ವಿವಾದದಲ್ಲಿ ಬ್ರಹ್ಮಾಸ್ತ್ರ; ಶೂ ಧರಿಸಿ ದೇವಸ್ಥಾನದ ಘಂಟೆ ಹೊಡೆದ ರಣಬೀರ್, ಡಿಸಾಸ್ಟರ್ ಎಂದ ನೆಟ್ಟಿಗರು
ಬ್ರಹ್ಮಾಸ್ತ್ರ ಟ್ರೈಲರ ರಿಲೀಸ್ ಆದ ಬೆನ್ನಲ್ಲೇ ಈಗ ವಿವಾದದಲ್ಲಿ ಸಿಲುಕಿದೆ. ಟ್ರೈಲರ್ ಧಾರ್ಮಿಕ ಭಾವನೆಗೆ ಧಕ್ಕೆ ದಂತಿದೆ ಎನ್ನುವ ಆರೋಪ ಕೇಳಿಬಂದಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಟ್ರೈಲರ್‌ನ ಒಂದು ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಿವುಡ್ ಸ್ಟಾರ್ ದಂಪತಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ (Ranbir Kapoor and Alia Bhatt) ನಟನೆಯ ಬಹುನಿರೀಕ್ಷೆಯ ಬ್ರಹ್ಮಾಸ್ತ್ರ (Brahmastra) ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ವಿವಾದದಲ್ಲಿ ಸಿಲುಕಿದೆ. ಬ್ರಹ್ಮಾಸ್ತ್ರ ಸಿನಿಮಾ ಸೆಟ್ಟೇರಿ 5 ವರ್ಷದ ಮೇಲಾಗಿದೆ. ಸುದೀರ್ಘಾವಧಿಯ ಚಿತ್ರೀಕರಣ ಮಾಡಿ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಟ್ರೈಲರ ರಿಲೀಸ್ ಆದ ಬೆನ್ನಲ್ಲೇ ಈಗ ವಿವಾದದಲ್ಲಿ ಸಿಲುಕಿದೆ. ಟ್ರೈಲರ್ ಧಾರ್ಮಿಕ ಭಾವನೆಗೆ ಧಕ್ಕೆ ದಂತಿದೆ ಎನ್ನುವ ಆರೋಪ ಕೇಳಿಬಂದಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಟ್ರೈಲರ್‌ನ ಒಂದು ದೃಶ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಟ್ರೈಲರ್‌ನಲ್ಲಿ ರಣಬೀರ್ ಕಪೂರ್ ಜೋರಾಗಿ ಓಡಿ ಬಂದು ದೇವಸ್ಥಾನಕ್ಕೆ ನುಗ್ಗುತ್ತಾರೆ. ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡುವ ರಣಬೀರ್ ಕಪೂರ್ (Ranbir Kapoor) ಶೂ ಧರಿಸಿಯೇ ಘಂಟೆ ಹೊಡೆದಿದ್ದಾರೆ. ಈ ದೃಶ್ಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಈ ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ವೈರಲ್ ಮಾಡಿ ಇದು ಬ್ರಹ್ಮಾಸ್ತ್ರ ಸಿನಿಮಾದ ದೊಡ್ಡ ಡಿಸಾಸ್ಟರ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಬ್ರಹ್ಮಾಸ್ತ್ರ ಅಯನ್ ಮುಖರ್ಜಿ ಸಾರಥ್ಯದಲ್ಲಿ ಬಂದ ಸಿನಿಮಾವಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶಿವ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರ ಬಗ್ಗೆಸಿನಿಮಾ ಮಾಡಿ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಶಿವನಿಗೆ ಮಾಡಿದ ಅಪಮಾನ ಎಂದು ಹೇಳುತ್ತಿದ್ದಾರೆ.
ಈ ಸಿನಿಮಾ ಭಾರತದ ಪುರಾಣದ ಆಧಾರದ ಮೇಲೆ ಬಂದ ಪ್ಯಾಂಟಸಿ ಸಿನಿಮಾವಾಗಿದೆ. ಟ್ರೈಲರ್ ರಿಲೀಸ್ ಆದ ನಂತರ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡಿದರು. ಆದರೆ ಪ್ರತಿ ದೃಶ್ಯವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಶೂ ಧರಿಸಿ ಘಂಟೆ ಬಾರಿಸಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ದೇವಸ್ಥಾನದ ಆವರಣದಲ್ಲಿ ಸ್ಪೋರ್ಟ್ಸ್ ಶೂ ಧರಿಸಿ ರಣಬೀರ್ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಅನೇಕರು ಇದೊಂದು ದೃಶ್ಯ ಬಿಟ್ಟರೆ ಟ್ರೈಲರ್ ಅದ್ಭುತವಾಗಿದೆ ಎನ್ನುತ್ತಿದ್ದಾರೆ.
ತಮ್ಮ ಮ್ಯಾರೀಡ್ ಲೈಫ್ ಬಗ್ಗೆ ಮಾತಾನಾಡಿದ Ranbir Kapoor
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆ ಅನೇಕ ಸ್ಟಾರ್ಸ್ ನಟಿಸಿದ್ದಾರೆ. ಮೌನಿ ರಾಯ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟಾಲಿವುಡ್ ಸ್ಟಾರ್ ನಾಗಾರ್ಜುನ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ನಾಗಾರ್ಜುನ ಅವರ ಒಂದು ದೃಶ್ಯ ಮಾತ್ರ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಇನ್ನು ಈ ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಅಲಿಯಾ-ರಣಬೀರ್ 'ಬ್ರಹ್ಮಾಸ್ತ್ರ'ಗೆ ಚಿರಂಜೀವಿ ಸಾಥ್; ಮೆಗಾಸ್ಟಾರ್ ಕಾಲಿಗೆ ಬಿದ್ದ ನಿರ್ದೇಶಕ, ವಿಡಿಯೋ ವೈರಲ್
ಬ್ರಹ್ಮಾಸ್ತ್ರ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಭಾಗ ಸೆಕ್ಟಂಬರ್ 9ರಂದು ರಿಲೀಸ್ ಆಗುತ್ತಿದೆ. ಪಾರ್ಟ್-2 ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಬ್ರಹ್ಮಾಸ್ತ್ರ ಸಿನಿಮಾ ಪ್ರಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಕಪೂರ್ ನಡುವೆ ಪ್ರೀತಿ ಪ್ರಾರಂಭವಾಗಿತ್ತು. ಸುಮಾರು 5 ವರ್ಷಗಳ ಪ್ರೀತಿಯ ಬಳಿಕ 2022ರಲ್ಲಿ ರಣಬೀರ್ ಮತ್ತು ಅಲಿಯಾ ಹಸಮಣೆ ಏರಿದರು. ಆದರೂ ಸಿನಿಮಾ ಇನ್ನು ರಿಲೀಸ್ ಆಗಿಲ್ಲ.