ಸುಕೇಶ್​ ವಿರುದ್ಧ ಆರೋಪ ಮಾಡಲು ಹೋದ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ವಿರುದ್ಧ ಸುಕೇಶ್​ ತಿರುಗಿ ಬಿದ್ದಿದ್ದಾನೆ. ನಟಿ ಮಾಡಿರುವ ಹಲವಾರು ಚಾಟ್​ಗಳನ್ನು ಇದೀಗ ಬಹಿರಂಗಪಡಿಸಿದ್ದಾನೆ.  

ಐಷಾರಾಮಿ ಉಡುಗೊರೆಗೋಸ್ಕರ ವಂಚಕ ಸುಕೇಶ್​ ಜೊತೆ ಸಂಬಂಧ ಬೆಳೆಸಿರುವ ರಾ ರಾ ರಕ್ಕಮ್ಮ ಬೆಡಗಿ, ಬಾಲಿವುಡ್​ ತಾರೆ ಜಾಕ್ವೆಲಿನ್​ ಫರ್ನಾಂಡೀಸ್​ ಪ್ರಕರಣ ದಿನೇ ದಿನೇ ಹೊಸಹೊಸ ಬೆಳವಣಿಗೆ ಕಾಣುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್‌ ನಡುವಿನ ಪತ್ರ ವ್ಯವಹಾರಗಳ ಕುರಿತು ಕೆಲ ದಿನಗಳ ಹಿಂದೆ ಬಿಗ್‌ ಅಪ್‌ಡೇಟ್‌ ಹೊರಬಂದಿತ್ತು. ಜೈಲಿನಿಂದಲೇ ಸುಕೇಶ್‌ ತಮಗೆ ಬೆದರಿಕೆ ಹಾಕುತ್ತಿರುವುದಾಗಿ ನಟಿ ಜಾಕ್ವೆಲಿನ್‌ ಇದಾಗಲೇ ಸುಕೇಶ್‌ ವಿರುದ್ಧ ಕೋರ್ಟ್‌‌ನಲ್ಲಿ ದೂರು ದಾಖಲು ಮಾಡಿದ್ದಾರೆ. ಇದರ ಮಧ್ಯೆ ಇವರಿಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್‌ಆಪ್‌ ಸಂದೇಶ, ಪತ್ರ ವ್ಯವಹಾರಗಳ ಬಗ್ಗೆ ತನಿಖಾಧಿಗಳು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಲೇ ಇದ್ದಾರೆ.

ಕೋಟಿ ಕೋಟಿಗಟ್ಟಲೆ ಉಡುಗೊರೆ ಪಡೆದುಕೊಂಡು, ಸುಕೇಶ್​ ಜೊತೆ ಹಲವಾರು ರೀತಿಯಲ್ಲಿ ಫೋಟೋ ತೆಗೆಸಿಕೊಂಡಿದ್ದ, ಅವನ ಜೊತೆ ಸ್ನೇಹ ಬೆಳೆಸಿದ್ದ ಆರೋಪದ ಕುರಿತು ಇದಾಗಲೇ ತನಿಖಾಧಿಕಾರಿಗಳು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಸುಕೇಶ್​ನ ಈ ಕೃತ್ಯದಲ್ಲಿ ಜಾಕ್ವೆಲಿನ್​ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದಾಗ ನಟಿ ತನಗೂ, ಸುಕೇಶ್​ಗೂ ಸಂಬಂಧವೇ ಇಲ್ಲ ಎಂದಿದ್ದರು. ವಿನಾ ಕಾರಣ ಆತ ನನಗೆ ಜೈಲಿನಿಂದ ಲವ್​ ಲೆಟರ್​ ಬರೆದು ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದ ನಟಿ, ಈ ರೀತಿ ಪತ್ರ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಕೋರ್ಟ್​ ಮೊರೆ ಕೂಡ ಹೋಗಿದ್ದಾರೆ. ನೂರಾರು ಕೋಟಿ ಆಸ್ತಿ ಇದ್ದರೂ, ಮತ್ತಷ್ಟು ವೈಭೋಗ ಜೀವನಕ್ಕಾಗಿ ಸುಕೇಶ್​ನ ಮೋಹದ ಬಲೆಗೆ ಬಿದ್ದು, ಈಗ ಕೋರ್ಟ್​ ಅಲೀಯುವಂತಾಗಿದೆ ಜಾಕ್ವೆಲಿನ್​. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು ಸೇರಿದಂತೆ ಈಕೆ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ. ನಂತರ ಯಾವಾಗ ಸುಕೇಶ್​ ಜೈಲು ಸೇರಿದನೋ, ಅವನ ಹಿಂದೆ ಜಾಕ್ವೆಲಿನ್​ ಹೆಸರೂ ಕೇಳಿಬಂದಿದ್ದು, ಇವರ ವಿರುದ್ಧವೂ ದೂರು ದಾಖಲಾಗಿದೆ. ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲಿದೆ.

ಡ್ರಗ್ಸ್​ ಹೆಸರಲ್ಲಿ ಖ್ಯಾತ ನಟಿ ಅಂಜಲಿ ಪಾಟೀಲ್​ಗೆ 5.79 ಲಕ್ಷ ರೂ. ದೋಖಾ! ನಂಬಿ ಮೋಸ ಹೋಗಿದ್ದು ಹೇಗೆ?

ತನಿಖಾಧಿಕಾರಿಗಳು ಒಂದೊಂದೇ ತನಿಖೆ ಮಾಡುತ್ತಲೇ ನಟಿಯ ವಿರುದ್ಧ ಆರೋಪ ಮತ್ತಷ್ಟು ಸುತ್ತಿಕೊಳ್ಳುತ್ತಿದೆ. ತಮಗೂ, ಸುಕೇಶ್​ಗೂ ಸಂಬಂಧವೇ ಇಲ್ಲ. ನಾನು ಆತನಿಗೆ ಯಾವುದೇ ಚಾಟ್​ ಸಂದೇಶ ಕಳುಹಿಸಿಯೇ ಇಲ್ಲ ಎಂದು ಜಾಕ್ವೆಲಿನ್​ ಹೇಳಿದ್ದರು. ಆದರೆ ಇದೀಗ 2021ರ ಪತ್ರ ವ್ಯವಹಾರಗಳು ತನಿಖಾಧಿಕಾರಿಗಳ ಕೈಸೇರಿದೆ. ಇದನ್ನು ಖುದ್ದು ಸುಕೇಶ್​ ಪೊಲೀಸರಿಗೆ ನೀಡಿದ್ದಾನೆ. ಯಾವಾಗ ನಟಿ ತನ್ನ ವಿರುದ್ಧವೇ ತಿರುಗಿ ಬಿದ್ದಳೋ, ಆಕೆಯ ಬಣ್ಣ ಬಯಲು ಮಾಡುವುದಾಗಿ ಈ ಹಿಂದೆ ಸುಕೇಶ್​ ಹೇಳಿದ್ದ. ಈಗ ಅದರಂತೆಯೇ 2021ರಲ್ಲಿ ತಮ್ಮಿಬ್ಬರ ನಡುವೆ ನಡೆದಿರುವ ಚಾಟ್​ ಸಂದೇಶಗಳನ್ನು ತನಿಖಾಧಿಕಾರಿಗಳ ಕೈಗೆ ಇತ್ತಿದ್ದಾನೆ. ಅಂದು ತಾನು ಜಾಕ್ವೆಲಿನ್‌ಗೆ ಪತ್ರ ಬರೆದು ಹೊಸ ವರ್ಷದ ಶುಭಾಶಯ ಕೋರಿದ್ದ ಸಂದರ್ಭದಲ್ಲಿ, ಮರಳಿ ಆಕೆ ಐ ಲವ್ ಯೂ ಮೆಸೇಜ್ ಕಳುಹಿಸಿದ್ದಳು ಎಂದಿದ್ದಾನೆ ಸುರೇಶ್​. ಅಷ್ಟೇ ಅಲ್ಲದೇ, ಇಷ್ಟೆಲ್ಲಾ ಸಮಸ್ಯೆ ಆಗಿರುವುದಕ್ಕೆ ಜಾಕ್ವೆಲಿನ್ ಕ್ಷಮೆ ಕೂಡ ಕೇಳಿದ್ದಳು ಎಂದಿರುವ ಸುಕೇರ್ಶ್ ಅವುಗಳ ಚಾಟ್​ ಸಂದೇಶಗಳನ್ನು ನೀಡಿದ್ದಾನೆ.

 ಈ ಬಗ್ಗೆ ಮಾಹಿತಿ ನೀಡಿರುವ ಸುಕೇಶ್​ ಪರ ವಕೀಲರು, ಜಾಕ್ವೆಲಿನ್ ಒಂದು ಕಡೆ ಸಾರಿ ಕೇಳಿದ್ದರೆ, ಇನ್ನೊಂದು ಕಡೆ I love you ಎಂದು ಹೇಳಿದ್ದಾರೆ. ಇದರ ಅರ್ಥ ನಟಿ ಕೂಡ ಇದರಲ್ಲಿ ಭಾಗಿಯಾಗಿರುವುದು ತಿಳಿಯುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ಇವರಿಬ್ಬರ ನಡುವೆ ಬಹಳಷ್ಟು ಮಾತುಕತೆ ನಡೆದಿರುವುದಕ್ಕೆ ಸಾಕಷ್ಟು ಪುರಾವೆ ಇರುವುದಾಗಿ ಅವರು ತಿಳಿಸಿದ್ದಾರೆ. ಸುಕೇಶ್​ ವಿರುದ್ಧ ದೂರು ದಾಖಲಿಸಲು ಹೋಗಿ ನಟಿ ಈಗ ಗಾಳಕ್ಕೆ ಬಿದ್ದುಬಿಟ್ಟರಾ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ನಟಿ ಜಾಕ್ವೆಲಿನ್​ಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಾ ಸಾಗಿದೆ. 

ನನ್​ ಗಂಡನೂ ನಿಮ್​ ಹಾಗೆ ಹೇಳ್ಬೋದು ಎನ್ನೋ ಮೂಲಕ ಮದ್ವೆ ಹಿಂಟ್​ ಕೊಟ್ರಾ ರಶ್ಮಿಕಾ ಮಂದಣ್ಣ?