ನನ್ನ ಆತ್ಮ ದೇಹದಿಂದ ಹೊರಗೆ ಹೋಗಿ ಪುನಃ ಬರುತ್ತಿದೆ: ರಶ್ಮಿಕಾ ಮಂದಣ್ಣ ವರ್ಕೌಟ್‌ಗೆ ಫ್ಯಾನ್ಸ್ ಫಿದಾ!
ನಟಿ ರಶ್ಮಿಕಾ ಮಂದಣ್ಣ ಜಿಮ್ ವರ್ಕ್‌ಔಟ್ ವಿಡಿಯೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೊದಲಿನಿಂದಲೂ ಫಿಟ್‌ನೆಸ್ ಫ್ರೀಕ್ ಆಗಿರುವ ರಶ್ಮಿಕಾ ಮಂದಣ್ಣ ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ವಿಡಿಯೋ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹೊಸ ಫೋಟೋಶೂಟ್ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ತಮ್ಮ ದಿನ ನಿತ್ಯದ ಚಟುವಟಿಕೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸದ್ಯ ಜಿಮ್ ವರ್ಕ್‌ಔಟ್ ವಿಡಿಯೋವೊಂದನ್ನು ರಶ್ಮಿಕಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೊದಲಿನಿಂದಲೂ ಫಿಟ್‌ನೆಸ್ ಫ್ರೀಕ್ ಆಗಿರುವ ರಶ್ಮಿಕಾ ಮಂದಣ್ಣ ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಾರೆ.
ನನ್ನ ಆತ್ಮ ದೇಹದಿಂದ ಹೊರಗೆ ಹೋಗಿ ಪುನಃ ಬರುತ್ತಿರುವ ಈ ವಿಡಿಯೋವನ್ನು ಜುನೈದ್ ಸೆರೆಹಿಡಿದಿದ್ದಾರೆ. ಅವರು ನಿಧಾನವಾಗಿ ನನ್ನನ್ನು ಸೂಪರ್ ಹ್ಯೂಮನ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೋಡುವಾಗ ನನ್ನ ಮನಸಿಗೆ ತುಂಬಾ ಖುಷಿ ಆಗುತ್ತದೆ ಎಂದಿದ್ದಾರೆ.
ವಿಡಿಯೋದಲ್ಲಿ ರಶ್ಮಿಕಾ ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿಕೊಂಡು ಕಷ್ಟಪಟ್ಟು ವರ್ಕೌಟ್ ಮಾಡುವುದನ್ನು ಕಾಣಬಹುದು. ನಟಿ ತುಂಬಾ ಶ್ರಮ ವಹಿಸಿ ಕಾಲಿಗೆ ಬೇಕಾದ ವರ್ಕೌಟ್ ಮಾಡುತ್ತಿದ್ದಾರೆ.
ರಶ್ಮಿಕಾ ಅವರ ವರ್ಕೌಟ್ ವಿಡಿಯೋ ನೋಡಿದ ನೆಟ್ಟಿಗರು ಲವ್ ಎಮೋಜಿ ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನರು ನಟಿಯ ಈ ವರ್ಕೌಟ್‌ಗೆ ಫಿದಾ ಆಗಿದ್ದು ಅವರ ಫಿಟ್ನೆಸ್ ಪ್ರೀತಿಯನ್ನು ಕೊಂಡಾಡಿದ್ದಾರೆ.
ರಶ್ಮಿಕಾ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀವಲ್ಲಿಯಾಗಿ ಅಲ್ಲು ಅರ್ಜುನ್ ಜೊತೆ ಸಖತ್ ಆಗಿ ಮಿಂಚಿದ ರಶ್ಮಿಕಾ ಮಂದಣ್ಣ ಈಗ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಶ್ರೀವಲ್ಲಿ ಹಾಗೂ ಪುಷ್ಪರಾಜ್ ಮದುವೆ ನಡೆದಿತ್ತು.