ ರಣವೀರ್ ಅವರು ತಾನು ಕೊಂಕಣಿ (Konkani Language)ಕಲಿಯಲು ಬಯಸಿದ್ದಾಗಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಿಕಾ, ಅವರಿಗೆ ತನ್ನದೇ ಮಾತೃಭಾಷೆ ಸಿಂಧಿ ತಿಳಿದಿಲ್ಲದಿದ್ದರೂ ಕೊಂಕಣಿ ಕಲಿಯಲು ರಣವೀರ್ ಬಯಸಿರುವುದಾಗಿ ಹೇಳಿದರು.
ಕರಣ್ ಜೋಹರ್ ಶೋನಲ್ಲಿ ರಣವೀರ್ ಸಿಂಗ್‌ನಿಂದ ಶಾಕಿಂಗ್ ಫ್ಯಾಮಿಲಿ ಸಿಕ್ರೇಟ್ ರಿವೀಲ್!
ದೀಪ್‌ವೀರ್‌ನ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನಗೆ ಕೊಂಕಣಿ ಅರ್ಥವಾಗುತ್ತದೆ. ತಾನು ಕೊಂಕಣಿ ಕಲಿತಿದ್ದೇನೆ. ಕೊಂಕಣಿ ಕಲಿಯಲು ಒಂದು ಕಾರಣವಿದೆ ಎಂದು ರಣವೀರ್ ಹೇಳಿದ್ದಾರೆ. ನಾವು ಮಕ್ಕಳನ್ನು ಹೊಂದಿದಾಗ ನಮ್ಮ ಮಕ್ಕಳೊಂದಿಗೆ ತಾಯಿ ಅವರ ಭಾಷೆ ಕೊಂಕಣಿಯಲ್ಲಿ ನನ್ನ ಬಗ್ಗೆ ಏನಾದರೂ ಹೇಳಿದರೆ ಅದು ನನಗೆ ಅರ್ಥವಾಗದೇ ಇರಬಾರದು ಈ ಕಾರಣಕ್ಕೆ ತಾನು ಕೊಂಕಣಿ ಕಲಿಯುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೀಪಿಕಾ, ಒಂದು ದಿನ ರಣ್‌ವೀರ್ ನನ್ನ ಬಳಿ ಬಂದು ಬೇಬಿ ನಾನು ಕೊಂಕಣಿ ಕಲಿಯಬೇಕು ಎಂದು ಹೇಳಿದ. ಆತನ ಮಾತು ಕೇಳಿ ನಾನು ಬಿದ್ದೇ ಹೋಗಿದೆ. ಎಷ್ಟು ಸುಂದರ ಎಂದು ನಾನು ತುಂಬಾ ಖುಷಿಯಾಗಿದ್ದೆ. ಆದರೆ ಸ್ವಲ್ಪ ಸಮಯದ ನಂತರ ನನಗೆ ತಿಳಿಯಿತು ರಣ್‌ವೀರ್ ಏಕೆ ಕೊಂಕಣಿ ಕಲಿಯಲು ಬಯಸಿದ ಎಂಬುದು, ನಾನು ನಮ್ಮ ಕೊಂಕಣಿ ಭಾಷೆಯಲ್ಲಿ ನನ್ನ ಮಕ್ಕಳಲ್ಲಿ ಆತನ ವಿರುದ್ಧ ಏನು ಹೇಳಬಾರದು, ಮಕ್ಕಳನ್ನು ಆತನ ವಿರುದ್ಧ ಎತ್ತಿ ಕಟ್ಟಬಾರದು ಎಂಬ ಕಾರಣಕ್ಕೆ ಆತ ಕೊಂಕಣಿ ಕಲಿಯಲು ಬಯಸಿದ್ದ ಎಂದು ಹೇಳಿದರು. ಇದಕ್ಕೆ ರಣವೀರ್ ಖಂಡಿತಾ, ಅವರು ತಾಯಿ ಮಕ್ಕಳು ಕೋಡ್‌ವರ್ಡ್‌ನಲ್ಲಿ ಮಾತನಾಡುವುದನ್ನು ನಾನು ಬಯಸುವುದಿಲ್ಲ ಎಂದು ಹೇಳಿದರು. ಇವರಿಬ್ಬರ ಮಾತುಕೇಳಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ.
ಮಗನನ್ನು ಗೇಲಿ ಮಾಡಿದ ಸೋನಂ ಕಪೂರ್ ಮತ್ತು ದೀಪಿಕಾರ ಮೇಲೆ ಕಿಡಿ ಕಾರಿದ್ದ ರಿಷಿ ಕಪೂರ್
ದಂಪತಿಗಳ ಈ ಮೋಜಿನ ಸಂಭಾಷಣೆಗೆ ಕೊಂಕಣಿ ಸಮಾವೇಶದಲ್ಲಿ ಸೇರಿದವರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದೇ ವೇಳೆ ದೀಪಿಕಾ, ರಣವೀರ್‌ಗೆ ಸಿಂಧಿ ಗೊತ್ತಿಲ್ಲ ಎಂದು ಬಹಿರಂಗಪಡಿಸಿದರು. ನಾನು ಸಹಜವಾಗಿ, ಸಿಂಧಿ ಕಲಿಯಲು ಇಷ್ಟಪಡುತ್ತೇನೆ. ಆದರೆ ರಣವೀರ್‌ಗೆ ಸಿಂಧಿ ಗೊತ್ತಿಲ್ಲ. ಹಾಗಾಗಿ ನಾನು ಕೊಂಕಣಿ ಸಮಾವೇಶದಲ್ಲಿ ಪಾಲ್ಗೊಳ್ಳುವ ರೀತಿಯಲ್ಲಿ ಅವರು ಸಿಂಧಿ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ದೀಪಿಕಾ ಹೇಳಿದರು. ಆದರೆ, ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ರಣ್‌ವೀರ್, ನಾನ ಲುಕ್ ನೋಡು ನಾನು ಅರ್ಹನಾಗಿದ್ದೇನೆ ಎಂದು ಹೇಳಿದ್ದಾರೆ. ಈ ವೀಡಿಯೊವನ್ನು ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮಾತ್ರವಲ್ಲದೆ ಅಭಿಮಾನಿಗಳು ದಂಪತಿಗಳಿಗೆ ಶೀಘ್ರದಲ್ಲೇ ಮಗುವನ್ನು(Kid) ಹೊಂದುವಂತೆ ಕಾಮೆಂಟ್ ಮಾಡಿದ್ದಾರೆ.