Asianet Suvarna News Asianet Suvarna News

ಅನಂತ್​ ಅಂಬಾನಿ- ರಾಧಿಕಾ ಮದುವೆ ಅಡುಗೆಯಲ್ಲಿ ಕೂದಲು! ಸಕತ್​ ವೈರಲ್​ ಆಗ್ತಿದೆ ವಿಡಿಯೋ...

ಅನಂತ್​ ಅಂಬಾನಿ- ರಾಧಿಕಾ ಮದುವೆ ಅಡುಗೆಯಲ್ಲಿ ಕೂದಲು! ವೈರಲ್​ ಆಗ್ತಿದೆ ಓರಿ ಅತ್ರಾಣಿಯ ವಿಡಿಯೋ 
 

Orry finds hair in vada pav at Ambanis pre wedding festivities in Portofino video viral suc
Author
First Published Jul 10, 2024, 12:34 PM IST

ಉದ್ಯಮಿ ಮುಖೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿವೆ. ಇನ್ನೇನು ಮದುವೆಗೆ ಎರಡೇ ದಿನ ಬಾಕಿ ಇದ್ದು, ಇದೇ 12ರಂದು ಇವರು ಸಪ್ತಪದಿ ತುಳಿಯಲಿದ್ದಾರೆ. ಇವರ ಮದುವೆಗೂ ಮುನ್ನ ಕಳೆದ ತಿಂಗಳು ನಡೆದ  ಸಮಾರಂಭ ಹಾಗೂ ಈಗ ನಡೆಯುತ್ತಿರುವ ಸಮಾರಂಭಗಳಲ್ಲಿ  ಇದಾಗಲೇ ಲಕ್ಷಾಂತರ ಬಗೆಯ ಖಾದ್ಯಗಳನ್ನು ಉಣಬಡಿಸಲಾಗಿದೆ. ಇಂಥ ಮದುವೆಗಳಲ್ಲಿ ಎಡವಟ್ಟು ಏನಾಗುತ್ತದೆ ಎಂದು ಕಾಯುವ ದೊಡ್ಡ ವರ್ಗವೂ ಇರುವ ನಡುವೆಯೇ, ಖಾದ್ಯವೊಂದರಲ್ಲಿ ಕೂದಲು ಸಿಕ್ಕಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಅಷ್ಟಕ್ಕೂ ಇದು ಪ್ರೀ ವೆಡ್ಡಿಂಗ್​ ಕಾರ್ಯಕ್ರಮ ಇಟಲಿಯಲ್ಲಿ ನಡೆದ ಸಂದರ್ಭದಲ್ಲಿ ನಡೆದ ಘಟನೆ ಆಗಿದ್ದು, ಅದರ ವಿಡಿಯೋ ಶೇರ್​ ಆಗುತ್ತಿದೆ. ಅಷ್ಟಕ್ಕೂ ಅದರ ವಿಡಿಯೋ ಶೇರ್​ ಮಾಡಿದವರು ಬೇರಾರೂ ಅಲ್ಲ, ಬಾಲಿವುಡ್​ನ ಪ್ರತಿಯೊಬ್ಬ ನಟ-ನಟಿಯರಿಗೂ ಬೇಕಾಗಿರುವ, ತಮ್ಮ ಎದೆಯ ಮೇಲೆ ಕೈಯಿಡಲು ಧಾರಾಳವಾಗಿ ನಟಿಯರು ಅವಕಾಶ ಕಲ್ಪಿಸಿಕೊಡುವ ಏಕೈಕ ವ್ಯಕ್ತಿ ಓರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ,

ಬಾಲಿವುಡ್​ನಲ್ಲಿ  ಓರಿಗೆ ಸಕತ್​ ಡಿಮಾಂಡ್​ ಇದೆ. ಇವರು ನಟಿಯರ ಎದೆಯ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವಲ್ಲಿ ನಿಸ್ಸೀಮರು. ಈತ ಯಾವ ಅಂಗವನ್ನಾದರೂ ಮುಟ್ಟಲು ಬಹುತೇಕ ಎಲ್ಲ ನಟಿಯರೂ ಅವಕಾಶ ಕಲ್ಪಿಸುತ್ತಾರೆ. ಇದು ಅವರಿಗೆ ಅದೃಷ್ಟವಂತೆ. ಹೀಗೆ ತಾರೆಯರ ಜೊತೆ ಪೋಸ್​ ಕೊಡಲು ಓರಿ ಲಕ್ಷದಿಂದ ಕೋಟಿ ಹಣವನ್ನೂ ಪಡೆಯುವುದು ಇದೆ. ಇಂತಿಪ್ಪ ಓರಿ ಈಗ ಅಂಬಾನಿ ಮದುವೆಯ ವಿಡಿಯೋ ಮಾಡಿ ಹಲ್​ಚಲ್​ ಸೃಷ್ಟಿಸಿದ್ದಾರೆ. ಇಟಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಒರಿ,  ವಡಾ ಪಾವ್​ ತಿನ್ನುವ ಸಂದರ್ಭದಲ್ಲಿ ಅವರ ಸ್ನೇಹಿತೆ  ತಾನಿಯಾ ಶ್ರಾಫ್​ಗೆ ಕೂದಲು ಸಿಕ್ಕಿದೆಯಂತೆ. ಇದರ ವಿಡಿಯೋ ಈಗ ವೈರಲ್​ ಆಗಿದೆ.


  
  ಸೆಲೆಬ್ರಿಟಿ ಪ್ರಭಾವಿ ಓರಿ ಅಂಬಾನಿ ಕುಟುಂಬದ ಈ ವಿವಾಹದ ವ್ಲಾಗ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಓರಿ ವ್ಲಾಗ್‌ನಲ್ಲಿ, ಅವರು ಆಹಾರದಲ್ಲಿ ಯಾವ ವಸ್ತುಗಳನ್ನು ಬಡಿಸಿದ್ದಾರೆ. ಅತಿಥಿಗಳಲ್ಲಿ ಯಾರು ಇದ್ದಾರೆ ಎಂಬುದನ್ನು ತೋರಿಸಿದರು. ಓರಿ ಮತ್ತು ಅವರ ಸ್ನೇಹಿತೆ ತಾನಿಯಾ ಶ್ರಾಫ್​ ಅವರು ಹಲವು ಆಹಾರಗಳ ರುಚಿ ಸವಿದಿದ್ದಾರೆ. ವೀಡಿಯೋ ನೋಡಿದ್ರೆ ಮದುವೆ ಕಾರ್ಯಕ್ರಮದ ಹೊರಗೆ ಜನ ಒಂದು ಸ್ಟಾಲ್‌ನಿಂದ ಇನ್ನೊಂದು ಸ್ಟಾಲ್‌ಗೆ ಹೋಗಿ ಬಗೆಬಗೆಯ ಖಾದ್ಯಗಳನ್ನು ಸವಿಯುತ್ತಿರುವುದು ಕಾಣಬಹುದು. ಆಹಾರವನ್ನು ಹೇಗೆ ಇಷ್ಟಪಟ್ಟಿದ್ದಾರೆ ಎಂಬುದರ ಕುರಿತು ಅವರು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪರಸ್ಪರರ ಪ್ಲೇಟ್‌ಗಳಿಂದ ಭಕ್ಷ್ಯಗಳನ್ನು ಸಹ ತಿನ್ನಲು ಪ್ರಯತ್ನಿಸುತ್ತಾರೆ. ಇಲ್ಲಿ, ಅತಿಥಿಗಳಿಗೆ ವಿವಿಧ ರೀತಿಯ ಖಾದ್ಯಗಳನ್ನು  ನೀಡಲಾಯಿತು. 

ಅದರ ನಡುವೆ ಅವರು ವಡಾ ಪಾವ್​ ಕೂಡ ತಿಂದಿದ್ದಾರೆ. ತಿನ್ನುವುದಕ್ಕೂ ಮುನ್ನವೇ ‘ಇದು ಅತ್ಯುತ್ತಮ ವಡಾ ಪಾವ್​’ ಎಂದು ಓರಿ ಹೇಳಿದ್ದಾರೆ. ಆಗ ಹಿಂದಿನಿಂದ ತಾನಿಯಾ ನನಗೆ ಇನ್ನೊಂದು ವಡಾ ಪಾವ್​ ಬೇಕು. ಏಕೆಂದ್ರೆ ಇದರಲ್ಲಿ ನನಗೆ ಕೂದಲು ಸಿಕ್ಕಿತು ಎಂದಿದ್ದಾರೆ. ಅದು ಕೂಡ ಈ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.  ಮೊದಲ ಬೈಟ್ ತೆಗೆದುಕೊಂಡ ನಂತರ, ತಾನಿಯಾ ಉತ್ಸುಕರಾಗಿ ವಾವ್ ಎಂದು ಹೇಳುತ್ತಾಳೆ. ಆದರೆ ಮುಂದಿನ ಕ್ಷಣದಲ್ಲಿ ಅವಳ ಗಮನ ಬೇರೆ ಕಡೆಗೆ ಹೋಗುತ್ತದೆ. ಅದನ್ನು ನೋಡಿದ ತಕ್ಷಣ ಪ್ಲೇಟ್ ನಲ್ಲಿ ಕೂದಲಿದೆ ಎಂದು ಹೇಳುತ್ತಾಳೆ. ಓರಿ ಪ್ಲೇಟ್‌ನಲ್ಲಿ ಜೂಮ್ ಮಾಡಿ ಈ ಕೂದಲನ್ನು ನೋಡಿದ ನಂತರ ಓರಿ ಎರಡನೇ ಬಾರಿಗೆ ವಡಾ ಪಾವ್‌ ತಿನ್ನುತ್ತಾನೆ. ಈ ವೇಳೆ ನನಗೆ ಎರಡನೇ ಬಾರಿಗೆ ತಿನ್ನಲು ಇಷ್ಟವಾಗುತ್ತಿದೆ. ಆದರೆ ಅದರಲ್ಲಿ ಕೂದಲು ಇದೆ ಎಂದು ತಾನಿಯಾ ಹೇಳುವುದನ್ನು ಕೇಳಬಹುದು.

Latest Videos
Follow Us:
Download App:
  • android
  • ios