Asianet Suvarna News Asianet Suvarna News

250 ರೂಪಾಯಿಂದ 50 ಕೋಟಿ ಸಂಭಾವನೆವರೆಗೆ ರಣಬೀರ್​ ಪಯಣ... ಮೊದಲ ಸಂಬಳದ ಭಾವುಕ ಕಥೆ ಇಲ್ಲಿದೆ...

ರಣಬೀರ್​ ಕಪೂರ್​ ಅವರಿಗೆ ಸಿಕ್ಕ ಮೊದಲ ಸಂಬಳ 250 ರೂಪಾಯಿಗಳು. ಇಂದು 50 ಕೋಟಿ ಸಂಭಾವನೆ ಪಡೆವ ನಟ ಆ ದಿನಗಳನ್ನು ನೆನೆದದ್ದು ಹೀಗೆ... 
 

Ranbir Kapoor shared a heartwarming story about his first paycheck of Rs 250 suc
Author
First Published Jul 10, 2024, 3:01 PM IST

ರಣಬೀರ್​ ಕಪೂರ್​ ಇಂದು ಚಿತ್ರವೊಂದಕ್ಕೆ 30 ರಿಂದ 50 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ. ಅದರಲ್ಲಿಯೂ ಅನಿಮಲ್​ ಚಿತ್ರದ ಸಕ್ಸಸ್​ ಬಳಿಕ ಅವರ ಸಂಭಾವನೆಯೂ ಹೆಚ್ಚಾಗಿದೆ. ಅನಿಮಲ್​ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ರಾತ್ರೋರಾತ್ರಿ ಸ್ಟಾರ್​ ಆದವರು ಇವರು. ಆಲಿಯಾ ಭಟ್​ ಅವರ ಕೈಹಿಡಿದು ಮಗುವಾದ ಮೇಲೆ ರಣಬೀರ್​ ಅವರ ಅದೃಷ್ಟ ಇನ್ನಷ್ಟು ಖುಲಾಯಿಸಿದೆ. ಈಗ ಅವರ ಕೈಯಲ್ಲಿ ಕೆಲವು ಚಿತ್ರಗಳಿದ್ದು ಬಾಲಿವುಡ್​ನ ಸ್ಟಾರ್​ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ಇದೀಗ ಅವರ ಮೊದಲ ಸಂಬಳದ ವಿಷಯವೊಂದು ವೈರಲ್​ ಆಗಿದೆ. ಇಲ್ಲೊಂದು ಭಾವುಕ ಕಥೆಯೂ ಇದೆ.

ರಣಬೀರ್ ಕಪೂರ್ ಅವರ ಮೊದಲ ಸಂಬಳ 250 ರೂಪಾಯಿ! 70-80ರ ದಶಕದ ತಾರೆಯರು ಸಂಭಾವನೆ ಇಷ್ಟು ಪಡೆದರೆ ಅದು ದೊಡ್ಡ ಸುದ್ದಿಯೇ. ಆದರೆ ರಣಬೀರ್​ ಕಪೂರ್​ ಹಾಗಲ್ಲವಲ್ಲ. ಅವರಿಗೆ 42 ವರ್ಷ ವಯಸ್ಸು. ಆದರೆ ಇವರ ಮೊದಲು ಸಂಬಳ ಪಡೆದದ್ದು ಕೇವಲ 250 ರೂಪಾಯಿಯಂತೆ.  ಹೌದು. ಅದು 1996ರಲ್ಲಿ ಬಿಡುಗಡೆಯಾದ ಚಿತ್ರ ಎಂಬ ಬಗ್ಗೆ ಈಗ ನಟ ನೆನಪಿಸಿಕೊಂಡಿದ್ದಾರೆ.  ತಮ್ಮ ಮೊದಲ ಸಂಭಾವನೆಯ  ಬಗ್ಗೆ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದಾರೆ.  ಪ್ರೇಮ್ ಗ್ರಂಥ್​ ಎಂಬ ಚಿತ್ರವು 1996ರಲ್ಲಿ ಬಿಡುಗಡೆಯಾಗಿತ್ತು.  ಆಗ ರಣಬೀರ್​ ಅವರಿಗೆ ಕೇವಲ 13-14 ವರ್ಷ ವಯಸ್ಸು. ಆಗ ಅವರು ಸೆಟ್‌ಗಳಲ್ಲಿ ತಮ್ಮ ಚಿಕ್ಕಪ್ಪ ರಾಜೀವ್ ಕಪೂರ್ ಅವರಿಗೆ ಸಹಾಯ ಮಾಡಿದ್ದರು. ಆಗ ಅವರಿಗೆ 250 ರೂಪಾಯಿ ಸಂಬಳ ಕೊಡಲಾಗಿತ್ತು.  

ಅನಂತ್​ ಅಂಬಾನಿ- ರಾಧಿಕಾ ಮದುವೆ ಅಡುಗೆಯಲ್ಲಿ ಕೂದಲು! ಸಕತ್​ ವೈರಲ್​ ಆಗ್ತಿದೆ ವಿಡಿಯೋ...

ಈ ಹಣವನ್ನು ರಣಬೀರ್​ ಅವರು ತಮ್ಮ ತಾಯಿ, ಖ್ಯಾತ ನಟಿ  ನೀತು ಕಪೂರ್ ಅವರ ಪಾದಗಳಿಗೆ ವಿನಮ್ರವಾಗಿ ಇಟ್ಟು ನಮಸ್ಕಾರ ಮಾಡಿದ್ದರಂತೆ. ಆಗ ಮಗನ ಮೊದಲ ಸಂಬಳ ಕಂಡ ನೀತು ಅವರು ಕಣ್ಣೀರು ಹಾಕಿದ್ದುದಾಗಿ ರಣಬೀರ್​ ಹೇಳಿಕೊಂಡಿದ್ದಾರೆ.  ಅಮ್ಮ ನೀತು ಅವರ ಭಾವನಾತ್ಮಕ ಪ್ರತಿಕ್ರಿಯೆಯು ಅಮೂಲ್ಯವಾದುದು. ಅವರು ಕಣ್ಣೀರು ಸುರಿಸುತ್ತಾ, ತಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದರು ಎಂದು ನಟ ನೆನಪಿಸಿಕೊಂಡಿದ್ದಾರೆ. ‘ನನ್ನ ಮೊದಲ ಸಂಬಳ ರೂ. 250, ನಾನು ಪ್ರೇಮ್ ಗ್ರಂಥ್​ದಲ್ಲಿ ಸಹಾಯಕನಾಗಿ ಕೆಲಸ ಮಾಡುವಾಗ ಸ್ವೀಕರಿಸಿದ್ದೇನೆ. ಒಳ್ಳೆಯ ಹುಡುಗನಂತೆ, ನಾನು ನನ್ನ ತಾಯಿಯ ಕೋಣೆಗೆ ಹೋಗಿ ಅವಳ ಪಾದದ ಬಳಿ ಇಟ್ಟೆ. ಅವಳು ಅದನ್ನು ನೋಡಿ ಅಳಲು ಪ್ರಾರಂಭಿಸಿದಳು. ಇದು ನನಗೆ ಈಗಲೂ ಅಮೂಲ್ಯದ ಕ್ಷಣವಾಗಿದೆ ಎಂದು ನಟ ಹೇಳಿದ್ದಾರೆ. 

ಸದ್ಯ  ನಿತೀಶ್ ತಿವಾರಿ ಅವರು ರಾಮಾಯಾಣದಲ್ಲಿ ರಣಬೀರ್​ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ  ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ.   ರಾಮನಾಗಿ ಮಿಂಚಲಿರುವ ರಣಬೀರ್​ ಕಪೂರ್​ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ಘೋಷಿಸಿದ್ದರು. ಇವರು  ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಅದರಲ್ಲಿಯೂ ಅನಿಮಲ್​ ಚಿತ್ರದ ಸಾಕಷ್ಟು ವಿವಾದದ ಬಳಿಕ ರಾಮನಾಗಿ ಇವರು ಕಾಣಿಸಿಕೊಳ್ತಿರೋ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ, ಸಂಸದೆ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಆ ಬಳಿಕ ಘೋಷಣೆ ಮಾಡಿದ್ದ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದರು. ಆದರೆ ಈಚೆಗೆ ನಡೆದ  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಕೈಯಲ್ಲಿ ಗ್ಲಾಸ್​ ಹಿಡಿದಿರುವ ಫೋಟೋಗಳು ವೈರಲ್​ ಆಗಿದ್ದವು. ಜೊತೆಗೆ ನಾನ್​ವೆಜ್​ ಕೂಡ ಇರುವುದಾಗಿ ಹೇಳಲಾಗುತ್ತಿದ್ದು, ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಟನ ಬಗ್ಗೆ ಇನ್ನಿಲ್ಲದಂತೆ ಹಲವರು ಕಿಡಿ ಕಾರುತ್ತಿದ್ದಾರೆ.

ಜಹೀರ್​ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್​? ಒಂದು ಫೋಟೋ, ಹತ್ತಾರು ಪ್ರಶ್ನೆ!

Latest Videos
Follow Us:
Download App:
  • android
  • ios