ವಿಶೇಷ ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಹೇಳಿದ್ದೇನು?
ವಿಶೇಷ ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ.
ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರಿಗೆ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಆನಂದ್ ಮಹೀಂದ್ರಾ ಸಕ್ಸಸ್‌ಫುಲ್ ಉದ್ಯಮಿ ಜೊತೆಗೆ ಸಿನಿಮಾ ಪ್ರೇಮಿ ಕೂಡ ಹೌದು. ಇದೀಗ ಸಿನಿಮಾ ವಿಚಾರವಾಗಿ ಆರ್ ಆರ್ ಆರ್ ಸೃಷ್ಟಿಕರ್ತನಿಗೆ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಪುರಾತನ ನಾಗರಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ. ಆಗಿನ ಅದ್ಭುತ ಯುಗ, ಜನ ಜೀವನದ ಬಗ್ಗೆ ಸಿನಿಮಾ ಮಾಡುವಂತೆ ಆನಂದ್ ಮಹೀಂದ್ರಾ ಹೇಳಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುವುದರಲ್ಲಿ, ಆ ಸಿನಿಮಾವನ್ನು ಜಾಗತಿನ ಮಟ್ಟಿದಲ್ಲಿ ಪ್ರಚಾರ ಮಾಡುದರಲ್ಲಿ ರಾಜಮೌಳಿ ಎತ್ತಿದ ಕೈ. ಹಾಗಾಗಿ ಭಾರತದ ಪುರಾತನ ನಾಗರಿಕತೆಯ ಬಗ್ಗೆ ಸಿನಿಮಾ ಮಾಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಆನಂದ್ ಮಹೀಂದ್ರಾ ಸಾಮಾಜಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರ ಬೇಡಿಕೆ
ಸಿಂಧು ನಾಗರಿಕತೆಯ ಭಾಗವಾಗಿರುವ ಹರಪ್ಪ, ಮೆಹಂಜೊದಾರೊ, ಧೊಲವಿರಾ, ಲೋತಲ್, ಕಲಿಬಂಗನ್, ಬಾನಾವಲ ಇತರ ನಾಗರೀಕತೆಗಳ ಸಾಂದರ್ಭಿಕ ಚಿತ್ರಗಳ ಸರಣಿ ಟ್ವೀಟ್ಗಳನ್ನು ಮಾಡಿರುವ ಆನಂದ್ ಮಹೀಂದ್ರಾ, 'ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಯನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಆ ಪುರಾತನ ನಾಗರಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಆ ಅದ್ಭುತ ಯುಗ ಆಗಿನ ಜನ ಜೀವನದ ಆಧಾರಿಸಿದ ಸಿನಿಮಾ ಮಾಡುವಂತೆ ರಾಜಮೌಳಿ ಅವರಲ್ಲಿ ಮನವಿ' ಎಂದು ಟ್ವೀಟ್ ಮಾಡಿದ್ದಾರೆ.
2023ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಎಸ್ ಎಸ್ ರಾಜಮೌಳಿ!
ರಾಜಮೌಳಿ ಪ್ರತಿಕ್ರಿಯೆ
ಆನಂದ್ ಮಹೀಂದ್ರಾ ಅವರಿಗೆ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಧೂ ನಾಗರಿಕತೆಯನ್ನು ಆಧರಿಸಿದ ಚಲನಚಿತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇದೆ ಎನ್ನುವುದಾಗಿ ಹೇಳಿದ್ದಾರೆ. ಮಗಧೀರ ಸಿನಿಮಾದ ಚಿತ್ರೀಕರಣ ಬಗ್ಗೆಯೂ ರಾಜಮೌಳಿ ಬಹಿರಂಗ ಪಡಿಸಿದ್ದಾರೆ. 'ಹೌದು ಸರ್.. ಧೊಲವೀರದಲ್ಲಿ ಮಗಧೀರ ಚಿತ್ರೀಕರಣದ ವೇಳೆ, ನಾನು ತುಂಬಾ ಪುರಾತನವಾದ ಮರಗಳನ್ನು ನೋಡಿದೆ, ಅದು ಪಳೆಯುಳಿಕೆಯಾಗಿ ಮಾರ್ಪಟ್ಟಿದೆ. ಸಿಂಧೂ ನಾಗರೀಕತೆಯ ಉಗಮ ಮತ್ತು ಪತನದ ಚಿತ್ರದ ಚಿಂತನೆಯನ್ನು ಆ ಮರದಿಂದ ನಿರೂಪಿಸಲ್ಪಟ್ಟಿದೆ' ಎಂದು ಹೇಳಿದ್ದಾರೆ.
'ಕೆಲವು ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದೆ. ಆದರೆ ಮೊಹೆಂಜೊದಾರೊಗೆ ಭೇಟಿ ನೀಡಲು ತುಂಬಾ ಪ್ರಯತ್ನಿಸಿದೆ. ದುರದೃಷ್ಟವಶಾತ್ ಅನುಮತಿ ನಿರಾಕರಿಸಿದರು' ಎಂದು ಹೇಳಿದ್ದಾರೆ
ಸಿಂಧು ನಾಗರಿಕತೆಯ ಕುರಿತಾದ ಕೆಲವು ಬೆರಳೆಣಿಕೆಯ ಚಿತ್ರಗಳು ಭಾರತದಲ್ಲಿ ಈಗಾಗಲೇ ಬಂದಿವೆ. ಆದರೆ ಯಾವುದೂ ಸಹ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ, ಪರಿಣಾಮ ಬೀರಿಲ್ಲ. ಆದರೆ ರಾಜಮೌಳಿ, ಈ ರೀತಿಯ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅವರೇ ಹೇಳಿಕೊಂಡಿರುವಂತೆ ಭಾರತದ ಐತಿಹಾಸಿಕ ಹಾಗೂ ಪೌರಾಣಿಕ ಕತೆಗಳನ್ನು ತೆರೆಗೆ ತರುವುದರಲ್ಲಿ ಅವರಿಗೆ ಅತೀವ ಆಸಕ್ತಿಯಿದೆ. ಹಾಗಾಗಿ ಆನಂದ್ ಮಹಿಂದ್ರಾ ನೀಡಿರುವ ಸಲಹೆಯಂತೆ ಮುಂದಿನ ದಿನಗಳಲ್ಲಿ ಪುರಾತನ ನಾಗರೀಕತೆಗಳ ಮೇಲೆ ರಾಜಮೌಳಿ ಸಿನಿಮಾ ಮಾಡಿದರೂ ಅಚ್ಚರಿ ಇಲ್ಲ.
ಆಸ್ಕರ್ ಪ್ರಚಾರಕ್ಕೆ RRR ತಂಡ ಖರ್ಚು ಮಾಡಿದ್ದೆಷ್ಟು? ಕೊನೆಗೂ ಬಹಿರಂಗ ಪಡಿಸಿದ ರಾಜಮೌಳಿ ಪುತ್ರ
ರಾಜಮೌಳಿ ಸದ್ಯ ಆರ್ ಆರ್ ಆರ್ ದೊಡ್ಡ ಸಕ್ಸಸ್‌ನಲ್ಲಿದ್ದಾರೆ. ತೆಲುಗಿನಲ್ಲಿ ತಯಾರಾದ ಆರ್ ಆರ್ ಆರ್ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ದೊಡ್ಡ ಸಾಹಸದ ಕೆಲಸಲಾಗಿತ್ತು. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ರಾಜಮೌಳಿ ಗೆದ್ದುಕೊಂಡಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಪ್ರವಾಸಿ ಸಾಹಸಮಯ ಕತೆಯನ್ನು ಒಳಗೊಂಡಿದೆ. ಬಹುತೇಕ ಸಿನಿಮಾ ದಟ್ಟವಾದ ಕಾಡಿನಲ್ಲೇ ನಡೆಯಲಿದೆ. ಅಮೆಜಾನ್ ಕಾಡು ಸೇರಿದಂತೆ ಅನೇಕ ಕಡೆ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಪ್ರಿಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದ್ದು ಸದ್ಯದಲ್ಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.