ರಣಬೀರ್ ಕಪೂರ್, ಯಶ್, ಸಾಯಿಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಸದ್ಯ ಭಾರೀ ಸುದ್ದಿಯಲ್ಲಿದೆ. ನವೆಂಬರ್ 5ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿದೆ. ಇದರ ನಡುವೆ ರಣಬೀರ್ ಕಪೂರ್ ಅವರು ತಮ್ಮ ಮುದ್ದಿನ ಮಗಳು ರಾಹಾ ಕಪೂರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ವಿಚಾರ ಬಹಿರಂಗ ಪಡಿಸಿದ್ದಾರೆ.
ರಾಮಾಯಣ ಚಿತ್ರದಲ್ಲಿ ರಣಬೀರ್ ಪುತ್ರಿ ರಾಹಾ
ರಣಬೀರ್ ಕಪೂರ್ , ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾ ಇಂದು ನವೆಂಬರ್ 5ರಂದು ಬಿಡುಗಡೆಯಾಗಿದೆ. ಸದ್ಯ ಸಿನಿಮಾದ ತಾರಾಗಣ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ರಣಬೀರ್ ಕಪೂರ್ ಪಾಲಿಗೆ ಈ ಬಾರಿಯ ದೀಪಾವಳಿ ತುಂಬಾ ವಿಶೇಷವಾಗಿರಲಿದೆ. ಒಂದೆಡೆ ಅವರ ‘ರಾಮಾಯಣ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದರೆ, ಮತ್ತೊಂದೆಡೆ ಸಿನಿಮಾ ಬಿಡುಗಡೆಯಾದ ಮರುದಿನವೇ ಅವರ ಮುದ್ದಿನ ಮಗಳು ರಾಹಾ ಕಪೂರ್ ಅವರ ಜನ್ಮದಿನವೂ ಇದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರು ರಾಹಾ ಕೂಡ ‘ರಾಮಾಯಣ’ ಸಿನಿಮಾದ ಭಾಗವಾಗಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾದರೆ ನಟ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ.
ರಣಬೀರ್ ಕಪೂರ್ ಹಂಚಿಕೊಂಡ ಕುತೂಹಲಕಾರಿ ಘಟನೆ
ಇತ್ತೀಚೆಗೆ ರಣಬೀರ್ ಕಪೂರ್ ಅವರು ಸಂದರ್ಶನವೊಂದರಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಮುದ್ದಿನ ಮಗಳು ರಾಹಾ ಕಪೂರ್ ಬಗ್ಗೆ ಕೂಡ ಒಂದು ಆಸಕ್ತಿದಾಯಕ ವಿಚಾರವನ್ನು ತಿಳಿಸಿದ್ದಾರೆ. ರಣಬೀರ್ ಕಪೂರ್ ಮಾತನಾಡುತ್ತಾ, ‘ರಾಹಾಗೆ ರಾಮಾಯಣದ ಕಥೆಯ ಬಗ್ಗೆ ತುಂಬಾ ಆಸಕ್ತಿ ಇದೆ. ನಾನು ಮತ್ತು ಆಲಿಯಾ ಆಗಾಗ ಅವಳಿಗೆ ರಾಮಾಯಣದ ಕಥೆಯನ್ನು ಹೇಳುತ್ತಿರುತ್ತೇವೆ. ನಾವು ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾಗ ರಾಹಾ ಹಲವು ಬಾರಿ ಸೆಟ್ಗೂ ಬಂದಿದ್ದಳು. ಸಾಯಿ ಪಲ್ಲವಿ ಮತ್ತು ರವಿ ದುಬೆ ಜೊತೆಗೂ ಅವಳು ಕೆಲವು ಶಾಟ್ಗಳಲ್ಲಿ ಕಾಣಿಸಿಕೊಂಡಿದ್ದಾಳೆ’ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ರಾಹಾ
ಮುಂದುವರಿದು ಮಾತನಾಡಿದ ನಟ, ‘ರಾಹಾ ಈ ಸಂಪೂರ್ಣ ಪ್ರಯಾಣದ ಭಾಗವಾಗಿದ್ದಾಳೆ ಎಂಬುದು ನನಗೆ ತುಂಬಾ ಸಂತೋಷದ ವಿಚಾರ. ಈಗ ಅವಳು ಈ ಕಥೆಯನ್ನು ಪರದೆಯ ಮೇಲೆ ನೋಡಬಹುದು’ ಎಂದು ಹೇಳಿದ್ದಾರೆ.. ರಣಬೀರ್ ಕಪೂರ್ ಈ ಮಾಹಿತಿ ಹೇಳುತ್ತಿದ್ದಂತೆ, ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈ ಚಿತ್ರದ ಮೂಲಕ ಅಭಿಮಾನಿಗಳು ರಾಹಾಳನ್ನು ಕೂಡ ಪರದೆಯ ಮೇಲೆ ನೋಡಬಹುದಾಗಿದೆ. ಆದರೆ ಸಿನಿಮಾದಲ್ಲಿ ರಾಹಾಳ ಕೆಲವೇ ಕೆಲವು ಶಾಟ್ಗಳು ಇರಲಿವೆ.
ರಾಹಾ ಆಗಮನದಿಂದ ಬದಲಾಯಿತು ರಣಬೀರ್ ಜೀವನ
ಈ ಸಿನಿಮಾ ತಮಗೆ ಆಫರ್ ಆದಾಗ ತಾವು ಆಗಷ್ಟೇ ತಂದೆಯಾಗಿದ್ದೆ ಎಂದು ರಣಬೀರ್ ಕಪೂರ್ ಹೇಳಿದ್ದಾರ. ಇದಕ್ಕೆ ಅವರು ತಮ್ಮ ಮಗಳು ರಾಹಾಳೇ ಕಾರಣವೆಂದು ಹೇಳಿದ್ದಾರೆ. ‘ರಾಹಾ ನನ್ನ ಜೀವನಕ್ಕೆ ಬಂದ ನಂತರ ನನ್ನ ಬದುಕೇ ಬದಲಾಯಿತು. ನಾನು ಹೆಚ್ಚು ಜವಾಬ್ದಾರಿಯುತ ವ್ಯಕ್ತಿಯಾದೆ’ ಎಂದು ರಣಬೀರ್ ಕಪೂರ್ ತಿಳಿಸಿದ್ದಾರೆ.






