ಆಸ್ಕರ್ ಪ್ರಚಾರಕ್ಕೆ RRR ತಂಡ ಖರ್ಚು ಮಾಡಿದ್ದೆಷ್ಟು? ಕೊನೆಗೂ ಬಹಿರಂಗ ಪಡಿಸಿದ ರಾಜಮೌಳಿ ಪುತ್ರ

ಆಸ್ಕರ್ ಪ್ರಚಾರಕ್ಕೆ RRR ತಂಡ ಖರ್ಚು ಮಾಡಿದ್ದೆಷ್ಟು ಎಂದು ರಾಜಮೌಳಿ ಪುತ್ರ ಕಾರ್ತಿಕೇಯ ಬಹಿರಂಗ ಪಡಿಸಿದ್ದಾರೆ.

SS Karthikeya Reveals how much Spend for RRR  Oscar Campaign sgk

ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಚಿತ್ರ ಆಸ್ಕರ್ ಪ್ರಶಸ್ತಿ ಮುಡಿಗೇರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.  ಭಾರತದ ಹೆಮ್ಮೆ ಆರ್ ಆರ್ ಆರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ   ಎಂ.ಎಂ.ಕೀರವಾಣಿ ಮತ್ತು ಸಾಹಿತ್ಯ ರಚನೆಗಾರ ಚಂದ್ರಬೋಸ್ ಆಸ್ಕರ್‌ಗೆ ಮುತ್ತಿಟ್ಟರು. ಆರ್ ಆರ್ ಆರ್‌ನ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್ ಬಂದಿದೆ. ಆಸ್ಕರ್ ಸಮಾರಂಭ ಮುಗಿಯುತ್ತಿದ್ದಂತೆ ಸಿನಿಮಾತಂಡ ಖರ್ಚು ಮಾಡಿದ ಹಣ ಎಷ್ಟು ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಆಸ್ಕರ್  ಪ್ರಚಾರಕ್ಕೆ ರಾಜಮೌಳಿ ಮತ್ತು ತಂಡ ಕೋಟಿ ಕೋಟಿ ಖರ್ಚು ಮಾಡಿದೆ ಎನ್ನುವ ವಿಚಾರ ವೈರಲ್ ಆಗಿತ್ತು. ಅಲ್ಲದೇ  ಆಸ್ಕರ್ ಸೀಟ್‌ಗಾಗಿ ರಾಜಮೌಳಿ ಕೋಟಿಗಟ್ಟಲೇ ಖರ್ಚು ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ಇತ್ತು. 

ಆದರೀಗ ಈ ಬಗ್ಗೆ ಕೊನೆಗೂ ಚಿತ್ರತಂಡ ಮೌನ ಮುರಿದಿದೆ. ಎಸ್ ಎಸ್ ರಾಜಮೌಳಿ ಅವರ ಪುತ್ರ, ನಿರ್ಮಾಪಕ ಎಸ್ ಎಸ್ ಕಾರ್ತಿಕೇಯ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ಮಾತನಾಡಿದ್ದಾರೆ. ಆರ್ ಆರ್ ಆರ್ ಪ್ರಚಾರದ ನೇತೃತ್ವವಹಿಸಿದ್ದರು ಕಾರ್ತಿಕೇಯ. ಎಷ್ಟೇ ಹಣ ಕೊಟ್ಟರು ಜನರ ಪ್ರೀತಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆರ್ ಆರ್ ಆರ್ ಯಶಸ್ಸನ್ನು ಜನ ಎಂಜಾಯ್ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ ಸಕ್ಸಸ್ ಕಂಡಿರುವ ಆರ್ ಆರ್ ಆರ್ ಇಂಗ್ಲಿಷ್ ನಲ್ಲೂ ತೆರೆಗೆ ಬರುತ್ತಿದೆ ಎಂದು ಹೇಳಿದರು. 

ಭಾರತೀಯರು ಅಲ್ಲದೇ ಇರುವವರು ಸಹ ಸಿನಿಮಾವನ್ನು ನೋಡಿ ಆನಂದಿಸಿದ್ದಾರೆ. ವಿದೇಶಿಗರು ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಅವರ ಆಕ್ಷನ್ ದೃಶ್ಯವನ್ನು ಎಂಜಾಯ್ ಮಾಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದರೂ ಆರ್ ಆರ್ ಆರ್ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆ ಆಗದಿದ್ದಾಗ ತುಂಬಾ ನಿರಾಸೆಯಾಗಿತ್ತು. ಆಸ್ಕರ್ ಪ್ರಚಾರಕ್ಕಾಗಿ ಸಿನಿಮಾತಂಡ ದೊಡ್ಡ ಮೊತ್ತದ ಹಣ ಖರ್ಚು ಮಾಡಿದೆ ಎಂದು ಬಹಿರಂಗ ಪಡಿಸಿದರು.  

ನಾಟು ನಾಟು ಹಾಡಿಗೆ 'ಟೆಸ್ಲಾ ಲೈಟ್‌ ಶೋ' ಗೌರವ, ರಾಜಮೌಳಿ ಏನಂದ್ರು?

ಸಿನಿಮಾದ ಪ್ರಚಾರಕ್ಕಾಗಿ ಸಿನಿಮಾತಂಡ ಮೊದಲು 5 ಕೋಟಿ ಖರ್ಚು ಮಾಡಲು ನಿಗಧಿಯಾಗಿತ್ತು. ಮೂರು ಹಂತದಲ್ಲಿ ಖರ್ಚು ಮಾಡಲು ಯೋಜಿಸಲಾಗಿತ್ತು. ಆದರೆ ಸಿನಿಮಾ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಬಳಿಕ ಪ್ಲಾನ್ ಮಾಡಿದ್ದಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಕಾಯಿತು. ಒಟ್ಟು ಪ್ರಚಾರಕ್ಕೆ 8.5 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ಹೇಳಿದ್ದಾರೆ.  

ರ್ಯಾಪ್ ಸಾಂಗ್ ಆಗಿ ಬದಲಾದ ಆಸ್ಕರ್‌ನಲ್ಲಿ ದೀಪಿಕಾ ಮಾಡಿದ ಭಾಷಣ; ಹೇಗಿದೆ ಹಾಡು ನೋಡಿ

ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಮತ್ತು ರಾಹುಲ್ ಸಿಪ್ಲಿಗಂಜ್ ಸೇರಿದಂತೆ ಆರ್‌ಆರ್‌ಆರ್ ತಂಡದ ಹಲವಾರು ಸದಸ್ಯರು ಆಸ್ಕರ್ ಸಮಿತಿಗೆ ಆಹ್ವಾನ ಬಂದಿತ್ತು. ಚಂದ್ರಬೋಸ್ ಮತ್ತು ಎಂಎಂ ಕೀರವಾಣಿ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ಚಿತ್ರತಂಡದ ಕೆಲವು ಸದಸ್ಯರು, ಕುಟುಂಬದವರು ಮತ್ತು ಸ್ನೇಹಿತರು ಆಸ್ಕರ್ ಕಾರ್ಯಕ್ರಮಕ್ಕಾಗಿ ಟಿಕೆಟ್‌ಗಳನ್ನು ಖರೀದಿಸಬೇಕಾಗಿತ್ತು. ತಂಡ ಅಧಿಕೃತವಾಗಿ ಹಲವಾರು ಟಿಕೆಟ್‌ಗಳನ್ನು ಖರೀದಿಸಿದೆ ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios