Asianet Suvarna News Asianet Suvarna News

4 ದಿನಗಳಲ್ಲಿ 500 ಕೋಟಿ ಬಾಚಿದ ರಶ್ಮಿಕಾ ಮಂದಣ್ಣ 'ಅನಿಮಲ್'; ಇದು ಲಕ್ ಲೆಕ್ಕಾಚಾರ ಅಂತಾರೆ ನೆಟ್ಟಿಗರು!

ಸೂಪರ್ ಹಿಟ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ ರಣಬೀರ್ ಸಿನಿಮಾ. ಶಾರುಖ್ ಖಾನ್ ಪಠಾನ್ ಕಲೆಕ್ಷನ್ ಮೀರಿಸಿದೆ ಅನಿಮಲ್....
 

Ranbir Kapoor Rashmika Mandanna animal film 4th day collection 500 crore vcs
Author
First Published Dec 5, 2023, 4:43 PM IST

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಅನಿಮಲ್ ಸಿನಿಮಾ ನಾಲ್ಕನೇ ದಿನಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ನಾಲ್ಕನೇ ದಿನಕ್ಕೆ 425 ಕೋಟಿ ರೂಪಾಯಿ ಕಳಿಸಿರುವ ಅನಿಮಲ್ ಸಿನಿಮಾ ಒಂದು ವಾರದಲ್ಲಿ 500 ಕೋಟಿ ಕಲೆಕ್ಷನ್ ಮಾಡುವುದರಲ್ಲಿ ಅನುಮಾನವಿಲ್ಲ. ಇದು ಭಾರತ ಮಾತ್ರವಲ್ಲ ದೇಶಾದ್ಯಂತ ಮಾಡಿರುವ ಕಲೆಕ್ಷನ್ ಎಂದು ಆಂಗ್ಲ ವೆಬ್‌ ಸೈಟ್‌ಗಳು ಸುದ್ದಿ ಮಾಡಿದೆ.  

ಸಂದೀಪ್ ರೆಡ್ಡಿ  ನಿರ್ದೇಶನ ಮಾಡಿರುವ ಅನಿಮಲ್ ಸಿನಿಮಾ ಬಗ್ಗೆ ಫಿಲ್ಮ್ ಟ್ರೇಡ್ ಅನಾಲಿಸ್ಟ್‌ ರಮೇಶ್ ಬಾಬ ಟ್ವೀಟ್ ಮಾಡಿರುವ ಮಾಹಿತಿ ಪ್ರಕಾರ ' ನಾರ್ಥ್‌ ಅಮೇರಿಕಾದಲ್ಲಿ 7 ಮಿಲಿಯನ್‌ಗೂ ಹೆಚ್ಚು ಕಲೆಕ್ಷನ್ ಮಾಡುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಅನಿಮಲ್ 5ನೇ ಸ್ಥಾನ ಪಡೆಯಲಿದೆ. ಇದಾದ ಮೇಲೆ ಶಾರುಖ್ ಖಾನ್ ಪಠಾನ್, ಜವಾನ್, ಮತ್ತು ಜೈಲರ್ ಸಿನಿಮಾ ಸೇರಲಿದೆ' ಎಂದು ಟ್ವೀಟ್ ಮಾಡಿದ್ದಾರೆ. 

ಎಲ್ರೂ ಉಗಿದು ಓಡಿಸಿದ ಮೇಲೂ ಕನ್ನಡ ಬೇಕಾ?; ರಶ್ಮಿಕಾ ಮಂದಣ್ಣ ಮಾತು ಕೇಳಿ ನೆಟ್ಟಿಗರು ಗರಂ

ಇನ್ನು ಭಾರತದಲ್ಲಿ ಅನಿಮಲ್ ಸಿನಿಮಾ ನಾಲ್ಕನೇ ದಿನಕ್ಕೆ 40 ಕೋಟಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ದಿನದಿಂದ ಸುಮಾರು 60 ಕೋಟಿ ಕಲೆಕ್ಷನ್ ಮಾಡುತ್ತಿದೆ. ಸೋಮವಾರ 39.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಲೆಕ್ಕಚಾರದ ಪ್ರಕಾರ ಭಾರತದಲ್ಲಿ 241 ಕೋಟಿ ಕಲೆಕ್ಷನ್ ಮಾಡಿದೆ.  ಇನ್ನು ಬಿಡಿಸಿ ಹೇಳಬೇಕು ಅಂದ್ರೆ ಮೊದಲ ದಿನ 63.8 ಕೋಟಿ ಕಲೆಕ್ಷನ್, ಎರಡನೇ ದಿನ 66.27 ಕೋಟಿ ಕಲೆಕ್ಷನ್‌, ಮೂರನೇ ದಿನ 71.46 ಕೋಟಿ ಕಲೆಕ್ಷನ್ಮಾಡಿದೆ. 

ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟಿಸಿದ್ದಾರೆ. ನಿರ್ದೇಶನ ಮತ್ತು ಎಡಿಟಿಂಗ್‌ನ ಸಂದೀಪ್ ರೆಡ್ಡಿ ಮಾಡಿದ್ದಾರೆ. ಭೂಷಣ್ ಕುಮಾರ್, ಕೃಷ್ಣ ಕುಮಾರ್, ಮುರಾದ್ ಮತ್ತು ಪ್ರಣಯ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 

ಕೈಯಲ್ಲಿ ಬೇಕಾದಷ್ಟು ಹಣವಿತ್ತು; ದಿಢೀರನೆ ಸೂರ್ಯನ ಜೊತೆ ಮದುವೆ ಮಾಡಿಕೊಳ್ಳಲು ಕಾರಣ ಬಿಚ್ಚಿಟ್ಟ ಜ್ಯೋತಿಕಾ!

'ಅನಿಮಲ್'ಗೆ ಅಡಲ್ಟ್​ ಸರ್ಟಿಫಿಕೇಟ್:

ಚಿತ್ರದ ಹಾಡೊಂದು ಬಿಡುಗಡೆಯಾದ ದಿನ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಲಿಪ್​ಲಾಕ್​ ಸೀನ್​ ಸಾಕಷ್ಟು ಹಲ್​ಚಲ್​ ಸೃಷ್ಟಿಸಿರುವುದು ಗೊತ್ತೇ ಇದೆ.  ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ  ಲಿಪ್​ಲಾಕ್​  ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ಆದರೆ ಇಂಥ ದೃಶ್ಯಗಳು ಚಿತ್ರಗಳಲ್ಲಿ ಹೇರಳವಾಗಿರುವ ಕಾರಣ ಎಲ್ಲಾ ದೃಶ್ಯಗಳನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಟ್​ ಮಾಡುವಂತೆ ಆದೇಶಿಸಿದೆ. ಈ ಚಿತ್ರದಲ್ಲಿ ಇಂಟಿಮೇಟ್​ ಸೀನ್​ ಹೇರಳವಾಗಿರುವ ಕಾರಣ, ಅಡಲ್ಟ್​ ಸರ್ಟಿಫಿಕೇಟ್​ (A Certificate) ನೀಡಲಾಗಿದ್ದರೂ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮಂಡಳಿ ನಿರ್ದೇಶಿಸಿದೆ. ಇಂಥ ಸೀನ್​ಗಳನ್ನು ನೋಡಲು ಕಾತರರಾಗಿದ್ದ ರಣಬೀರ್​-ರಶ್ಮಿಕಾ ಫ್ಯಾನ್ಸ್​ಗೆ ಬಹಳ ನಿರಾಸೆಯಾಗಿದೆ. 

Follow Us:
Download App:
  • android
  • ios