ಅಲಿಯಾ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆಗಲು ಕಾರಣ ಇತ್ತೀಚಿಗೆ ರಣಬೀರ್ ಕಪೂರ್ ಹೇಳಿದ ಒಂದು ಸುಳ್ಳು ಎರಡು ಸತ್ಯ. ಇದೀಗ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಗರ್ಭಿಣಿ ಆಗಿರುವ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಜೊತೆ ಸಂತಸದ ವಿಚಾರ ಹಂಚಿಕೊಂಡಿದ್ದರು. ಮದುವೆಯಾಗಿ ಎರಡು ತಿಂಗಳಾಗಿಲ್ಲ ಇಷ್ಟು ಬೇಗ ಗರ್ಭಿಣಿನಾ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಿದ್ದರು. ಅಂದಹಾಗೆ ರಣಬೀರ್ ಮತ್ತು ಅಲಿಯಾ ಇಬ್ಬರು ಏಪ್ರಿಲ್ 14ರಂದು ಹಸೆಮಣೆ ಏರಿದರು. ಆಪ್ತರು ಮತ್ತು ಬಾಲಿವುಡ್ ನ ಕೆಲವು ಗಣ್ಯರ ನಡುವೆ ಅಲಿಯಾ-ರಣಬೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಕೆಲವೇ ದಿನಕ್ಕೆ ಗುಡ್ ನ್ಯೂಸ್ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಅಲಿಯಾ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿತ್ತು. ಅಲಿಯಾ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆಗಲು ಕಾರಣ ಇತ್ತೀಚಿಗೆ ರಣಬೀರ್ ಕಪೂರ್ ಹೇಳಿದ ಒಂದು ಸುಳ್ಳು ಎರಡು ಸತ್ಯ. 

ರಣಬೀರ್ ಕಪೂರ್ ಸದ್ಯ ಶಂಶೇರಾ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶಂಶೇರಾ ಸಿನಿಮಾ ಇದೇ ತಿಂಗಳು 22ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಮೋಷನ್ ಕಾರ್ಯ ಜೋರಾಗಿ ನಡೆಯುತ್ತಿದೆ. ಪ್ರಚಾರ ವೇಳೆ ರಣಬೀರ್ ಕಪೂರ್ ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆಇದೀಗ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ಪಿಂಕ್‌ವಿಲ್ಲಾ ಆಂಗ್ಲ ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

'ದಯವಿಟ್ಟು ವಿವಾದ ಸೃಷ್ಟಿಸಬೇಡಿ. ಅವರು ಮೂರು ವಿಷಯಗಳನ್ನು ಹೇಳಲು ನನ್ನನ್ನು ಕೇಳಿದರು. ಎರಡು ಸತ್ಯಗಳು ಮತ್ತು ಸುಳ್ಳು. ಈಗ ನಾನು ಸತ್ಯ ಯಾವುದು ಮತ್ತು ಸುಳ್ಳು ಯಾವುದು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಹೇಳಿದರು. ಅಂದರೆ ಇದು ನಿಜಾನಾ ಅಥವಾ ಸುಳ್ಳಾ ಎನ್ನುವುದನ್ನು ರಣಬೀರ್ ಕಪೂರ್ ಸ್ಪಷ್ಟವಾಗಿ ಹೇಳಿಲ್ಲ. ಆದರೆ ವಿವಾದ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. 

ಶೂಟಿಂಗ್ ನಲ್ಲಿ ಗರ್ಭಿಣಿ ಅಲಿಯಾ ಭಟ್; ಬೇಬಿ ಬಂಪ್ ಫೋಟೋ ವೈರಲ್

ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಎರಡು ಸತ್ಯ ಮತ್ತು ಸುಳ್ಳು ಹೇಳಿ ಎಂದಾಗ, 'ನನಗೆ ಅವಳಿ ಮಕ್ಕಳಾಗುತ್ತೆ, ನಾನು ದೊಡ್ಡ ಪೌರಾಣಿಕ ಚಿತ್ರದ ಭಾಗವಾಗಲಿದ್ದೇನೆ, ನಾನು ಕೆಲಸದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದೇನೆ' ಎಂದು ಅವರು ಹೇಳಿದರು. ಇದರಲ್ಲಿ ನಿಜ ಯಾವುದು ಎಂದು ಅಭಿಮಾನಿಗಳಿಗೆ ಬಿಟ್ಟಿದ್ದು ಎಂದು ಹೇಳಿದರು. 

ಕಪೂರ್ ಕುಟುಂಬದಲ್ಲಿ SSLC ಪಾಸ್ ಮಾಡಿದ ಮೊದಲ ಹುಡುಗ ರಣಬೀರ್; ರಿಸಲ್ಟ್ ಬಂದ್ಮೇಲೆ ಮಾಡಿದ್ದೇನು?

ಶಂಶೇರಾ ಮೂಲಕ ರಣಬೀರ್ ನಾಲ್ಕು ವರ್ಷಗಳ ನಂತರ ಥಿಯೇಟರ್‌ಗೆ ಬರುತ್ತಿದ್ದಾರೆ. ಶಂಶೇರಾ ಚಿತ್ರದಲ್ಲಿ ರಣಬೀರ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಸರಣಿ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್‌ಗೆ ಜೀವ ತುಂಬುತ್ತಾ ಎಂದು ಕಾದುನೋಡಬೇಕು. ಈ ಸಿನಿಮಾ ಬಳಿಕ ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗಲಿದೆ. ಸೆಪ್ಟಂಬರ್ 9ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.