ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಏನಾಯ್ತು? ನಟ ರಣಬೀರ್​ ಕಪೂರ್ ವಿಡಿಯೋ ವೈರಲ್​

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಅಲ್ಲಿ ನಡೆದದ್ದೇನು ಎಂಬ ಬಗ್ಗೆ ಬಾಲಿವುಡ್​ ನಟ ರಣಬೀರ್​ ಕಪೂರ್​ ಮಾತನಾಡಿದ್ದಾರೆ. 
 

Ranbir Kapoor speaks about his interaction with Prime Minister Narendra Modi suc

ಪ್ರಧಾನಿ ನರೇಂದ್ರ  ಮೋದಿಯವರನ್ನು ಇದಾಗಲೇ ಹಲವಾರು ಬಾಲಿವುಡ್​ ಸ್ಟಾರ್ಸ್​ ಹಾಡಿ ಹೊಗಳಿದ್ದಾರೆ. ಈಗ ಅವರ ಸಾಲಿಗೆ ನಟ ರಣಬೀರ್​ ಕಪೂರ್​ ಸೇರಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ರಾಜಕೀಯದ ಬಗ್ಗೆ ಏನು ಹೇಳುತ್ತೀರಿ ಎಂದು ರಣಬೀರ್​ ಅವರಲ್ಲಿ ಕೇಳಿದಾಗ, ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಕುರಿತು ಹೇಳಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ನಾವು ಕೆಲವು ನಟರು ಮತ್ತು ನಿರ್ದೇಶಕರು ಭೇಟಿಯಾಗಲು ಹೋಗಿದ್ದೆವು. ಪ್ರಧಾನಿ ಅವರ ಭಾಷಣವನ್ನು ಟಿ.ವಿಯಲ್ಲಿ, ಫೋನ್​ನಲ್ಲಿ ಕೇಳಿದ್ದೆ. ಆದರೆ ಅವರನ್ನು ಭೇಟಿಯಾಗಲು ಹೋದಾಗ ಆ ಕ್ಷಣವೇ ರೋಮಾಂಚನಕಾರಿ ಎಂದಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲರನ್ನೂ ಸೆಳೆಯುವ ಕಾಂತೀಯ ಗುಣ (magnetic charm) 'ಮ್ಯಾಗ್ನೆಟಿಕ್‌ ಚಾರ್ಮ್‌' ಹೊಂದಿದ್ದಾರೆ. ಅವರನ್ನು ಭೇಟಿಯಾಗಿ ತುಂಬಾ ಖುಷಿಯಾಯಿತು ಎಂದಿದ್ದಾರೆ.

ಪ್ರಧಾನಿಯವರನ್ನು ಭೇಟಿಯಾಗಲು ನಾನು, ಆಲಿಯಾ ಭಟ್​, ವಿಕ್ಕಿ ಕೌಶಲ್​, ಕರಣ್​ ಜೋಹರ್​,  ಶಾರುಖ್​ ಖಾನ್​ ಸೇರಿದಂತೆ ಕೆಲವರು ಹೋಗಿದ್ವಿ. ಅವರು ನಮ್ಮನ್ನು ಕುಳ್ಳರಿಸಿ ಎದುರಿಗೆ ಕುಳಿತುಕೊಂಡರು. ನನಗೆ ಆಶ್ಚರ್ಯ ಆಗಿದ್ದು ಏನೆಂದರೆ, ಅವರು ಪ್ರತಿಯೊಬ್ಬರಲ್ಲಿಯೂ ಅವರವರ ಪರ್ಸನಲ್​ ಲೈಫ್​ ಕುರಿತು ಮಾತನಾಡಿದರು. ಅಂಥ ದೊಡ್ಡ ವ್ಯಕ್ತಿ ಅವರು. ನಮ್ಮ ಪ್ರತಿಯೊಬ್ಬರ ವೈಯಕ್ತಿಕ ಬದುಕು ಕೂಡ ಅವರಿಗೆ ತಿಳಿದಿರುವುದು ಅಚ್ಚರಿಯುಂಟು ಮಾಡಿತು ಎಂದಿದ್ದಾರೆ. ಆಗ ನನ್ನ ತಂದೆಯ ಟ್ರೀಟ್​ಮೆಂಟ್​ ನಡೆಯುತ್ತಿತ್ತು. ಅದು ಅವರಿಗೆ ತಿಳಿದು ಅದರ ಬಗ್ಗೆ ಪ್ರಶ್ನಿಸಿದರು. ಆಲಿಯಾಗೆ ಆಕೆಯ ವೈಯಕ್ತಿಕ ಜೀವನದ ವಿಷಯ, ಹಾಗೆನೇ ವಿಕ್ಕಿ ಕೌಶಲ್​, ಕರಣ್​ ಜೋಹರ್​,  ಶಾರುಖ್​ ಖಾನ್​ ಹೀಗೆ ಪ್ರತಿಯೊಬ್ಬರಿಗೂ ವಿಭಿನ್ನವಾಗಿಯೇ  ಮಾತನಾಡಿದರು. ಅವರ ವೈಯಕ್ತಿಕ ಬದುಕಿನ ಪ್ರಶ್ನೆ ಕೇಳಿದರು ಎಂದು ರಣಬೀರ್​ ಕಪೂರ್​ ನೆನಪಿಸಿಕೊಂಡಿದ್ದಾರೆ. 

ಸ್ಟೈಲ್​ನಲ್ಲಿ ಅಮ್ಮನನ್ನೇ ಮೀರಿಸ್ತಿದ್ದಾಳೆ ಪುಟಾಣಿ ರಾಹಾ: ಆಲಿಯಾ ಪುತ್ರಿಯ ಕ್ಯೂಟ್​ ವಿಡಿಯೋ ವೈರಲ್​
 
ಹೀಗೆ ಪ್ರತಿಯೊಬ್ಬರ ಬಗ್ಗೆ ತಿಳಿದುಕೊಳ್ಳುವ  ಎಫರ್ಟ್​ ದೊಡ್ಡ ಮನುಷ್ಯರಲ್ಲಿ ಮಾತ್ರ ಕಾಣಲು ಸಾಧ್ಯ. ಅಂಥ  ಅಂತಹ ಪ್ರಯತ್ನಗಳನ್ನು ಮಹಾನ್ ವ್ಯಕ್ತಿಗಳು ನೀಡಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಅಂಥ ಮಹಾನ್​ ವ್ಯಕ್ತಿತ್ವ ಕಂಡೆ ಎಂದು ರಣಬೀರ್​ ಕಪೂರ್​ ಹೇಳಿದ್ದಾರೆ. ಇದಾಗಲೇ ಬಾಲಿವುಡ್​ ನಟರಾದ ಅಕ್ಷಯ್​ ಕುಮಾರ್​, ಅನುಪಮ್​ ಖೇರ್​, ಶಾರುಖ್​ ಖಾನ್​ ಸೇರಿದಂತೆ ಹಲವರು ಪ್ರಧಾನಿಯವರನ್ನು ವಿಭಿನ್ನ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.

ಇತ್ತೀಚೆಗೆ ಹಾಲಿವುಡ್ ನಟ ರಿಚರ್ಡ್ ಗೆರೆ ಅವರು ಕೂಡ ಪ್ರಧಾನಿ ನರೇಂದ್ರ  ಮೋದಿಯವನ್ನು ಕೊಂಡಾಡಿದ್ದರು. ಇವರು ಭಾರತದ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ಸಾಂಸ್ಕೃತಿಕ ರಾಯಭಾರಿ ಎಂದು ಶ್ಲಾಘಿಸಿದ್ದರು. ಯೋಗ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕಕ್ಕೆ ಮೋದಿಯವರು ತೆರಳಿದ್ದ ಸಂದರ್ಭದಲ್ಲಿ ಅವರ ಗುಣಗಾನ ಮಾಡಿದ್ದರು ರಿಚರ್ಡ್​ ಗೆರೆ. ಭಾರತದಂಥ ಸುಂದರ ದೇಶದಲ್ಲಿ, ಮೋದಿಯವರಂಥ ಪ್ರಧಾನಿ ಇರುವುದು ಅದ್ಭುತ. ಅವರು  ಭಾರತೀಯ ಸಂಸ್ಕೃತಿಯಂತೆಯೇ ವಿಶಾಲ ಮನೋಭಾವದವರು ಎಂದು ನಟ ಹೇಳಿದ್ದರು. 

ಹೈಕೋರ್ಟ್​ನಿಂದ ಸಂಸದೆ ಕಂಗನಾಗೆ ನೋಟಿಸ್​: ಸಂಸದೆ ಸ್ಥಾನಕ್ಕೆ ಎದುರಾಯ್ತಾ ಸಂಕಟ?
 

Latest Videos
Follow Us:
Download App:
  • android
  • ios