ಬಾಲಿವುಡ್ ಹಿರಿಯ ನಟಿ ರಾಣಿ ಮುಖರ್ಜಿ ತಮ್ಮ ಒಡಕಲು ಧ್ವನಿ ರಿಜೆಕ್ಟ್ ಆಗಿದ್ದನ್ನು ನೆನೆದು ಭಾವುಕರಾಗಿದ್ದಾರೆ. ಯಾರು ರಿಜೆಕ್ಟ್ ಮಾಡಿದ್ರು, ಯಾರು ಸೆಲೆಕ್ಟ್ ಮಾಡಿದ್ರು ಎಂಬುದನ್ನು ಮನಬಿಚ್ಚಿ ಹೇಳಿದ್ದಾರೆ.

ಕುಚ್ ಕುಚ್ ಹೋತಾ ಹೈ (Kuch Kuch Hota Hai) ಸಿನಿಮಾದಲ್ಲಿ ಶಾರುಕ್, ಕಾಜೋಲ್ ಜೊತೆ ಎಲ್ಲರನ್ನು ಆಕರ್ಷಿಸಿದ್ದು ರಾಣಿ ಮುಖರ್ಜಿ ವಾಯ್ಸ್. ಟೀನಾ ಆಗಿ ರಾಹುಲ್ ಮುಂದೆ ಬರುವ ರಾಣಿ ಮುಖರ್ಜಿ, ಜೈ ಜಗದೀಶ ಹರೆ ಭಕ್ತಿಗೀತೆ ಹಾಡಿಯೇ ಸಾವಿರಾರು ಅಭಿಮಾನಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ರು. ರಾಣಿ ಮುಖರ್ಜಿ ಅವರದ್ದು ಹಸ್ಕಿ ವಾಯ್ಸ್. ಧ್ವನಿ ಸ್ವಲ್ಪ ಒಡಕು ಅನ್ಬಹುದು. ಅವರ ವಾಯ್ಸ್ ಅವರಿಗೆ ಒಂದ್ಕಾಲದಲ್ಲಿ ವಿಲನ್ ಆಗಿತ್ತು. ಅಮೀರ್ ಖಾನ್, ಅವರ ಧ್ವನಿಯನ್ನು ಇಷ್ಟಪಟ್ಟಿರಲಿಲ್ಲ. ಆದ್ರೆ ಹೊಸಬರಿಗೆ ಸದಾ ಪ್ರೋತ್ಸಾಹ ನೀಡಿ, ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುವ ನಿರ್ದೇಶಕ ಕರಣ್ ಜೋಹರ್, ರಾಣಿ ವಾಯ್ಸ್ ಗೆ ಜೀವ ತುಂಬಿದ್ದರು.

ರಾಣಿ ಮುಖರ್ಜಿ (Rani Mukherjee) ಧ್ವನಿ ಚೆನ್ನಾಗಿಲ್ಲ ಎಂದಿದ್ದ ಅಮೀರ್ ಖಾನ್

ರಾಣಿ ಮುಖರ್ಜಿ 1996 ರಲ್ಲಿ ಬಂಗಾಳಿ ಚಿತ್ರದಲ್ಲಿ ನಟಿಸಿದ್ದರು. 1997ರಲ್ಲಿ ಬಾಲಿವುಡ್ ಗೆ ಕಾಲಿಟ್ಟಿದ್ದರು. ರಾಜಾ ಕಿ ಆಯೇಗಿ ಬಾರಾತ್ ಬಾಲಿವುಡ್ ನ ಅವರ ಮೊದಲ ಸಿನಿಮಾ. ಆದ್ರೆ ರಾಣಿಗೆ ಹೆಸರು ತಂದ್ಕೊಟ್ಟಿದ್ದು ಗುಲಾಮ್. ಈ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ರಾಣಿ ಸ್ಕ್ರೀನ್ ಹಂಚ್ಕೊಂಡಿದ್ರು. ಈ ಸಿನಿಮಾದಲ್ಲಿ ರಾಣಿಗೆ ಡಬ್ಬಿಂಗ್ ಅವಕಾಶ ಸಿಗ್ಲಿಲ್ಲ. ರಾಣಿ ಮುಖರ್ಜಿ ಧ್ವನಿ ಚೆನ್ನಾಗಿಲ್ಲ, ಈ ಸಿನಿಮಾಗೆ ಸೂಟ್ ಆಗ್ತಿಲ್ಲ ಎಂಬ ಕಾರಣ ಹೇಳಿ ಆ ಅಮೀರ್ ಖಾನ್ ಧ್ವನಿ ಬದಲಿಸಿದ್ದರು. ಅದಾಗ್ಲೇ ಉತ್ತುಂಗದಲ್ಲಿದ್ದ ಅಮೀರ್ ಖಾನ್ ಮಾತನ್ನು ರಾಣಿ ಮುಖರ್ಜಿ ಅಲ್ಲ ಗಳೆಯುವಂತಿರಲಿಲ್ಲ. ಪ್ರಸಿದ್ಧ ನಟಿ ಶ್ರೀದೇವಿ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದ ಅಮೀರ್ ಖಾನ್, ಅವರ ಎಲ್ಲ ಸಿನಿಮಾಗೆ ಬೇರೆಯವರು ಧ್ವನಿ ನೀಡ್ತಾರೆ. ನೀವು ಈ ವಿಷ್ಯದಲ್ಲಿ ಹೊಂದಾಣಿಕೆ ಮಾಡ್ಕೊಳ್ಬೇಕು ಎಂದಿದ್ದರು. ಟೀಂ ವರ್ಕ್ ಮುಖ್ಯವಾಗಿದ್ರಿಂದ ಹಾಗೇ ರಾಣಿ ಇಂಡಸ್ಟ್ರಿಗೆ ಹೊಸಬರಾಗಿದ್ದರಿಂದ ಇದಕ್ಕೆ ಒಪ್ಪಿಗೆ ನೀಡಿದ್ದರು. ಕರಣ್ ಜೋಹರ್ ಜೊತೆ ನಡೆದ ಸಂದರ್ಶನವೊಂದರಲ್ಲಿ ರಾಣಿ ಮುಖರ್ಜಿ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ.

ಐಕಾನಿಕ್ ರೋಲ್ ಗಳನ್ನ ತಿರಸ್ಕರಿಸಿ, ತಪ್ಪು ಮಾಡಿದ ಬಾಲಿವುಡ್ ನಟಿಯರು

ಆ ಘಟನೆ ನೆನೆದು ಕಣ್ಣೀರಿಟ್ಟ ರಾಣಿ ಮುಖರ್ಜಿ 

ರಾಣಿ ಮುಖರ್ಜಿ ನಿಜವಾದ ಧ್ವನಿ ಸರಿಯಾಗಿ ಪರಿಚಯವಾಗಿದ್ದು ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ. ಕರಣ್ ಜೋಹರ್ ನಿರ್ದೇಶನದ ಈ ಸಿನಿಮಾದಲ್ಲಿ ರಾಣಿ ಮುಖರ್ಜಿಗೆ ಡಬ್ಬಿಂಗ್ ಅವಕಾಶ ನೀಡಿದ್ದರು ಕರಣ್. ಆ ದಿನವನ್ನು ನೆನೆದು ರಾಣಿ ಮುಖರ್ಜಿ ಕಣ್ಣೀರಿಟ್ಟಿದ್ದಾರೆ. ಟೀಸರ್ ಶೂಟಿಂಗ್ ವೇಳೆ ರಾಣಿ ಮುಖರ್ಜಿ ಅವರನ್ನು ಕರಣ್ ಪ್ರಶ್ನೆ ಮಾಡಿದ್ದರಂತೆ. ನಿಮ್ಮ ಧ್ವನಿ ಬಗ್ಗೆ ನಿಮಗೆ ಪ್ರಾಬ್ಲಂ ಇದ್ಯಾ ಅಂತ ಕೇಳಿದ್ದರಂತೆ. ಇದಕ್ಕೆ ರಾಣಿ ಇಲ್ಲ ಎನ್ನುವ ಉತ್ತರ ನೀಡಿದ್ದರಂತೆ. ಗುಲಾಮ್ ಸಿನಿಮಾದಲ್ಲಿ ನೀವು ಡಬ್ ಮಾಡಿಲ್ಲ ಅಲ್ವಾ ಅಂತ ಕೇಳಿದ್ದರಂತೆ. ಅದಕ್ಕೆ ಹೌದು ಎಂದಿದ್ದ ರಾಣಿಗೆ, ಕರಣ್, ನಿಮ್ಮ ಮೊದಲ ಸಿನಿಮಾಕ್ಕೆ ನೀವು ಡಬ್ ಮಾಡಿದ್ರಾ ಅಂತ ಮರು ಪ್ರಶ್ನೆ ಕೇಳಿದ್ದರಂತೆ. ರಾಣಿ ಯಸ್ ಹೇಳುತ್ತಿದ್ದಂತೆ, ನನಗೆ ನಿಮ್ಮ ಧ್ವನಿ ಇಷ್ಟ. ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ನೀವೇ ಧ್ವನಿ ನೀಡ್ತೀರಿ ಅಂತ ಕರಣ್ ಜೋಹರ್ ಹೇಳಿದ್ದರಂತೆ. 

ಟಾಕ್ಸಿಕ್ ನಟ ಯಶ್, ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಕಟ್ಟೆ ಮೇಲೆ ಕೂತು ಕಂಡ ಆ ಕನಸು ನನಸಾಯಿತಾ?

ಕರಣ್ ತಂದೆಯಿಂದ್ಲೂ ಇದಕ್ಕೆ ಸ್ವಲ್ಪ ವಿರೋಧ ವ್ಯಕ್ತವಾಗಿತ್ತಂತೆ. ಆದ್ರೆ ಕರಣ್ ಮಾತು ತಪ್ಪಲಿಲ್ಲ. ಕರಣ್ ಕಾರಣದಿಂದ ನನ್ನ ಧ್ವನಿ ಉಳಿಸಿಕೊಳ್ಳಲು ಕಾರಣವಾಯ್ತು ಅಂತ ಆ ದಿನ ನೆನೆದ ರಾಣಿ ಮುಖರ್ಜಿ ಕಣ್ಣೀರಿಟ್ಟಿದ್ದಾರೆ. ರಾಣಿಗೆ ಮುತ್ತಿಟ್ಟು ಸಮಾಧಾನ ಮಾಡಿದ್ದಾರೆ ಕರಣ್ ಜೋಹರ್.

View post on Instagram