Asianet Suvarna News Asianet Suvarna News

4 ಕೋಟಿ ಮೌಲ್ಯದ ಕಾರ್‌ನಲ್ಲಿ ಆಕಾಶ್ ಅಂಬಾನಿ ರಣಬೀರ್ ಕಪೂರ್ ಸುತ್ತಾಟ; ಇವರ ಗೆಳೆತನ ಎಂಥದ್ದು ಗೊತ್ತಾ?

ತಮ್ಮ ನಾಲ್ಕು ಕೋಟಿ ಮೌಲ್ಯದ ಕಾರ್‌ ಲ್ಯಾಂಬೋರ್ಗಿನಿ ಉರುಸ್ ಎಸ್ ಯುವಿಯಲ್ಲಿ ಆಕಾಶ್ ಅಂಬಾನಿ ರಣಬೀರ್ ಕಪೂರ್‌ರನ್ನು ಕರೆದುಕೊಂಡು ಮುಂಬೈನಲ್ಲಿ ಸುತ್ತಾಟ ನಡೆಸಿದ್ದಾರೆ. 

Ranbir Kapoor & Akash Ambani go for a drive in 4 crore Lamborghini skr
Author
First Published Jan 16, 2024, 1:32 PM IST

ಫೋರ್ಬ್ಸ್ ಪ್ರಕಾರ, ಮುಖೇಶ್ ಅಂಬಾನಿ 8,87,677 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮತ್ತು ಅವರ ಕುಟುಂಬವು ಭಾರತದಲ್ಲಿನ ಕೆಲವು ಅತ್ಯಂತ ದುಬಾರಿ ವಸ್ತುಗಳನ್ನು ಹೊಂದಿದ್ದಾರೆ.

15000 ಕೋಟಿ ಮೌಲ್ಯದ ಆಂಟಿಲಿಯಾದಲ್ಲಿ ನೆಲೆಸಿರುವ ಮುಖೇಶ್ ಅಂಬಾನಿ ಮತ್ತು ಅವರ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಅನೇಕ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಂಬಾನಿ ಕುಟುಂಬದ ಸದಸ್ಯರು ಆಗಾಗ್ಗೆ ಬೃಹತ್ ಬೆಂಗಾವಲು ವಾಹನಗಳೊಂದಿಗೆ ಕಾರ್‌ಗಳಲ್ಲಿ ತಿರುಗಾಡುವುದನ್ನು ಮುಂಬೈನಲ್ಲಿ ಕಾಣಬಹುದು. ಆದರೆ, ಅಪರೂಪವೆಂಬಂತೆ, ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಪ್ರಯಾಣಿಕರ ಸೀಟಿನಲ್ಲಿ ಕುಳಿತು, ತಮ್ಮ ಗೆಳೆಯ 'ಎನಿಮಲ್' ನಟ ರಣಬೀರ್ ಕಪೂರ್ ಅವರೊಂದಿಗೆ ದುಬಾರಿ ಲಂಬೋರ್ಘಿನಿಯಲ್ಲಿ ಪ್ರಯಾಣ ಮಾಡಿದರು. 

ರಣಬೀರ್ ಕಪೂರ್ ಅವರ ಪಾಲಿಹಿಲ್ ಮನೆಯಿಂದ ಹೊರಬಂದ ಆಕಾಶ್, ನಂತರ ಗೆಳೆಯನ ಜೊತೆ ಬಾಂದ್ರಾ ಏರಿಯಾದಲ್ಲಿ ಪಯಣ ನಡೆಸಿದರು.

4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನೀಲಿ ಬಣ್ಣದ ಲಂಬೋರ್ಗಿನಿ ಉರಸ್ ಎಸ್‌ಯುವಿ ಆಕಾಶ್ ಅಂಬಾನಿಯವರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇದೇ ಕಾರಿನಲ್ಲಿ ಅವರು ತಮ್ಮ ನವಜಾತ ಮಗಳನ್ನು ಮೊದಲ ಬಾರಿ ಆಸ್ಪತ್ರೆಯಿಂದ ಮನೆಗೆ ಕರೆ ತಂದಿದ್ದರು. ಮತ್ತು ಅವರು ಮುಂಬೈನ ಸುತ್ತಲೂ ಸೂಪರ್‌ಕಾರನ್ನು ಓಡಿಸುವುದನ್ನು ಆಗಾಗ ಕಾಣಬಹುದು. 

ಆಪ್ತಮಿತ್ರರು
ಆಕಾಶ್ ಅಂಬಾನಿ ಮತ್ತು ಅವರ ಕುಟುಂಬ ಮತ್ತು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರೊಂದಿಗೆ ನಿಕಟ ಸ್ನೇಹದಿಂದಿದ್ದಾರೆ. ಎರಡು ಜನಪ್ರಿಯ ಕುಟುಂಬಗಳ ಸದಸ್ಯರು ವಿವಿಧ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆಯಾ ಕುಟುಂಬಗಳ ಫಂಕ್ಷನ್‌ಗಳಲ್ಲಿ ಎಲ್ಲರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಇಶಾ ಅಂಬಾನಿ ಮತ್ತು ಆಲಿಯಾ ಭಟ್ ವ್ಯಾಪಾರ ಸಹವರ್ತಿಗಳು ಕೂಡಾ ಹೌದು. ರಿಲಯನ್ಸ್ ರಿಟೇಲ್ ಕಳೆದ ವರ್ಷ ಆಲಿಯಾ ಭಟ್ ಅವರ ಚಿಲ್ಡ್ರನ್ ವೇರ್ ಬ್ರ್ಯಾಂಡ್ ಎಡ್-ಎ-ಮಮ್ಮಾವನ್ನು ಬೃಹತ್ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಂಡಿದೆ. ರಣಬೀರ್ ಕಪೂರ್ ಮತ್ತು ಆಕಾಶ್ ನಡುವೆ 11 ವರ್ಷಗಳ ಅಂತರವಿದ್ದರೂ, ಫುಟ್‌ಬಾಲ್ ಮತ್ತು ಚಲನಚಿತ್ರಗಳಲ್ಲಿನ ಅವರ ಜಂಟಿ ಆಸಕ್ತಿಯಿಂದಾಗಿ ಇಬ್ಬರೂ ಕ್ಲೋಸ್ ಆಗಿದ್ದಾರೆ. ರಣಬೀರ್ ಬಳಿ ಇರುವ ಎರಡು ನಾಯಿಗಳನ್ನು ಕೂಡಾ ಆಕಾಶ್ ಉಡುಗೊರೆಯಾಗಿ ನೀಡಿದ್ದಾರೆ. 

ಕಷ್ಟಗಳು ಬಂದಾಗ ಸುಧಾಮೂರ್ತಿ ಹೇಗೆ ಎದುರಿಸ್ತಾರೆ? ಅವರ ಬಳಿಯಿದೆ ಸರಳ ಸೂತ್ರ

ಅಂಬಾನಿ ಕುಟುಂಬದ ನೆಚ್ಚಿನ ಕಾರ್‌ಗಳು
ಅಂಬಾನಿ ಕುಟುಂಬ ಹೊಂದಿರುವ ಪ್ರಮುಖ ಕಾರುಗಳಲ್ಲಿ  ರೋಲ್ಸ್ ರಾಯ್ಸ್ ಕಲ್ಲಿನಾನ್ ಎಸ್‌ಯುವಿ, ಮರ್ಸಿಡಿಸ್-ಎಎಮ್‌ಜಿ ಜಿ63, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಮರ್ಸಿಡಿಸ್-ಮೇಬ್ಯಾಕ್ ಎಸ್580 ಮತ್ತು ಹಲವಾರು ದುಬಾರಿ ಕಾರುಗಳು ಸೇರಿವೆ. ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಎಸ್‌ಯುವಿ ಅಥವಾ ಲಂಬೋರ್ಘಿನಿ ಉರುಸ್‌ನಲ್ಲಿ ಪ್ರಯಾಣಿಸಲು ಬಯಸುತ್ತಾರೆ, ಆದರೆ ಮುಖೇಶ್ ಅಂಬಾನಿ ಬಾಂಬ್ ಪ್ರೂಫ್ ಮರ್ಸಿಡಿಸ್-ಬೆನ್ಜ್ ಸೆಡಾನ್‌ನಲ್ಲಿ ಪ್ರಯಾಣಿಸುತ್ತಾರೆ.
 

Follow Us:
Download App:
  • android
  • ios