Asianet Suvarna News Asianet Suvarna News
breaking news image

ಜಹೀರ್​ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್​? ಒಂದು ಫೋಟೋ, ಹತ್ತಾರು ಪ್ರಶ್ನೆ!

ಜಹೀರ್​ರನ್ನು ಮದ್ವೆಯಾಗ್ತಿದ್ದಂತೆಯೇ ಶತ್ರುಘ್ನ ಫ್ಯಾಮಿಲಿನಿಂದ ಸೋನಾಕ್ಷಿ ಔಟ್​ ಆದ್ರಾ? ಸಹೋದರ ಲವ ಶೇರ್​ ಮಾಡಿರುವ ಫೋಟೋ ವೈರಲ್​! 
 

Luv Sinha omits sister Sonakshi Sinha from parents anniversary post after her marriage suc
Author
First Published Jul 10, 2024, 1:01 PM IST

 ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ  ಸೋನಾಕ್ಷಿ ಸಿನ್ಹಾ ಮತ್ತು  ಜಹೀರ್ ಇಕ್ಬಾಲ್ ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆದರೂ ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅಷ್ಟಕ್ಕೂ ಇವರೇನೂ ದಿಢೀರ್‌ ಮದುವೆಯಾಗಿದ್ದಲ್ಲ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. 

ಕಟ್ಟಾ ಹಿಂದೂ ಸಂಪ್ರದಾಯವಾದಿಯಾಗಿರುವ ನಟ ಶತ್ರುಘ್ನ ಅವರು ತಮ್ಮ ಮನೆಗೆ ರಾಮಾಯಣ ಎಂದೂ, ಮಕ್ಕಳಿಗೆ ಲವ-ಕುಶ ಎಂದೂ ಹೆಸರು ಇಟ್ಟಿದ್ದಾರೆ. ಇದೇ ಕಾರಣಕ್ಕೆ ಮಗಳ ಮದುವೆ ಇನ್ನಷ್ಟು ಟ್ರೋಲ್​ಗೆ ಒಳಗಾಗಿತ್ತು, ಒಳಗಾಗುತ್ತಲೇ ಇದೆ. ತಾವು ತುಂಬಾ ಚೆನ್ನಾಗಿದ್ದೇವೆ ಎಂದು ತೋರಿಸುವುದಕ್ಕಾಗಿ ಅತ್ತ ಸೋನಾಕ್ಷಿ ಪತಿಯ ಜೊತೆ ಹೊಸ ಹೊಸ ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇದ್ದಾರೆ. ಸ್ವಲ್ಪ ದಿನದಲ್ಲಿ ಫ್ರಿಜ್​ ಸೇರುತ್ತಿ ಎಂದೆಲ್ಲಾ ಕೆಟ್ಟ ಕಮೆಂಟ್ಸ್​ ಬರುತ್ತಿರುವುದಕ್ಕೋ ಏನೋ, ಪತಿಯನ್ನು ಕಪಾಟಿನಲ್ಲಿ ಒದ್ದು ಕೂಡಿ ಹಾಕುವಂತೆ ತಮಾಷೆ ಮಾಡುವ ವಿಡಿಯೋ ಕೂಡ ಶೇರ್​ ಮಾಡಿಕೊಂಡಿದ್ದಾರೆ ಸೋನಾಕ್ಷಿ. ಅಷ್ಟೇ ಅಲ್ಲದೆ, ಶಾಪಿಂಗ್​ ಮಾಲ್​ನಲ್ಲಿ ಸೋನಾಕ್ಷಿಯ ಚಪ್ಪಲಿಯನ್ನು ಜಹೀರ್​ ಹಿಡಿದುಕೊಂಡು ಹೋಗಿದ್ದರು. ಹೀಗೆ ಸೋನಾಕ್ಷಿ ಸ್ವಲ್ಪ ಅತಿ ಎನ್ನಿಸುವಷ್ಟು ವಿಡಿಯೋಗಳನ್ನು  ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಆದರೂ ಟ್ರೋಲ್​  ಮಾತ್ರ ನಿಂತಿಲ್ಲ.

ಆರು ವರ್ಷದ ಡೇಟಿಂಗ್‌- ಮದ್ವೆಯಾದ ಎರಡೇ ದಿನಕ್ಕೆ ಪ್ರೆಗ್ನೆಂಟ್‌: ಆಸ್ಪತ್ರೆ ರಹಸ್ಯ ಬಾಯ್ಬಿಟ್ಟ ಸೋನಾಕ್ಷಿ

ಅಷ್ಟಕ್ಕೂ ಸೋನಾಕ್ಷಿ ಮದುವೆಯ ಸಂದರ್ಭದಲ್ಲಿ ಅಪ್ಪ ಶತ್ರುಘ್ನ ಹಾಜರಿದ್ದರೂ, ಸಹೋದರರು ಹೋಗಿರಲಿಲ್ಲ. ಅವರಲ್ಲಿ ಒಬ್ಬರಾಗಿರುವ ಲವ್​ ಈಗ ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ತನ್ನ ಅಪ್ಪ-ಅಮ್ಮ ಮತ್ತು ಇನ್ನೋರ್ವ ಸಹೋದರ ಕುಶ್​ ಅವರ ಫೋಟೋ ಮಾತ್ರ ಇದೆ. ಸೋನಾಕ್ಷಿ ಮಿಸ್​ ಆಗಿದ್ದಾರೆ. ನಿಮ್ಮಂಥ ಅಪ್ಪ-ಅಮ್ಮ ಪಡೆಯಲು ಪುಣ್ಯ ಮಾಡಿರಬೇಕು, ನಿಮ್ಮ ಜೊತೆ ಕಳೆದಿರುವ ಅದ್ಭುತ ಕ್ಷಣಗಳು ಸಂತೋಷಭರಿತವಾಗಿದೆ ಎನ್ನುತ್ತಲೇ ಅಪ್ಪ-ಅಮ್ಮಂದಿರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. ಈ ಒಂದು ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದ್ದು, ಇದರಲ್ಲಿ ಮನೆ ಮಗಳು ಸೋನಾಕ್ಷಿ ಇಲ್ಲದ್ದೇ ಹೈಲೈಟ್​ ಆಗುತ್ತಿದೆ. ಸೋನಾಕ್ಷಿಯನ್ನು ಶತ್ರುಘ್ನ ಫ್ಯಾಮಿಲಿಯಿಂದ ದೂರ ಇಟ್ಟಿರುವುದಾಗಿ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 

ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವಾಗಲೇ ಶತ್ರುಘ್ನಾ ಸಿನ್ಹಾ ಅವರಿಗೆ ಈ ವಿಷಯವನ್ನು ಕೇಳಲಾಗಿತ್ತು. ನಿಮ್ಮ ಮಗಳು ಅನ್ಯ ಧರ್ಮೀಯನೊಂದಿಗೆ ವಿವಾಹ ಆಗುತ್ತಿರುವುದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಆಗ ಚುನಾವಣಾ ಪ್ರಚಾರದಲ್ಲಿ ಬಿಜಿ ಇದ್ದ ನಟ ಅಚ್ಚರಿಯಿಂದ, ಹೌದಾ ಎಂದು ಪ್ರಶ್ನಿಸಿದ್ದರು.  'ನಾನು ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ನಾನು ಇಲ್ಲಿದ್ದೇನೆ. ನನ್ನ ಮಗಳ ಯೋಜನೆಗಳ ಬಗ್ಗೆ ನಾನು ಇನ್ನೂ ಮಾತನಾಡಿಲ್ಲ. ಅವಳು ಮದುವೆಯಾಗುತ್ತಿದ್ದಾಳಾ? ಅವಳು ನನಗೆ ಇನ್ನೂ ಏನನ್ನೂ ಹೇಳಿಲ್ಲ. ನಾನು ಮಾಧ್ಯಮಗಳಲ್ಲಿ ಓದಿದಷ್ಟು ಮಾತ್ರ ನನಗೆ ತಿಳಿದಿದೆ' ಎಂದಿದ್ದರು. ಮಗಳು ವಿಷಯವನ್ನು ತಿಳಿಸದೇ ಮದುವೆಯಾಗುತ್ತಿದ್ದಾಳೆ ಎಂದಾಗ ಅಪ್ಪನೊಬ್ಬನಿಗೆ ಆಗುವ ಆಘಾತ ಶತ್ರುಘ್ನ ಅವರಿಗೂ ಆಗಿತ್ತು. ಆದರೂ ಸಾವರಿಸಿಕೊಂಡು,  'ಅವಳು ಈ ಬಗ್ಗೆ ನನ್ನೊಂದಿಗೆ ಮಾತನಾಡುವಾಗ ವಿಷಯ ಹೇಳಲಿಲ್ಲ. ಆದರೆ ನನ್ನ ಆಶೀರ್ವಾದ ಖಂಡಿತಾ ಅವಳೊಂದಿಗೆ ಇರುತ್ತದೆ. ಏಕೆಂದರೆ, ಅವಳು ಪ್ರಪಂಚದ ಎಲ್ಲಾ ಸಂತೋಷವನ್ನು ಪಡೆಯಬೇಕೆಂದು ಹೆತ್ತವನಾ ನಾನು ಬಯಸುತ್ತೇನೆ' ಎಂದಿದ್ದರು  ಶತ್ರುಘ್ನಾ ಅವರು. ಆದರೆ ಮದುವೆಗೆ ಸಹೋದರರು ಹಾಜರು ಆಗಿರಲಿಲ್ಲ. ಈಗ ಸೋನಾಕ್ಷಿ ಹೊರತಾದ ಫೋಟೋ  ಶೇರ್​ ಮಾಡಿಕೊಂಡು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. 
 

ಪತ್ನಿಯ ಚಪ್ಪಲಿ ಕೈಯಲ್ಲಿ ಹಿಡಿದು ಸೋನಾಕ್ಷಿ ಪತಿ ಶಾಪಿಂಗ್​! ಫ್ರಿಜ್​ ಖರೀದಿ ಮಾಡ್ಬೇಡಿ ಅನ್ನೋದಾ ಟ್ರೋಲಿಗರು?

Latest Videos
Follow Us:
Download App:
  • android
  • ios