- Home
- Entertainment
- Cine World
- ಚಾವಾ ಒಟಿಟಿ ರಿಲೀಸ್ ಡೇಟ್ ಬಹಿರಂಗ, ಆನ್‌ಲೈನ್ ಮೂಲಕ ವೀಕ್ಷಿಸಿ ವಿಕ್ಕಿ -ರಶ್ಮಿಕಾ ಸಿನಿಮಾ
ಚಾವಾ ಒಟಿಟಿ ರಿಲೀಸ್ ಡೇಟ್ ಬಹಿರಂಗ, ಆನ್‌ಲೈನ್ ಮೂಲಕ ವೀಕ್ಷಿಸಿ ವಿಕ್ಕಿ -ರಶ್ಮಿಕಾ ಸಿನಿಮಾ
ವಿಕ್ಕಿ ಕೌಶಲ್,ರಶ್ಮಿಕಾ ಮಂದಣ್ಣ ಅಭಿನಯದ ಐತಿಹಾಸಿಕ-ಆಕ್ಷನ್ ಸಿನಿಮಾ ಚಾವಾ OTT ಬಿಡುಗಡೆಗೆ ಸಿದ್ಧವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿನ ನಂತರ ಈ ಹಿಟ್ ಸಿನಿಮಾವನ್ನು ನೀವು ಯಾವಾಗ ಮತ್ತು ಎಲ್ಲಿ ಆನ್‌ಲೈನ್‌ನಲ್ಲಿ ನೋಡಬಹುದು ?.

ಚಾವಾ OTT ರಿಲೀಸ್: ಈ ಸಿನಿಮಾ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಸಂಭಾಜಿ ಮಹಾರಾಜ ಜೀವನಾಧಾರಿತ ಚಿತ್ರ ಛಾವಾ ದೇಶಾದ್ಯಂತ ಭಾರಿ ಸದ್ದು ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮೂಲಕ ಮುನ್ನುಗ್ಗಿದೆ. ವಿಕ್ಕಿ ಕೌಶಾಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಛಾವಾ ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್ ಮಾಡಿದೆ. ಇದೀಗ ಈ ಸಿನಿಮಾ ಕಲೆಕ್ಷನ್ 500 ಕೋಟಿ ರೂಪಾಯಿ ದಾಟಿದೆ. ಇನ್ನು ಹಲವು ಚಿತ್ರಮಂದಿರಗಳಲ್ಲಿ ಛಾವಾ ಹೌಸ್‌ಫುಲ್ ಆಗಿ ಓಡುತ್ತಿದೆ. ವಿಕ್ಕಿ ಕೌಶಲ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಮೊದಲ ದಿನದ ಕಲೆಕ್ಷನ್ ಮಾಡಿದ ಸಿನಿಮಾ ಇದು.
ನೆಟ್‌ಫ್ಲಿಕ್ಸ್ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸಿನಿಮಾ ರಿಲೀಸ್ ಆಗೋಕು ಮುಂಚೆನೇ OTT ಡೀಲ್ ಮುಗಿದಿತ್ತು. ಏಪ್ರಿಲ್ 11 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಅಂತ ಬಾಲಿವುಡ್ ಮಾಧ್ಯಮಗಳು ಹೇಳುತ್ತಿದೆ. ಇದೀಗ ಹಲವರು ಒಟಿಟಿ ರಿಲೀಸ್‌ಗೆ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಎಪ್ರಿಲ್ 11ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಸಿನಿಮಾ ಮಾರ್ಚ್ 7 ರಂದು ತೆಲುಗಿನಲ್ಲಿ ರಿಲೀಸ್ ಆಗಲಿದೆ. ಟ್ರೈಲರ್ ರಿಲೀಸ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
ಪ್ರೊಡ್ಯೂಸರ್ ಬನ್ನಿ ವಾಸು, ಆಫ್-ಸೀಸನ್‌ನಲ್ಲಿ ರಿಲೀಸ್ ಮಾಡೋಕೆ OTT ಕಾರಣ ಅಂತಾರೆ.
ಛಾವಾ ಸಿನಿಮಾದ ಅಂತಿಮ 40 ನಿಮಿಷ ಮೈ ಜುಮ್ಮೆನಿಸುವ ದೃಶ್ಯಕಾವ್ಯವಿದೆ. ವಿಕ್ಕಿ ಹಾಗೂ ರಶ್ಮಿಕಾ ಮಂದಣ್ಣ ಜೊತೆಗೆ ಔರಂಗಬೇಜ್ ಪಾತ್ರದಲ್ಲಿ ನಟಿಸಿದ ಅಕ್ಷಯ್ ಖನ್ನ ಕೂಡ ಭಾರಿ ಪ್ರಶಂಸೆಗೆ ಪಾತ್ರಾಗಿದ್ದಾರೆ. 2025ರಲ್ಲಿ ಬಿಡುಗಡೆಯಾದ ಬಾಲಿವುಡ್ ಸೂಪರ್ ಹಿಟ್ ಚಿತ್ರಗಳಲ್ಲಿ ಛಾವ ಮೊದಲ ಸ್ಥಾನದಲ್ಲಿದೆ.