Asianet Suvarna News Asianet Suvarna News

Ranbir Kapoor: ಪದೇ ಪದೇ ಸೆಲ್ಫಿಗೆ ಬಂದ ಯುವಕನಿಗೆ ರಣಬೀರ್​ ಕಪೂರ್​ ಈ ರೀತಿ ಶಾಕ್​ ಕೊಡೋದಾ?

ಸದಾ ಹಸನ್ಮುಖಿಯಾಗಿರುವ ನಟ ರಣಬೀರ್​ ಕಪೂರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕನೊಬ್ಬ ಪದೇ ಪದೇ ಕಿರಿಕಿರಿ ಮಾಡಿದಾಗ ನಟ ಮಾಡಿದ್ದೇನು?
 

Ranbir Kapoor throws a fans mobile phone after he continuously tries to take a picture,
Author
First Published Jan 27, 2023, 5:23 PM IST

ಸೆಲೆಬ್ರಿಟಿಗಳಾಗುವುದು ಸುಮ್ಮನೇ ಅಲ್ಲ. ಅವರು ಎಲ್ಲಿ ಹೋದರೂ ಫ್ಯಾನ್ಸ್​ (Fans) ಹಿಂಬಾಲಿಸುತ್ತಲೇ ಇರುತ್ತಾರೆ. ಅದರಲ್ಲಿಯೂ ಸಿನಿ ತಾರೆಯರು ಇದನ್ನು ಸಹಿಸಿಕೊಳ್ಳಲೇಬೇಕು. ಕೆಲವೊಮ್ಮೆ ಅಭಿಮಾನಿಗಳು ಅದೆಷ್ಟು ಕಿರಿಕಿರಿ ಮಾಡುತ್ತಾರೆ ಎಂದರೆ ಅವರ ಕಪಾಳಕ್ಕೆ ಎರಡು ಏಟು ಹೊಡೆಯೋಣ ಎಂದು ಈ ಸೆಲಬ್ರಿಟಿಗಳಿಗೆ ಅನ್ನಿಸುವುದೂ ಉಂಟು. ಆದರೆ ಹಾಗೆ ಮಾಡಿದರೆ ಮುಂದೆ ಆಗುವ ಅಪಾಯ ಅವರಿಗೆ ಗೊತ್ತಿದ್ದದ್ದೇ. ಏಕೆಂದರೆ ನಟರು ಬದುಕಿರುವುದೇ ಅಭಿಮಾನಿಗಳಿಂದ. ಒಮ್ಮೆ ಏನಾದರೂ ಎಡವಟ್ಟು ಮಾಡಿಕೊಂಡು ಬಿಟ್ಟರೆ, ಅವರ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದರೆ ನಂತರ ಅವರ ಕಥೆ ಗೋವಿಂದ. ಜನರು ಅವರ ಚಿತ್ರವನ್ನೇ ಬೈಕಾಟ್​ (Boycott) ಮಾಡುವ ಮಟ್ಟಕ್ಕೆ ತಲುಪುತ್ತಾರೆ. ಈ ಹಿಂದೆ ಹೀಗೆ ಘಟನೆಗಳು ನಡೆದಿದ್ದೂ ಇವೆ. ಅದೇ ಕಾರಣಕ್ಕೆ ಚಿತ್ರನಟರು ಎಂದಿಗೂ ಸಮಾನಚಿತ್ತರಾಗಿ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಳ್ಳಲೇಬಾರದು.

ಆದರೆ ಎಲ್ಲ ಸಮಯವೂ ಒಂದೇ ತೆರನಾಗಿ ಇರುವುದಿಲ್ಲ. ಎಷ್ಟೇ ಸಹನೆಯಿಂದ ಇದ್ದರೂ ಒಮ್ಮೊಮ್ಮೆ ಸಹನೆ ಕಳೆದುಕೊಳ್ಳುವುದು ಇದ್ದೇ ಇರುತ್ತದೆ. ಅಂಥದ್ದೇ ಒಂದು ಘಟನೆ ಈಗ ನಡೆದಿದ್ದು, ನಟ ರಣಬೀರ್​ ಕಪೂರ್​ (Ranabir Kapoor) ಸುದ್ದಿಯಾಗಿದ್ದಾರೆ. ಸಹನೆ ಕಳೆದುಕೊಂಡ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದ್ದು ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ತನ್ನ ಅಭಿಮಾನಿಗೆ ನಟ ನಡೆದುಕೊಂಡ ರೀತಿಗೆ ಹಲವು ನೆಟ್ಟಿಗರು   ಕಿಡಿ ಕಾರಿದ್ದರೆ, ಇನ್ನು ಕೆಲವರು ರಣಬೀರ್​ ಕಪೂರ್​ ಜಾಗದಲ್ಲಿ ಯಾರೇ ಇದ್ದರೂ ಹೀಗೆಯೇ ವರ್ತಿಸುತ್ತಿದ್ದರು ಎನ್ನುತ್ತಿದ್ದಾರೆ. ತಾವು ಆ ಜಾಗದಲ್ಲಿ ಇದ್ದರೆ ಆತನಿಗೆ ಎರಡು ಏಟು ಹೊಡೆಯುತ್ತಿದ್ದೆವು ಎಂದೂ ಹೇಳಿದ್ದಾರೆ. ಇದು ನಟದ ದುರಹಂಕಾರದ ಪರಮಾವಧಿ ಎಂದು ಇನ್ನು ಕೆಲವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಆಲಿಯಾ ಭಟ್​ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್​ ಮಾಡಿ ತಬ್ಬಿಬ್ಬುಗೊಳಿಸಿದ ನಟಿ

ಅಷ್ಟಕ್ಕೂ ಆಗಿದ್ದೇನಪ್ಪಾ ಎಂದರೆ, ಶೂಟಿಂಗ್​ (shooting) ಒಂದರಲ್ಲಿ ಪಾಲ್ಗೊಳ್ಳಲು ನಟ ರಣಬೀರ್​ ಕಪೂರ್​ ತೆರಳಿದ್ದಾಗ ಅಲ್ಲಿಗೆ ಬಂದಿರುವ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ನಟ, ಆತನ ಜೊತೆ ನಿಂತು ಸ್ಮೈಲ್​ (smile) ಮಾಡಿದ್ದಾನೆ. ಇಷ್ಟಕ್ಕೆ ತೃಪ್ತನಾಗದ ಯುವಕ ಮತ್ತೊಂದು ಫೋಟೋ (photo) ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆಗಲೂ ರಣಬೀರ್​ ಸರಿಯಾಗಿಯೇ ನಿಂತಿದ್ದಾರೆ.ಮೂರನೆಯ ಬಾರಿ ಹೀಗೆ ಮಾಡಿದಾಗ ರಣಬೀರ್​ ತುಸು ಅಸಮಾಧಾನದಿಂದಲೇ ಪೋಸ್​ (pose) ಕೊಟ್ಟಿದ್ದಾರೆ. ಇಷ್ಟಾದರೂ ಸುಮ್ಮನಾಗದ ಯುವಕ ಮತ್ತೊಂದು ಫೋಟೋಗೆ ಮುಂದಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಣಬೀರ್​, ಆ ಯುವಕನ ಫೋನ್​ ಕಸಿದುಕೊಂಡು ಹಿಂದಕ್ಕೆ ಎಸೆದಿದ್ದಾನೆ. ಈ ವಿಡಿಯೋ ವೈರಲ್​ (vedio viral) ಆಗಿದೆ.

ಅಷ್ಟಕ್ಕೂ ರಣಬೀರ್ ಕಪೂರ್ ಹೆಚ್ಚಿಗೆ ಯಾವತ್ತೂ ಕೋಪ ಮಾಡಿಕೊಳ್ಳುವವರು ಅಲ್ಲ.  ಅಭಿಮಾನಿಗಳ ಜೊತೆಯೂ ಅವರು ಈ ರೀತಿ ನಡೆದುಕೊಂಡದ್ದು ಇಲ್ಲ.  ತಮ್ಮ ಅಭಿಮಾನಿಗಳೊಂದಿಗೆ ವ್ಯವಹರಿಸುವಾಗ ಇವರು ಸದಾ ಶಾಂತರಾಗಿರುತ್ತಾರೆ ಎಂದೇ ಪ್ರಸಿದ್ಧಿಯಾದವರು. ಆದರೂ ಹೀಗೆ ಏಕೆ ಮಾಡಿದರು ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಕೆಲವರು ಇದು ನಿಜ ಇರಲಿಕ್ಕಿಲ್ಲ, ಯಾವುದೋ ಜಾಹೀರಾತು (advertise) ಇದ್ದಂತಿದೆ ಎಂದು ತಮ್ಮ ನೆಚ್ಚಿನ ನಟನ ಪರವಾಗಿಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ವೈರಲ್​ ವಿಡಿಯೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಕೆಲವರು ನಟ ಮೊದಲು ಸರಿಯಾಗಿಯೇ ಇದ್ದರು. ಆಲಿಯಾ ಭಟ್​ ಅವರನ್ನು ಮದುವೆಯಾದ ಮೇಲೆ ಬದಲಾಗಿದ್ದಾರೆ ಎಂದು ಸುಖಾಸುಮ್ಮನೆ ಕಾಲೆಳೆಯುತ್ತಿದ್ದಾರೆ. ಆಲಿಯಾರಿಂದಲೇ ಇವರಿಗೆ ಬುದ್ಧಿ ಕಲಿಸಬೇಕು ಎನ್ನುತ್ತಿದ್ದಾರೆ.

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಇನ್ನು ಇವರ ಚಿತ್ರದ ಬಗ್ಗೆ ಹೇಳುವುದಾದರೆ. ರಣಬೀರ್ ಕಪೂರ್ ಅವರು ಶ್ರದ್ಧಾ ಕಪೂರ್ (Shraddha Kapoor) ಜತೆ 'ತು ಜೂಠಿ ಮೈನ್ ಮಕ್ಕರ್' ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚಿತ್ರದ ಟ್ರೈಲರ್ (Trailer) ಜನರ ಹೃದಯ ಗೆದ್ದಿದೆ. ನಟ ಸಂದೀಪ್ ವಂಗಾ ಅವರ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ಕೂಡ ರಣಬೀರ್​ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣಾ ನಾಯಕಿಯಾಗಿ ನಟಿಸಲಿದ್ದಾರೆ. ಅದೇ ಇನ್ನೊಂದೆಡೆ ರಣಬೀರ್ ಮತ್ತು ಆಲಿಯಾ ಜೋಡಿ ಬ್ರಹ್ಮಾಸ್ತ್ರ-2 (Brahmastra-2) ಗೆ ಸಜ್ಜಾಗಿದೆ. 

Follow Us:
Download App:
  • android
  • ios