ಅಲಿಯಾ ಸದ್ಯ ಬಾಲಿವುಡ್‌ನ ಒಂದು ಸಿನಿಮಾ ಮತ್ತು ಹಾಲಿವುಡ್ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಸಹಿ ಮಾಡಿದ ಸಿನಿಮಾಗಳನ್ನು ಸಂಪೂರ್ಣ ಮಾಡುತ್ತಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸುವ ಮೂಲಕ ಅಲಿಯಾ ಮಗುವಾಗುವ ಮೊದಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಅಲಿಯಾ ಭಟ್ (Alia Bhatt ) ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ನಟಿ ಅಲಿಯಾ ಇತ್ತೀಚಿಗಷ್ಟೆ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಲಿಯಾ ಗರ್ಭಿಣಿ ಎಂದು ಗೊತ್ತಾಗುತ್ತಿದಂತೆ ಈಗಾಗಲೇ ಸಹಿ ಮಾಡಿದ ಸಿನಿಮಾಗಳ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಅಲಿಯಾ ಗರ್ಭಿಣಿ ಎಂದು ಬಹಿರಂಗ ಪಡಿಸಿದ ಬೆನ್ನಲ್ಲೇ ಶೂಟಿಂಗ್‌ಗೆ ಹಾಜರಾಗಿ ವೃತ್ತಿ ಪರತೆಮೆರೆದಿದ್ದರು. ಅಲಿಯಾ ಸದ್ಯ ಬಾಲಿವುಡ್‌ನ ಒಂದು ಸಿನಿಮಾ ಮತ್ತು ಹಾಲಿವುಡ್ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಸಹಿ ಮಾಡಿದ ಸಿನಿಮಾಗಳನ್ನು ಸಂಪೂರ್ಣ ಮಾಡುತ್ತಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸುವ ಮೂಲಕ ಅಲಿಯಾ ಮಗುವಾಗುವ ಮೊದಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 

ಅಲಿಯಾ ಭಟ್ ಹಾಲಿವುಡ್‌ನ ಹಾರ್ಟ್ ಆಫ್ ಸ್ಟೋನ್ ಸಿನಿಮಾ ಮೂಲಕ ಹಾಲಿವುಡ್ ಗೆ ಹಾರಿದ್ದರು. ಬಾಲಿವುಡ್ ನ ಅನೇಕ ಸ್ಟಾರ್ ಕಲಾವಿದರು ಬಾಲಿವುಡ್ ನಲ್ಲಿ ಖ್ಯಾತಿಗಳಿಸುತ್ತಿದ್ದಂತೆ ಹಾಲಿವುಡ್‌ಗೆ ಹಾರಿದ್ದರು. ಅಲಿಯಾ ಕೂಡ ಹಾಲಿವುಡ್ ಸಿನಿಮಾಗೆ ಸಹಿ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದರು. ಹಾಲಿವುಡ್ ಸಿನಿಮಾದ ಚಿತ್ರೀಕರಣ ಇನ್ನು ಬಾಗಿ ಇರುವಾಗಲೇ ಅಲಿಯಾ ಗರ್ಭಣಿ ಎಂದು ಆಗಿದ್ದಾರೆ. ಆದರೂ ಚಿತ್ರೀಕರಣ ಸಂಪೂರ್ಣ ಮಾಡಿದ್ದಾರೆ.

ಈ ಬಗ್ಗೆ ಅಲಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಚಿತ್ರೀಕರಣ ಮುಗಿಸಿದ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಅಲಿಯಾ, ಹಾರ್ಟ್ ಆಫ್ ಸ್ಟೋನ್ ನೀವೆಲ್ಲರು ನನ್ನ ಹೃದಯದಲ್ಲಿದ್ದೀರಾ. ಗಾಲ್ ಗಾಡೋಟ್ ಅವರಿಗೆ ಧನ್ಯವಾದಗಳು. ನಿರ್ದೇಶಕ ಟಾಮ್ ಹಾರ್ಪರ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಇಡೀ ತಂಡದ ಜೊತೆಗಿನ ಅನುಭವ ಮರೆಯಲು ಸಾಧ್ಯವಿಲ್ಲ. ನಾನು ಪಡೆದ ಪ್ರೀತಿ ಮತ್ತು ಕಾಳಜಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ. ನೀವೆಲ್ಲರೂ ಚಲನಚಿತ್ರವನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ. ಆದರೆ ಸದ್ಯಕ್ಕೆ ನಾನು ಮನೆಗೆ ಬರುತ್ತಿದ್ದೇನೆ babyyyyy' ಎಂದು ಹೇಳಿದ್ದಾರೆ. 

ಪತಿ ರಣಬೀರ್‌ ಅವರ ಎಕ್ಸ್‌ ಗರ್ಲ್‌ಫ್ರೆಂಡ್ಸ್‌ ಜೊತೆ ಆಲಿಯಾ ಭಟ್‌ ಸಂಬಂಧ ಹೇಗಿದೆ ಗೊತ್ತಾ?

ಚಿತ್ರೀಕರಣ ಮುಗಿಸಿ ಮನೆಗೆ ವಾಪಾಸ್ ಆಗುವುದಾಗಿ ಪತಿ ರಣಬೀರ್ ಕಪೂರ್ ಅವರಿಗೆ ಹೇಳಿದ್ದಾರೆ. ಆಲಿಯಾ ಮನೆಗೆ ಹಿಂತಿರುಗಲು ಹೆಚ್ಚು ಉತ್ಸುಕರಾಗಿದ್ದಾರೆ. ಪತಿ ರಣಬೀರ್ ಜೊತೆ ಅಲಿಯಾ ಶಂಶೇರಾ ಸಿನಿಮಾದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಮತ್ತೆ ಬಾಲಿವುಡ್ ಸಿನಿಮಾಗಳ ಕೆಲಸ ಪ್ರಾರಂಭಿಸಲಿದ್ದಾರೆ. 

ವ್ಯಾನಿಟಿ ವ್ಯಾನ್‌ನಲ್ಲಿ ಸೆಕ್ಸ್ ನಿಂದ ಹನಿಮೂನ್ ವರೆಗೆ ಎಲ್ಲಾ ವಿಷಯ ಬಿಚ್ಚಿಟ್ಟ ರಣವೀರ್‌

ಅಲಿಯಾ ಬಾಲಿವುಡ್ ನಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕರಣ ಮುಗಿಸಬೇಕಿದೆ. ಇನ್ನು ಈಗಾಗಲೇ ಬ್ರಾಹ್ಮಾಸ್ತ್ರ ಮತ್ತು ಡಾರ್ಲಿಂಗ್ ಚಿತ್ರೀಕರಣ ಮುಗಿಸಿದ್ದು ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಗರ್ಭಿಣಿಯಾಗಿದ್ದರು ಅಲಿಯಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.