Asianet Suvarna News Asianet Suvarna News

ಸಿನಿಮಾದ ರೋಲ್​ ತಿಳಿಯದೇ ನಾಯಕಿ ಮಾಡುವಂತೆ ದುಂಬಾಲು ಬಿದ್ದು ರಿಜೆಕ್ಟ್​ ಆದೆ... ಆಮೇಲೆ ನೋಡಿದ್ರೆ...


ಸಿನಿಮಾದ ರೋಲ್​ ತಿಳಿಯದೇ ನಾಯಕಿ ಮಾಡುವಂತೆ ದುಂಬಾಲು ಬಿದ್ದು ರಿಜೆಕ್ಟ್​ ಆಗಿದ್ದರೆ ರಾಮಾಯಣದ ಸೀತೆ ದೀಪಿಕಾ. ಆಮೇಲೆ ಆಗಿದ್ದೇ ಬೇರೆ...  
 

Ramayans Seeta Deepika Chikhlia says Raj Kapoor rejected her for  Ram Teri Ganga Maili suc
Author
First Published May 28, 2024, 3:48 PM IST | Last Updated May 28, 2024, 3:49 PM IST

ಬಾಲಿವುಡ್​ ನಟಿ ದೀಪಿಕಾ ಚಿಖ್ಲಿಯಾ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಆದರೆ 80-90ರ ದಶಕದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ರಾಮಾಯಣದ ಸೀತೆ ಎಂದರೆ ಸಾಕು ಎಲ್ಲರಿಗೂ ಆಕೆಯ ಮುಖ ಪರಿಚಯವಾಗುತ್ತದೆ. ಸೀತೆಯ ರೋಲ್​ ಮಾಡಿದವರೇ ದೀಪಿಕಾ ಚಿಖ್ಲಿಯಾ. ನಟಿ ಈಗ ಬಾಲಿವುಡ್​ಗೆ ಬರಲು ತಾವು ಹವಣಿಸುತ್ತಿದ್ದ ಆರಂಭದ ದಿನಗಳ ಕುರಿತು ಮೆಲುಕು ಹಾಕಿಕೊಂಡಿದ್ದಾರೆ.  ಒಂದು ಸಿನಿಮಾದ ರೋಲ್​ ತಿಳಿಯುವ ಪ್ರಯತ್ನವನ್ನೂ ಮಾಡದೇ ನಾಯಕಿ ಮಾಡುವಂತೆ ನಿರ್ದೇಶಕ ರಾಜ್​ ಕಪೂರ್​ ಅವರಿಗೆ ದುಂಬಾಲು ಬಿದ್ದು ರಿಜೆಕ್ಟ್​ ಆಗಿದ್ದು, ಆ ಬಳಿಕ ನಡೆದ ಘಟನೆಗಳನ್ನು ನಟಿ ನೆನಪು ಮಾಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ತಮ್ಮನ್ನು ರಿಜೆಕ್ಟ್​ ಮಾಡಿರುವ ಕಾರಣದಿಂದಲೇ ತಾವಿಂದು ಫೇಮಸ್​  ಆದ ಬಗ್ಗೆಯೂ ತಿಳಿಸಿದ್ದಾರೆ. ಅಂದು ಆ ಪಾತ್ರವನ್ನು ತಮಗೆ ನೀಡಿದ್ದರೆ, ಬಹುಶಃ ಸೀತೆಯ ಪಾತ್ರಕ್ಕೆ ಆಯ್ಕೆಯಾಗುತ್ತಿರಲಿಲ್ಲ ಎಂದಿದ್ದಾರೆ.

ಹೌದು. ಆ ಚಿತ್ರ ರಾಜ್​ ಕಪೂರ್​ ನಿರ್ದೇಶನದ ಆ ದಿನಗಳಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದ ರಾಮ್ ತೇರಿ ಗಂಗಾ ಮೈಲಿ. ಇಂದು ಹಲವು ಚಿತ್ರ ನಟಿಯರು ಸಂಪೂರ್ಣ ಬೆತ್ತಲಾಗಲೂ ಹೇಸುವುದಿಲ್ಲ.  ಆದರೆ 1985ರ ಅವಧಿಯನ್ನೊಮ್ಮೆ ನೆನಪಿಸಿಕೊಂಡರೆ, ಹಸಿಬಿಸಿ ದೃಶ್ಯ ಎನ್ನುವುದು ಬಹು ದೂರದ ಮಾತೇ ಆಗಿತ್ತು. ಇಂಥ ದೃಶ್ಯಗಳನ್ನು ಮಾಡುವುದಕ್ಕಾಗಿಯೇ ಕೆಲವೊಂದು ನಟಿಯರು ಇದ್ದರು. ಅವರು ಸೈಡ್​ ಆ್ಯಕ್ಟ್ರೆಸ್​ ಆಗಿರುತ್ತಿದ್ದರು. ಅಂಗಾಂಗ ಪ್ರದರ್ಶನ ಬೇಕೆಂದರೆ ಚಿತ್ರದಲ್ಲಿ ಅವರ ಒಂದು ಐಟಂ ಸಾಂಗ್​ ಅನ್ನು ಉದ್ದೇಶಪೂರ್ವಕವಾಗಿ ತುರುಕಲಾಗುತ್ತಿತ್ತು. ಆದರೆ ಇಂದು ಬಹುತೇಕ ನಟಿಯರು ಎಲ್ಲಾ ಪ್ರದರ್ಶನಕ್ಕೂ ಸೈ ಎನ್ನುವ ಕಾರಣದಿಂದ ಸೈಡ್​ ಆ್ಯಕ್ಟ್ರೆಸ್​ಗಳ ಅವಶ್ಯಕತೆ ಬೀಳುತ್ತಿಲ್ಲ. ಆದರೆ ಅಂಥ ದಿನಗಳಲ್ಲಿಯೇ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು ನಟಿ ಮಂದಾಕಿನಿ.

ಗಾಂಧಿ- ಅಂಬೇಡ್ಕರ್ ತತ್ವದ ಬಗ್ಗೆ ಮಾತನಾಡಿದ ಜಾಹ್ನವಿ ಕಪೂರ್- ಬೆಚ್ಚಿಬಿತ್ತು ಬಾಲಿವುಡ್!

ರಾಜ್​ ಕಪೂರ್​ ಅವರು ರಾಮ್ ತೇರಿ ಗಂಗಾ ಮೈಲಿ  ಚಿತ್ರ ಮಾಡುತ್ತಾರೆ ಎಂದು ಗೊತ್ತಾದಾಗ ದೀಪಿಕಾ ಅವರನ್ನು ಸಂಪರ್ಕಿಸಿ ತಮಗೆ ರೋಲ್​ ನೀಡುವಂತೆ ದುಂಬಾಲು ಬಿದ್ದಿದ್ದರಂತೆ. ಆದರೆ ಅವರಿಗೆ ಆಗ ಕೇವಲ 17 ವರ್ಷ ವಯಸ್ಸಾಗಿದ್ದರಿಂದ ಇದು ಸಾಧ್ಯವಿಲ್ಲ ಎಂದು ರಾಜ್​ ಕಪೂರ್​ ಹೇಳಿದ್ದರಂತೆ.  ಹೀಗೆ ತಿರಸ್ಕರಿಸಲ್ಪಟ್ಟ ನಂತರ ದೀಪಿಕಾ ಚಿಖ್ಲಿಯಾ ತುಂಬಾ ಅಸಮಾಧಾನಗೊಂಡಿದ್ದರಂತೆ. ಈ ಕುರಿತು ನಟಿ ಈಗ ಹೇಳಿಕೊಂಡಿದ್ದಾರೆ. ಚಿಕ್ಕಪುಟ್ಟ ರೋಲ್​ಗಳಲ್ಲಿ ನಾನು ನಟಿಸುತ್ತಿದ್ದೆ.  ರಾಜ್ ಕಪೂರ್ ಅವರ ಮಗಳು ರೀಮಾ ಜೈನ್  ನನ್ನ ಆತ್ಮೀಯ ಸ್ನೇಹಿತೆ. ಆಕೆ ತಮ್ಮ  ತಂದೆ  ಚಲನಚಿತ್ರಕ್ಕಾಗಿ ಹೊಸ ಮುಖವನ್ನು ಹುಡುಕುತ್ತಿದ್ದಾರೆ ಎಂದು ಹೇಳಿದಳು. ಆ ಸಮಯದಲ್ಲಿ ನಾನು ನನ್ನ ಚಿಕ್ಕಪುಟ್ಟ ಪಾತ್ರಕ್ಕೆ ಬೇಸತ್ತು  ವೃತ್ತಿಜೀವನ ತೊರೆಯೋಣ ಎಂದುಕೊಂಡಿದ್ದೆ. ಆ ಸಮಯದಲ್ಲಿ ಇದು ನನಗೆ ಖುಷಿ ಕೊಟ್ಟಿತು.  ರಾಜ್ ಕಪೂರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ನನ್ನ ವಯಸ್ಸನ್ನು ಕೇಳಿದರು; ಆಗ ನನಗೆ 17 ವರ್ಷ. ನೀವು ತುಂಬಾ ಚಿಕ್ಕವರು ಎಂದು ಹೇಳಿದರು. ನಾನು ತುಂಬಾ ನಿರಾಸೆಯಿಂದ ಹಿಂದಿರುಗಿದೆ ಎಂದಿದ್ದಾರೆ ದೀಪಿಕಾ.

ಈ ಚಿತ್ರದ ರೋಲ್​ ಬಗ್ಗೆ ಕೇಳಿರಲಿಲ್ಲ. ಆಮೇಲೆ ಚಿತ್ರ ಬಿಡುಗಡೆಯಾದಾಗ ಮಂದಾಕಿನಿಯವರ ರೋಲ್​ ನೋಡಿದಾಗ ಬೆಚ್ಚಿ ಬಿದ್ದೆ ಎಂದಿದ್ದಾರೆ. ರಾಮ್ ತೇರಿ ಗಂಗಾ ಮೈಲಿ ಮಂದಾಕಿನಿ ಹಾಲುಣಿಸುವ ಮತ್ತು ಪಾರದರ್ಶಕ ಸೀರೆಯಲ್ಲಿ ಸ್ನಾನ ಮಾಡುವ ದೃಶ್ಯಗಳಿಂದಾಗಿ ವಿವಾದ ಸೃಷ್ಟಿಸಿತ್ತು. ಅಮ್ಮನ ಜೊತೆ ಚಿತ್ರ ನೋಡಲು ಹೋದಾಗ ಶಾಕ್​ ಆಯಿತು. ಅವರು ನನ್ನನ್ನು ರಿಜೆಕ್ಟ್​ ಮಾಡಿದ್ದಕ್ಕೆ ದೇವರಿಗೆ ಅದೆಷ್ಟು ಧನ್ಯವಾದ ಸಲ್ಲಿಸಿದೇನೋ ಗೊತ್ತಿಲ್ಲ  ಎಂದಿದ್ದಾರೆ. ಅಂದಹಅಗೆ, ರಾಜ್ ಕಪೂರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಮಂದಾಕಿನಿ ಜೊತೆಗೆ ರಾಜೀವ್ ಕಪೂರ್ ನಟಿಸಿದ್ದಾರೆ. ಇದು ರಾಜ್ ಕಪೂರ್ ಅವರ ಕೊನೆಯ ಚಿತ್ರ ಮತ್ತು 1985 ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿತ್ತು. 

ಪಂಕಜ್‌ ತ್ರಿಪಾಠಿ ಅಪ್ಪ ಎಂದು ಒಪ್ಪಿಕೊಳ್ಳುವವರೆಗೂ ಮಾಂಸಾಹಾರವನ್ನೇ ತ್ಯಜ್ಯಸಿದ್ದ ಜಾಹ್ನವಿ ಕಪೂರ್‌!

Latest Videos
Follow Us:
Download App:
  • android
  • ios