Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಬಹು ವಿವಾದದ ನಡುವೆಯೇ ಬಿಡುಗಡೆಗೊಂಡು ಪಠಾಣ್​ ಚಿತ್ರಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ಇದರ ಯಶಸ್ಸಿನ ಶಾಕಿಂಗ್​ ಹೇಳಿಕೆಯೊಂದನ್ನು ನಟಿ ಕಂಗನಾ ರಣಾವತ್​ ಟ್ವೀಟ್​ ಮಾಡಿದ್ದಾರೆ. ಏನದು?
 

Pakistanas ISI link behind the success of Pathan says Kangana Ranaut

ಬಹಳ ವಿವಾದದ ನಂತರ ಅಂತೂ ನಟ ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಸಿನಿಮಾ ರಿಲೀಸ್ ಆಗಿದ್ದು ಬೈಕಾಟ್​ ಬಿಸಿಯ ನಡುವೆಯೇ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದ್ದು,  ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ.  ಮೊದಲ ದಿನ 50 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಇದರ ಕುರಿತು ಅನೇಕ ಮಂದಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಂತೆಯೇ, ನಟಿ  ಕಂಗನಾ ರಣಾವತ್ ಕೂಡ ಪಠಾಣ್ ಸಿನಿಮಾವನ್ನು ಹಾಡಿಹೊಗಳಿದ್ದರು. 'ಪಠಾಣ್ ತುಂಬಾ ಚೆನ್ನಾಗಿದೆ. ಈ ರೀತಿಯ ಚಿತ್ರಗಳು ಇರಬೇಕು ಎಂದು ನನಗೆ ಅನಿಸುತ್ತದೆ. ಖಂಡಿತವಾಗಿಯೂ ಈ ರೀತಿಯ ಸಿನಿಮಾಗಳು ಕೆಲಸ ಮಾಡುತ್ತದೆ. ಹಿಂದಿ ಚಿತ್ರರಂಗವು ಇತರ ಚಿತ್ರೋದ್ಯಮಗಳಿಗಿಂತ ಹಿಂದುಳಿದಿತ್ತು. ನಾವೆಲ್ಲರೂ ಅಂತಿಮವಾಗಿ ನಮ್ಮದೇ ಆದ ರೀತಿಯಲ್ಲಿ ಮರಳಿ ತರಲು ಪ್ರಯತ್ನಿಸುತ್ತಿದ್ದೇವೆ' ಎಂದು ಹೇಳಿದ್ದರು.

ಕಂಗನಾ ರಣಾವತ್​ (Kangana Ranaut) ಈ ರೀತಿ ಏಕೆ ಹೇಳಿದ್ದಾರೆ ಎಂಬ ಬಗ್ಗೆ ಅಚ್ಚರಿ ಪಟ್ಟವರೇ ಹೆಚ್ಚು ಮಂದಿ. ಆದರೆ ಇದೀಗ ಕಂಗನಾ ಯೂಟರ್ನ್​ ಹೊಡೆದಿದ್ದಾರೆ. ನಿನ್ನೆ ನೀಡಿರುವ ಹೇಳಿಕೆಯ ವಿರುದ್ಧವಾಗಿ ಅವರು ಸರಣಿ ಟ್ವೀಟ್​ ಮೂಲಕ ಪಠಾಣ್​ಗೆ ತಿರುಗೇಟು ನೀಡಿದ್ದಾರೆ. ಅವರು ಹೇಳಿರುವುದು ಏನೆಂದರೆ, 'ಪಠಾಣ್ ಸಿನಿಮಾವು ದ್ವೇಷದ ಮೇಲಿನ ಪ್ರೀತಿಯ ವಿಜಯ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಈ ಮಾತು ಸ್ಪಷ್ಟವಾಗಬೇಕಿದೆ ಎಂದಿದ್ದಾರೆ. 'ಯಾರ ದ್ವೇಷದ ಮೇಲೆ ಯಾರ ಪ್ರೀತಿ ಎನ್ನುವುದು ಬಹುಶಃ ಸರಿಯಾಗಿ ತಿಳಿಯಬೇಕಿದೆ' ಎಂದಿರುವ ನಟಿ, ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ.  'ಯಾರ ದ್ವೇಷದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್‌ಗಳನ್ನು ಖರೀದಿಸಿ ಚಿತ್ರವನ್ನು ಯಶಸ್ವಿ (success) ಮಾಡಿದ್ದು? ಭಾರತದ ಪ್ರೀತಿ ಚಿತ್ರವನ್ನು ಗೆಲ್ಲಿಸಿದೆ. ಅದರಲ್ಲಿ ಶೇ. 80ರಷ್ಟು ಹಿಂದುಗಳೇ ಇದ್ದಾರೆ’ ಎಂದು ಕಂಗನಾ ಹೇಳಿದ್ದಾರೆ.

Kangana Ranaut: ಅಮಾನತಾಗಿದ್ದ ಟ್ವಿಟರ್​ ಕೊನೆಗೂ ಮರಳಿತು! ಕಂಗನಾ ಹೇಳಿದ್ದೇನು?

"ಇದು ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ (Pakistan) ಹಾಗೂ ಐಎಸ್​ಐ (ISI) ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂದು ಚಿತ್ರ ತೋರಿಸುತ್ತದೆ. ದ್ವೇಷ, ತೀರ್ಪುಗಳನ್ನು ಮೀರಿ ಭಾರತದ ಈ ಮನೋಭಾವವೇ ಶ್ರೇಷ್ಠವಾಗಿದೆ. ಭಾರತದ ಪ್ರೀತಿಯಿಂದ ದ್ವೇಷ, ಶತ್ರುಗಳ ಕ್ಷುಲ್ಲಕ ರಾಜಕೀಯವನ್ನು ಜಯಿಸಲಾಗಿದೆ ಎಂದು ಕಂಗನಾ ಟ್ವೀಟ್​ ಮೂಲಕ ಕಿಡಿ ಕಾರಿದ್ದಾರೆ. ‘ಶತ್ರುರಾಷ್ಟ್ರ ಪಾಕಿಸ್ತಾನ ಹಾಗೂ ಐಎಸ್​ಐ​ನ ಒಳ್ಳೆಯವರು ಎಂದು ತೋರಿಸಿದ ಸಿನಿಮಾ ಯಶಸ್ಸು ಕಾಣುತ್ತಿದೆ. ದ್ವೇಷವನ್ನು ಮೀರಿ ಭಾರತದ ಈ ಮನೋಭಾವವೇ ಅದನ್ನು ಮಹಾನ್ ಆಗಿ ಮಾಡಿದೆ. ದ್ವೇಷ ಮತ್ತು ಶತ್ರುಗಳ ಕ್ಷುಲ್ಲಕ ರಾಜಕೀಯವನ್ನು ಜಯಿಸಿದ್ದು ಭಾರತದ ಪ್ರೀತಿ. ಯಾರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೀರೋ ದಯವಿಟ್ಟು ಗಮನಿಸಿ ಪಠಾಣ್ ಒಂದು ಸಿನಿಮಾ ಆಗಲು ಮಾತ್ರ ಸಾಧ್ಯ. ಭಾರತದಲ್ಲಿ ಯಾವಾಗಲೂ ಮೊಳಗೋದು ಜೈ ಶ್ರೀರಾಮ್​ ಮಾತ್ರ’ ಎಂದಿದ್ದಾರೆ ಕಂಗನಾ.

‘ಭಾರತೀಯ ಮುಸ್ಲಿಮರು ದೇಶಭಕ್ತರು ಮತ್ತು ಅಫ್ಘಾನಿಸ್ತಾನದ (Afghanistan) ಪಠಾಣರಿಗಿಂತ ತುಂಬಾ ಭಿನ್ನರು ಎಂದು ನಾನು ನಂಬುತ್ತೇನೆ. ಮುಖ್ಯ ವಿಷಯವೆಂದರೆ ಭಾರತ ಎಂದಿಗೂ ಅಫ್ಘಾನಿಸ್ತಾನವಾಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲಿನ ಪರಿಸ್ಥಿತಿ ನರಕವನ್ನು ಮೀರಿದೆ. ಹೀಗಾಗಿ ಕಥೆಯ ಮೂಲಕ ಹೇಳೋದಾದರೆ ಇದು ಭಾರತದ ಪಠಾಣ್​’ ಎಂದು ಕಂಗನಾ ಬರೆದುಕೊಂಡಿದ್ದಾರೆ.

Aishwarya Rajesh: ದೇವಾಲಯದೊಳಗೆ ಮುಟ್ಟಾದ ಸ್ತ್ರೀ: ನಟಿ ಐಶ್ವರ್ಯಾ ಹೇಳಿಕೆಗೆ ಆಸ್ತಿಕರು ಕಿಡಿ!

 ರಿಲೀಸ್ (realese) ಆದ 2ನೇ ದಿನಕ್ಕೂ ಕೂಡ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಮೂಲಕ 'ಪಠಾಣ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 106 ಕೋಟಿ ರೂಪಾಯಿ ಕಮಾಯಿ ಮಾಡಿ ಈ ಹಿಂದಿನ ಸಿನಿಮಾಗಳ ದಾಖಲೆಗಳನ್ನು ಕೆಡವಿದೆ ಎನ್ನಲಾಗಿದೆ.
 

Latest Videos
Follow Us:
Download App:
  • android
  • ios