ರಣಬೀರ್ ಕಪೂರ್‌ನ ಏರ್‌ಪೋರ್ಟ್ ಪಾರ್ಕಿಂಗ್‌ನಲ್ಲಿ ತಬ್ಬಿಕೊಂಡು ಮುದ್ದಾಡಿದ ಆಲಿಯಾ!
ಪತ್ನಿಗೆ ಬಿಗ್ ಸರ್ಪ್ರೈಸ್ ಕೊಟ್ಟ ರಣಬೀರ್ ಕಪೂರ್. ಸಂತೋಷದಿಂದ ಕುಣಿದು ಕುಪ್ಪಳಿಸಿದ ಆಲಿಯಾ...

ಹಾಲಿವುಡ್ ಹಾರ್ಟ್ ಆಫ್ ಸ್ಟೋನ್ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಹಿಂತಿರುಗಿರುವ ಆಲಿಯಾಗೆ ಪತಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಕಳೆದ ತಿಂಗಳು ಆಲಿಯಾ ಮತ್ತು ರಣಬೀರ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ಕ್ಯಾನ್ ಮಾಡಿಸುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ರಿವೀಲ್ ಮಾಡಿದ್ದರು.
ಪ್ರಗ್ನೆನ್ಸಿ ಅನೌನ್ಸ್ ಮಾಡಿದ ಎರಡೇ ದಿನಗದಲ್ಲಿ ಆಲಿಯಾ ಯೂರೋಪ್ ಪ್ರಯಾಣ ಮಾಡಿದ್ದರು.ಹಾಲಿವುಡ್ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿ ಬಂದಿದ್ದಾರೆ.
ಮುಂಬೈಗೆ ಆಗಮಿಸುತ್ತಿದ್ದಂತೆ ರಣಬೀರ್ ಕಪೂರ್ ಕಾರಿನಲ್ಲಿ ಬಂದು ಆಲಿಯಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ರಣಬೀರ್‌ನ ಕಂಡು ಆಲಿಯಾ ಸಂತಸ ವ್ಯಕ್ತ ಪಡಿಸಿದ್ದಾರೆ.
ಕಾರಿನ ಬ್ಯಾಕ್ ಸೀಟ್‌ನಲ್ಲಿ ಇಬ್ಬರೂ ಕುಳಿತುಕೊಂಡು ಬಿಗಿಯಾಗಿ ತಬ್ಬಿಕೊಂಡಿರುವಾಗ ಪ್ಯಾಪರಾಜಿಗಳು ಫೋಟೋ ಕ್ಲಿಕ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೊಮ್ಯಾಂಟಿಕ್ ಕ್ಷಣ ವೈರಲ್ ಆಗುತ್ತಿದೆ.
ಬ್ಲ್ಯಾಕ್ ಪ್ಯಾಂಟ್ ವೈಟ್ ಕೇಪ್ರಿಸ್‌ಗೆ ವೈಟ್ ಜ್ಯಾಕೆಟ್ ಧರಿಸಿದ್ದಾರೆ. ಫಿಟ್ ಆಂಡ್ ಬ್ರೈಟ್ ಬಣ್ಣದ ಡ್ರೆಸ್ ಧರಿಸುವ ಆಲಿಯಾ ಮೊದಲ ಬಾರಿ ಲೂಸ್ ಲೂಸ್ ಧರಿಸಿದ್ದಾರೆ.