Asianet Suvarna News Asianet Suvarna News

ರಣಬೀರ್ ಕಪೂರ್ ಅವರ ಶಂಶೇರಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೈರಲ್‌

ಬಾಲಿವುಡ್‌ ನಟ ರಣಬೀರ್ ಕಪೂರ್ ಅವರ ಶಂಶೇರಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲೀಕ್ ಆಗಿದ್ದು, ಟ್ವಿಟ್ಟರ್‌ನಲ್ಲಿ ವೈರಲ್‌ ಆಗ್ತಿದೆ. ಶಂಶೇರಾ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ರಗಡ್ ಲುಕ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ.

Ranbir Kapoor starrer Shamshera movie first look poster leaked akb
Author
Mumbai, First Published Jun 18, 2022, 5:36 PM IST | Last Updated Jun 18, 2022, 5:37 PM IST

ಬಾಲಿವುಡ್‌ ನಟ ರಣಬೀರ್ ಕಪೂರ್ ಅವರ ಶಂಶೇರಾ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲೀಕ್ ಆಗಿದ್ದು, ಟ್ವಿಟ್ಟರ್‌ನಲ್ಲಿ ವೈರಲ್‌ ಆಗ್ತಿದೆ. ಶಂಶೇರಾ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ರಗಡ್ ಲುಕ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ.

ರಣಬೀರ್ ಕಪೂರ್ ಕೊನೆಯದಾಗಿ 2018 ರ ಬ್ಲಾಕ್‌ಬಸ್ಟರ್ ಸಿನಿಮಾ 'ಸಂಜು'ದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ (Shah Rukh Khan) ಮತ್ತು ಅನುಷ್ಕಾ ಶರ್ಮಾ (Anushka Sharma) ಅವರಂತೆಯೇ ರಣಬೀರ್‌  ಕೂಡ ಚಲನಚಿತ್ರಗಳಿಂದ ಮೂರು ವರ್ಷಗಳ ವಿರಾಮ ಪಡೆದಿದ್ದರು. ಆದರೆ ಈ ವರ್ಷ(2022) ಮಾತ್ರ ಒಂದರ ಹಿಂದೆ ಒಂದರಂತೆ ರಣಬೀರ್ ಹಲವು ಸಿನಿಮಾಗಳನ್ನು ಹೊಂದಿದ್ದಾರೆ. ಶಂಶೇರಾ ಮತ್ತು ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯ ಹಾದಿಯಲ್ಲಿದೆ. ಇಲ್ಲಿಯವರೆಗೆ ರಣಬೀರ್‌ನ ಕೆಲವು ತೆರೆಮರೆಯ ನೋಟಗಳ ಜೊತೆಗೆ ಶಂಶೇರಾದಲ್ಲಿ ಅವರ ಪರಿಚಯಾತ್ಮಕ ವೀಡಿಯೊವನ್ನು ಮಾತ್ರ ನೋಡಿದ್ದೆವು. ಆದರೆ ಈಗ ಈ ಸಿನಿಮಾದಲ್ಲಿ ರಣಬೀರ್ ಅವರ ಫಸ್ಟ್-ಲುಕ್ ಪೋಸ್ಟರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ವೈರಲ್ ಆಗುತ್ತಿದೆ. 

 

ಶಂಶೇರಾ ಸಿನಿಮಾ ಜುಲೈ 22 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor), ವಾಣಿ ಕಪೂರ್ (Vaani Kapoor) ಮತ್ತು ಸಂಜಯ್ ದತ್ (Sanjay Dutt) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಣಬೀರ್‌ನ ಲುಕ್‌ ಅನ್ನು 2021 ಸೆಪ್ಟೆಂಬರ್‌ನಲ್ಲಿ ಅವರ ಹುಟ್ಟುಹಬ್ಬದಂದು ಅನಾವರಣಗೊಳಿಸಲಾಗಿತ್ತು. ಆದರೆ ಈಗ ಶಂಶೇರಾ ಚಿತ್ರದ ರಣಬೀರ್‌ ಅವರ ಫಸ್ಟ್ ಫುಲ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ರಣಬೀರ್ ಅವರ ಮೊದಲ ಪೂರ್ಣ ಫೋಟೋದಲ್ಲಿ ಅವರು ಒರಟಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ವಿವಾದದಲ್ಲಿ ಬ್ರಹ್ಮಾಸ್ತ್ರ; ಶೂ ಧರಿಸಿ ದೇವಸ್ಥಾನದ ಘಂಟೆ ಹೊಡೆದ ರಣಬೀರ್, ಡಿಸಾಸ್ಟರ್ ಎಂದ ನೆಟ್ಟಿಗರು
 

ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರವನ್ನು ಯಶ್ ರಾಜ್ ಫಿಲಂಸ್ ನಿರ್ಮಿಸಿದೆ. ಇದು 1800 ರ ದಶಕದ ಕತೆಯನ್ನು ಹೊಂದಿದೆ. ಬ್ರಿಟಿಷರಿಂದ ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಡಕಾಯಿತ್‌ ಬುಡಕಟ್ಟು ಜನಾಂಗದ ಕಥೆಯನ್ನು ಇದು ಹೇಳುತ್ತದೆ. ಚಿತ್ರವು ಜುಲೈ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ರಣಬೀರ್ ಕಪೂರ್ ವಾಣಿ ಕಪೂರ್ 'Shamshera' ಜುಲೈ 22 ರಂದು ಬಿಡುಗಡೆ
 

ನಿರ್ದೇಶಕ ಕರಣ್ ಮಲ್ಹೋತ್ರಾ ಅವರ ಈ ಸಿನಿಮಾವು 3 ಭಾಷೆಗಳಲ್ಲಿ ಅಂದರೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸ್ವಾತಂತ್ರ್ಯ ಪೂರ್ವದ ಡಕಾಯಿತರ ಕಥೆಯಾಗಿದ್ದು, ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಚಿತ್ರದಲ್ಲಿ ಡಕಾಯಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಈ ಚಿತ್ರವನ್ನು ಈ ವರ್ಷ ಮಾರ್ಚ್ 18 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು ಆದರೆ ಕೊರೋನಾ ಕಾರಣ ಅದನ್ನು ಮುಂದೂಡಲಾಯಿತು. 

Latest Videos
Follow Us:
Download App:
  • android
  • ios