ಪಂಕಜ್‌ ತ್ರಿಪಾಠಿ ಅಪ್ಪ ಆಗಲು ಒಪ್ಪಿಕೊಳ್ಳುವವರೆಗೂ ಮಾಂಸಾಹಾರವನ್ನೇ ತ್ಯಜ್ಯಸಿದ್ದ ಬಗ್ಗೆ ನಟಿ ಜಾಹ್ನವಿ ಕಪೂರ್‌ ಹೇಳಿದ್ದೇನು?  

ನಟ ಪಂಕಜ್ ತ್ರಿಪಾಠಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರಲ್ಲಿ ಒಬ್ಬರು ನಟಿ ಜಾಹ್ನವಿ ಕಪೂರ್. 2020 ರ ನೆಟ್‌ಫ್ಲಿಕ್ಸ್ ಚಲನಚಿತ್ರ 'ಗುಂಜಾನ್ ಸಕ್ಸೇನಾ’ದಲ್ಲಿ ಪಂಕಜ್‌ ತ್ರಿಪಾಠಿ ಅವರು ತಮ್ಮ ತಂದೆಯಾಗಿರಬೇಕೆಂದು ಹುಚ್ಚ ಅಭಿಮಾನಿಯಂತೆ ತಾವು ಹೇಗೆ ಪ್ರಾರ್ಥಿಸಿದ್ದೆ ಎಂದು ಜಾಹ್ನವಿ ಕಪೂರ್‌ ಇದೀಗ ಬಹಿರಂಗಗೊಳಿಸಿದ್ದಾರೆ. ತಮ್ಮ ಆಸೆ ಈಡೇರಲಿ ಎಂದು ಜಾಹ್ನವಿ ಕೆಲಕಾಲ ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸಿದ್ದುದಾಗಿ ಅವರು ತಿಳಿಸಿದ್ದಾರೆ. 

ಸಾಮಾನ್ಯವಾಗಿ ನಾನು ಯಾವುದೇ ಜನರನ್ನು ಆರಾಧಿಸುವುದಿಲ್ಲ. ಆದರೆ ಪಂಕಜ್‌ ತ್ರಿಪಾಠಿಯವರ ಅಪ್ಪಟ ಅಭಿಮಾನಿ ನಾನು. ತ್ರಿಪಾಠಿ ಸರ್‌ ಜೊತೆಗೆ ಕೆಲಸ ಮಾಡಲು ಬಯಸಿದ್ದೆ. ಅವರು ನನ್ನ ಇಚ್ಛೆಯ ಪಟ್ಟಿಯಲ್ಲಿದ್ದರು. ಗುಂಜನ್ ಸಕ್ಸೇನಾ ಸಿನಿಮಾಕ್ಕೆ ಅವರೇ ನನ್ನ ತಂದೆಯ ಪಾತ್ರಧಾರಿಯಾಗಬೇಕು ಎಂದು ಹಠ ಹಿಡಿದಿದ್ದೆ. ಅವರ ದೊಡ್ಡ ಅಭಿಮಾನಿಯಾಗಿರುವುದರಿಂದ ನಾನು ಹುಚ್ಚು ಹುಡುಗಿಯಂತೆ ವರ್ತಿಸುತ್ತಿದ್ದೆ ಎಂದಿದ್ದಾರೆ. ತ್ರಿಪಾಠಿ ಅವರು ಇನ್ನೂ 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಗೆ ಸಹಿ ಹಾಕಿರಲಿಲ್ಲ. ಆಗ ಜಾಹ್ನವಿ ಕಪೂರ್‌ ಅವರು ಪಾತ್ರ ನಿರ್ವಹಿಸಲು ಒಪ್ಪುವವರೆಗೂ ಮಾಂಸಾಹಾರವನ್ನು ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರಂತೆ! "ಅವರು ನನ್ನ ಅಪ್ಪ ಎಂದು ಒಪ್ಪಿಕೊಂಡು ಚಿತ್ರಕ್ಕೆ ಯೆಸ್ ಎಂದು ಹೇಳಲು ನಾನು ಮನ್ನತ್ ತೆಗೆದುಕೊಂಡೆ. 10, 12 ಅಥವಾ 15 ದಿನಗಳವರೆಗೆ ನಾನು ಸಸ್ಯಾಹಾರಿ ಆಗಿದ್ದೆ. ಆಮೇಲೆ ಅವರು ಇದಕ್ಕೆ ಓಕೆ ಎಂದರು ಎಂದು ಜಾಹ್ನವಿ ಹೇಳುತ್ತಾರೆ. 

ಗಾಂಧಿ- ಅಂಬೇಡ್ಕರ್ ತತ್ವದ ಬಗ್ಗೆ ಮಾತನಾಡಿದ ಜಾಹ್ನವಿ ಕಪೂರ್- ಬೆಚ್ಚಿಬಿತ್ತು ಬಾಲಿವುಡ್!

ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ, ಪಂಕಜ್ ತ್ರಿಪಾಠಿ ಅವರು ಜಾಹ್ನವಿ ಕಪೂರ್‌ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದರು. ಸಂದರ್ಶನವೊಂದರಲ್ಲಿ ಅವರು, ಜಾಹ್ನವಿ ಅದ್ಭುತ ನಟಿ. ನಾನು ಅವಳಿಂದ ಬಹಳಷ್ಟು ಕಲಿಯುತ್ತೇನೆ. ಏಕೆಂದರೆ ಅವಳು ತುಂಬಾ ಕಠಿಣ ಪರಿಶ್ರಮ ಮತ್ತು ಅವಳ ಕೆಲಸದ ಬಗ್ಗೆ ಗಂಭೀರವಾಗಿರುತ್ತಾಳೆ. ವಾಸ್ತವವಾಗಿ, ಅವಳು ಯಾವುದೇ ಸ್ಟಾರ್‌ ಕಿಡ್‌ ತಂತ್ರಗಳನ್ನು ಹೊಂದಿಲ್ಲ, ಅವಳು ಮಾಂಸಾಹಾರವನ್ನು ಬಹಳ ಇಷ್ಟಪಡುತ್ತಾಳೆ. ಅವಳು ಲಸ್ಸಿ ಮತ್ತು ಬಿರಿಯಾನಿಯಂತಹ ಸ್ಥಳೀಯ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಾಳೆ ಮತ್ತು ನಾನು ತಿನ್ನಬೇಕೆಂದು ಒತ್ತಾಯಿಸುತ್ತಾಳೆ, ಹುಚ್ಚು ಹುಡುಗಿ ಎಂದು ಹೇಳಿದ್ದರು. 

ಇನ್ನು ಶ್ರೀದೇವಿ ಮತ್ತು ಬೋನಿ ಕಪೂರ್‌ ಪುತ್ರಿ ಜಾಹ್ನವಿ ಕಪೂರ್‌ ಕುರಿತು ತಮ್ಮ ಮುಂಬರುವ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಬಿಡುಗಡೆಗೆ ಕಾಯುತ್ತಿದ್ದಾರೆ . ರಾಜ್‌ಕುಮಾರ್ ರಾವ್ ಸಹ ನಟಿಸಿರುವ ಈ ಚಿತ್ರವು ಮೇ 31 ರಂದು ಥಿಯೇಟರ್‌ಗೆ ಬರಲಿದೆ.

ಬಾಲಿವುಡ್​ ಪ್ರತಿಯೊಬ್ಬ ತಾರೆಗೂ ಒಂದೊಂದು ರೇಟ್ ಇದೆ, ಅವ್ರು ರೇಷನ್​ ಕಾರ್ಡ್​ ಇದ್ದಂಗೆ: ಜಾಹ್ನವಿ ಓಪನ್​ ಮಾತು

View post on Instagram