ಪವಿತ್ರ ರಂಜಾನ್ ಉಪವಾಸ ಕುಳಿತ ನಟಿ ರೋಜ್ಲಿನ್ ಖಾನ್ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. 

ಮುಂಬೈ(ಮಾ.05) ವಿಶ್ವಾದ್ಯಂತ ರಂಜಾನ್ ಆಚರಿಸಲಾಗುತ್ತಿದೆ. ರಂಜಾನ್‌ನ 30 ದಿನ ಉಪವಾಸ ವೃತ ಅತ್ಯಂತ ಪ್ರಮುಖವಾಗಿದೆ. ಹೀಗೆ ಪವಿತ್ರ ರಂಜಾನ್ ತಿಂಗಳ ಉಪವಾಸ ಕುಳಿತ ನಟಿ ರೋಜ್ಲಿನ್ ಖಾನ್ ತೀವ್ರವಾಗಿ ಆಸ್ವಸ್ಥಗೊಂಡಿದ್ದಾರೆ. ಇದರ ಪರಿಣಾಮ ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ರೋಜ್ಲಿನ್ ಖಾನ್ ಆರೋಗ್ಯ ಸ್ಥಿರವಾಗಿದೆ. ಚೇತರಿಸಿಕೊಳ್ಳಲು ಕೆಲ ದಿನಗಳೇ ಬೇಕಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

ರೋಜ್ಲಿನ್ ಖಾನ್ ರಂಜಾನ್ ಉಪವಾಸಕ್ಕಾಗಿ ತಮ್ಮ ದಿನಚರಿ ಬದಲಿಸಿದ್ದರು. ಮಲಗುವ ಸಮಯ, ಆಹಾರ ತೆಗೆದುಕೊಳ್ಳುವ ಸಮಯದ ಬದಲಾಯಿಸಿದ್ದರು. ಇನ್ನು ದಿನವಿಡಿ ಉಪವಾಸ ಕುಳಿತಿರುವ ಕಾರಣ ರೋಜ್ಲಿನ್ ಖಾನ್ ಆರೋಗ್ಯ ಹದಗೆಟ್ಟಿದೆ. ನಾಲ್ಕನೇ ಹಂತದ ಬ್ರೆಸ್ಟ್ ಕ್ಯಾನ್ಸರ್‌ ನಿಂದ ಸಂಪೂರ್ಣ ಚೇತರಿಸಿಕೊಂಡಿರುವ ರೋಜ್ಲಿನ್ ಖಾನ್ ಆರೋಗ್ಯ, ಆಹಾರ, ಹಾಗೂ ನಿದ್ದೆಯಲ್ಲಾದ ಪ್ರಮುಖ ಬದಲಾವಣೆಗೆ ದೇಹ ಸ್ಪಂದಿಸಲಿಲ್ಲ. ಹೀಗಾಗಿ ಆರೋಗ್ಯ ಕ್ಷೀಣಿಸಿದೆ. ತೀವ್ರ ಆಸ್ವಸ್ಥಗೊಂಡ ಕಾರಣ ರೋಜ್ಲಿನ್ ಖಾನ್ ಅವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವೈದ್ಯರ ಖಡಕ್ ಸೂಚನೆ ನೀಡಿದ್ದಾರೆ. ಆರೋಗ್ಯ ಕುರಿತು ತೀವ್ರ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ. ಇದೇ ವೇಳೆ ಆರೋಗ್ಯದ ದೃಷ್ಟಿಯಿಂದ ರಂಜಾನ್ ಉಪಾವಸ ಕೈಬಿಡುವಂತೆ ಸೂಚಿಸಿದ್ದಾರೆ. ಆರೋಗ್ಯ ಚೇತರಿಸಿಕೊಂಡ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಕೆಲ ಔಷಧಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ರೋಜ್ಲಿನ್ ಖಾನ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಚಾವಾ ಒಟಿಟಿ ರಿಲೀಸ್ ಡೇಟ್ ಬಹಿರಂಗ, ಆನ್‌ಲೈನ್ ಮೂಲಕ ವೀಕ್ಷಿಸಿ ವಿಕ್ಕಿ -ರಶ್ಮಿಕಾ ಸಿನಿಮಾ

ಇದೀಗ ರೋಜ್ಲಿನ್ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಇದೇ ವೇಳೆ ಆರೋಗ್ಯದ ಕುರಿತು ರೋಜ್ಲಿನ್ ಖಾನ್ ಮಾಹಿತಿ ನೀಡಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖವಾಗಿರುವ ಈ ದೇಹ ಮೊದಲಿನಂತೆ ಪ್ರತಿರೋಧಕ ಶಕ್ತಿ ಕಳೆದುಕೊಂಡಿದೆ. ಮಾರಕ ಕಾಯಿಲೆಯಿಂದ ಗುಣಮುಖವಾದರೂ ಆರೋಗ್ಯ ಗಟ್ಟಿಮುಟ್ಟಾಗಿಲ್ಲ. ರಂಜಾನ್ ತಿಂಗಳಲ್ಲಿ ಉಪವಾಸ ಕುಳಿತು ಕೊಳ್ಳಲು ನಿರ್ಧರಿಸಿದ್ದೆ. ಆದರೆ ಆರೋಗ್ಯದ ಕಾರಣದಿಂದ ಸಾಧ್ಯವಾಗುತ್ತಿಲ್ಲ. ನನ್ನ ಮತ ಹಾಗೂ ಸಂಪ್ರದಾಯದ ಬಗ್ಗೆ ಅತೀವ ಗೌರವ ಹೊಂದಿದ್ದೇನೆ. ಹೀಗಾಗಿ ಆರೋಗ್ಯದ ಕುರಿತು ಕಾಳಜಿ ನಡುವೆಯೂ ಉಪವಾಸಕ್ಕೆ ನಿರ್ಧರಿಸಿದ್ದೆ ಎಂದು ರೋಜ್ಲಿನ್ ಖಾನ್ ಹೇಳಿದ್ದಾರೆ.

ನನ್ನ ದೇಹ ಹಾಗೂ ಆರೋಗ್ಯ ರಂಜಾನ್ ಉಪವಾಸಕ್ಕೆ ಅನುಮತಿಸುತ್ತಿಲ್ಲ. ಇದು ಅತ್ಯಂತ ಕಠಿಣ ಸಮಯ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕಾಗಿ ನಟಿ ವಿನಂತಿಸುತಿದ್ದಾರೆ. ಶೀಘ್ರದಲ್ಲೇ ಗುಣಮುಖವಾಗುವ ವಿಶ್ವಾಸವಿದೆ. ಎಲ್ಲರ ಪ್ರೀತಿ ಹಾಗೂ ಹಾರೈಕೆಯೊಂದಿಗೆ ಶೀಘ್ರದಲ್ಲೇ ಗುಣಮುಖನಾಗುತ್ತೇನೆ ಎಂದು ರೋಜ್ಲಿನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಟೆಲಿವಿಶನ್, ಜಾಹೀರಾತು ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡ ರೋಜ್ಲಿನ್ ಖಾನ್ ಧಾಮಾ ಚೌಕ್ಡಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಸವಿತಾ ಭಾಬಿ, ಜೀ ಲೇನೆ ದೋ ಏಕ್ ಪಲ್ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟೆಲಿವಿಶನ್‌ನಲ್ಲಿ ಕ್ರೈಮ್ ಅಲರ್ಟ್ ಎಪಿಸೋಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ತಮನ್ನಾ ಸೌಂದರ್ಯದ ರಹಸ್ಯವಿದು, ನೀವೂ ಟ್ರೈ ಮಾಡಿ, ಇಲ್ಲಿದೆ ಮೇಕಪ್ ಐಡಿಯಾ!