ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ರಣಬೀರ್ ಕಪೂರ್: 'ಅನಿಮಲ್'ನಲ್ಲಿ ರಶ್ಮಿಕಾ ಕ್ಯಾರೆಕ್ಟರ್ ಡಮ್ಮಿನಾ.?
ಬಾಲಿವುಡ್‌ನಲ್ಲಿ ಈಗ ಸೂಪರ್ ಸ್ಟಾರ್ ರಣಬೀರ್ ಕಪೂರ್. ಯಾಕಂದ್ರೆ ಬಾಕ್ಸಾಫೀಸ್ನಲ್ಲಿ ಸತತ ಸೋಲಿನ ಸುಳಿಯಲ್ಲಿದ್ದ ಬಾಲಿವುಡ್ಗೆ ಗೆಲುವಿನ ಬ್ರಹ್ಮಾಸ್ತ್ರ ಆಗಿದ್ದು ಇದೇ ರಣಬೀರ್ ಕಪೂರ್. ಸಕ್ಸಸ್ ಗಾಗಿ ಕಾಯ್ತಿದ್ದ ರಣಬೀರ್ಗೆ ಬ್ರಹ್ಮಾಸ್ತ್ರ ಸಿನಿಮಾ ದೊಡ್ಡ ಗೆಲವುವನ್ನೇ ಕೊಟ್ಟಿತ್ತು.

ಬಾಲಿವುಡ್‌ನಲ್ಲಿ ಈಗ ಸೂಪರ್ ಸ್ಟಾರ್ ರಣಬೀರ್ ಕಪೂರ್. ಯಾಕಂದ್ರೆ ಬಾಕ್ಸಾಫೀಸ್ನಲ್ಲಿ ಸತತ ಸೋಲಿನ ಸುಳಿಯಲ್ಲಿದ್ದ ಬಾಲಿವುಡ್ಗೆ ಗೆಲುವಿನ ಬ್ರಹ್ಮಾಸ್ತ್ರ ಆಗಿದ್ದು ಇದೇ ರಣಬೀರ್ ಕಪೂರ್. ಸಕ್ಸಸ್ ಗಾಗಿ ಕಾಯ್ತಿದ್ದ ರಣಬೀರ್ಗೆ ಬ್ರಹ್ಮಾಸ್ತ್ರ ಸಿನಿಮಾ ದೊಡ್ಡ ಗೆಲವುವನ್ನೇ ಕೊಟ್ಟಿತ್ತು. ಇದೀಗ ರಣಬೀರ್ ಮತ್ತೆ ಶೈನ್ ಆಗ್ತಿದ್ದಾರೆ. ಅದು ಅನಿಮಲ್ ಸಿನಿಮಾದಲ್ಲಿ. ಒಬ್ಬ ಸಾಮಾನ್ಯ ವ್ಯಕ್ತಿ ಅನಿಮಲ್ ಆದ್ರೆ ಹೇಗಿರುತ್ತೆ ಅನ್ನೋ ರಾ ಮಾಸ್ ಸ್ಟೋರಿಯ ಅನಿಮಲ್ ಟೀಸರ್ ರಿಲೀಸ್ ಆಗಿದೆ. ಗ್ಯಾಂಗ್ ಸ್ಟರ್ ಅವತಾರದಲ್ಲಿ ರಣಬೀರ್ ವಿಜೃಂಭಿಸಿದ್ದಾರೆ.
ಕಿರಿಕ್ ಪಾರ್ಟಿ ಗೆದ್ದ ಮೇಲೆ ರಶ್ಮಿಕಾ ಗುರಿ ಬಾಲಿವುಡ್ ಮೇಲಿತ್ತು. ಹಿಂದಿಯಲ್ಲಿ ನಟಿಸಿದ್ದು ಆಯ್ತು. ಹಿಂದಿ ಸಿನಿಮಾಗಳ ಕ್ಯಾರೆಕ್ಟರ್ಅನ್ನ ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದ ರಶ್ಮಿಕಾ ಈಗ ಅನಿಮಲ್ನಲ್ಲಿ ಡಮ್ಮಿ ಆಗೋದ್ರಾ ಅನ್ನೋ ಡೌಟ್ ಶುರುವಾಗಿದೆ. ಯಾಕಂದ್ರೆ ಅನಿಮಲ್ ಟೀಸರ್ನಲ್ಲಿ ರಶ್ಮಿಕಾ ಒಂದೇ ಒಂದು ಸೀನ್ನಲ್ಲಿ ಹೀಗೆ ಬಂದು ಹಾಗೆ ಹೋಗ್ತಾರೆ. 100 ಕೋಟಿ ಬಜೆಟ್‌ನ ಅನಿಮಲ್ನಲ್ಲಿ ರಶ್ಮಿಕಾ ಮಂದಣ್ಣ ಗೌರಮ್ಮನ ಹಾಗೆ ಕಾಣಿಸುತ್ತಿದ್ದಾರೆ.
ಇಲ್ಲಿ ರಶ್ಮಿಕಾ ಹೆಸ್ರು 'ಗೀತಾಂಜಲಿ' ಆದರೆ ರಶ್ಮಿಕಾ ಪಾತ್ರದಲ್ಲಿ ಫೈಯರ್ ಕಾಣಿಸ್ತಿಲ್ಲ. ಚಿಕ್ಕ ವಯಸ್ಸಿನ ರಶ್ಮಿಕಾ ಗೃಹಿಣಿಯಾಗಿ ಮೆಚ್ಯೂರ್ ರೋಲ್ ಮಾಡಿದಂತಿದೆ. ರಣಬೀರ್ ಕಪೂರ್ ಲವರ್ ಬಾಯ್ ರೋಲ್ಗಳೇ ಹೆಚ್ಚು. ಆದ್ರೆ ಆ ಪ್ಯಾಟ್ರನ್ನಿಂದ ಸ್ವಲ್ಪ ವಿಭಿನ್ನವಾಗಿ ಯೋಚಿಸ್ತಿರೋ ರಣಬೀರ್ ಬರ್ಫಿ, ಸಂಜು, ಜಗ್ಗ ಜಾಸೂಸ್, ರಾಕ್ ಸ್ಟಾರ್ ಸಿನಿಮಾಗಳಲ್ಲಿ ಮಾರ್ಕೆಬಲ್ ರೋಲ್ ಮಾಡಿದ್ರು. ಈಗ ಅನಿಮಲ್ ಸಿನಿಮಾದಲ್ಲಿ ರಣಬೀಸ್ ಮಾಸ್ ಕಾ ಬಾಸ್ ಅನ್ನೋ ಹಾಗೆ ನಟಿಸಿದ್ದಾರೆ. ರಣಬೀರ್ ಕರಿಯರ್ನಲ್ಲೇ ಇದು ಡಿಫರೆಂಟ್ ರೋಲ್ ಡಿಫರೆಂಟ್ ಸಿನಿಮಾ ಅನ್ನಿಸುತ್ತಿದೆ.
ನನ್ನ ಆತ್ಮ ದೇಹದಿಂದ ಹೊರಗೆ ಹೋಗಿ ಪುನಃ ಬರುತ್ತಿದೆ: ರಶ್ಮಿಕಾ ಮಂದಣ್ಣ ವರ್ಕೌಟ್‌ಗೆ ಫ್ಯಾನ್ಸ್ ಫಿದಾ!
ಸೂಪರ್ ಡೈಲಾಗ್, ಸ್ಟಂಟ್ಗಳು ಥ್ರಿಲ್ ಆಗಿವೆ. ಮನೆಯಲ್ಲಿರುವ ಕೂಲ್ ಬಾಯ್ನಿಂದ ರೆಬೆಲ್ ಗ್ಯಾಂಗ್ಸ್ಟರ್ ತನಕ ರಣಬೀರ್ ಲುಕ್ ಭರ್ಜರಿಯಾಗಿದೆ. ಅನಿಮಲ್ ಸಿನಿಮಾದ ಹೈಲೆಟ್ ಸಿನಿಮಾದಲ್ಲಿರೋ ಸ್ಟಾರ್ಸ್. ಅನೀಲ್ ಕಪೂರ್ ರಣಬೀರ್ ಕಪೂರ್ ತಂದೆಯ ರೋಲ್ ಮಾಡಿದ್ದಾರೆ. ಬಾಬಿ ಡಿಯೋಲ್ ವಿಲನ್ ಕ್ಯಾರೆಕ್ಟರ್ ಇಂಟ್ರೆಸ್ಟಿಂಗ್ ಆಗಿದೆ. 100 ಕೋಟಿ ಬಜೆಟ್ನ ಅನಿಮಲ್ಗೆ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಕ ಸಂದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ 1ಕ್ಕೆ ಅನಿಮಲ್ ರಿಲೀಸ್ ಆಗ್ತಿದೆ.