ಸ್ಟಾರ್ ಡೈರೆಕ್ಟರ್ ರಾಜಮೌಳಿ ಏನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇಡೀ ತೆಲುಗು ಚಿತ್ರರಂಗವೇ ಪಾಲ್ಗೊಳ್ಳುತ್ತಿರುವ ಗ್ರೀನ್ ಇಂಡಿಯಾ ಚಾಲೆಂಜ್‌ ಅಡಿಯಲ್ಲಿ ರಾಜಮೌಳಿ ಶೇರ್ ಮಾಡಿದ ಪೋಸ್ಟ್‌ಗೆ ಆರ್‌ಜಿವಿ ಬರೆದ ಕಾಮೆಂಟ್ ವೈರಲ್ ಆಗುತ್ತಿದೆ.

'ಅರ್ನಾಬ್‌- ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌'; ಆರ್‌ಜಿವಿ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ! 

ರಾಜಮೌಳಿ ಪೋಸ್ಟ್‌:
'ನಾನು ಹಾಗೂ ನನ್ನ ತಂಡ  ರಾಮ್ ಚರಣ್ ಹಾಕಿದ ಸವಾಲನ್ನು ಇಂದು ಸ್ವೀಕರಿಸಿದ್ದೀವಿ. #GreenIndiaChallenge. ಮುಂದಕ್ಕೆ ನಾನು ಆರ್‌ಜಿವಿ, ವಿನಾಯಕ ಗಾರು, ಪೂರಿ ಜಗನ್ನಾಥ್ ಅವರನ್ನು ಗಿಡ ನೆಡಲು ನಾಮಿನೇಟ್ ಮಾಡುತ್ತೇನೆ,' ಎಂದು ರಾಜಮೌಳಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡು, ಆರ್‌ಜಿವಿಗೆ ಚಾಲೆಂಜ್ ಮಾಡಿದ್ದರು.

 

ಆರ್‌ಜಿವಿ ಟಾಂಗ್:
'ನನಗೆ ಸವಾಲ್ ಹಾಕಿರುವ ರಾಜಮೌಳಿ ಸರ್‌. ನಾನು ಈ ಗ್ರೀನ್‌ ಚಾಲೆಂಜ್‌ನಲ್ಲಿ ಭಾಗಿಯಾಗುವುದಿಲ್ಲ. ನಾನು ಮಣ್ಣು ಮುಟ್ಟಲು ಇಷ್ಟ ಪಡುವುದಿಲ್ಲ.  ನಮ್ಮ ಗಿಡ-ಮರಗಳು ಒಳ್ಳೆ ವ್ಯಕ್ತಿಯಿಂದ ಮುಟ್ಟಿಸಿಕೊಳ್ಳಲು ಬಯಸುತ್ತದೆ, ನನ್ನಂಥ ಸೆಲ್ಫಿಶ್‌ನಿಂದ ಅಲ್ಲ. ನಿಮಗೆ ಹಾಗೂ ನೀವು ನೆಟ್ಟ ಗಿಡಗಳಿಗೆ ಒಳ್ಳೆಯದಾಗಲಿ,' ಎಂದು ಬರೆದಿದ್ದಾರೆ.

ಸಿನಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ 'RRR'; ಇತಿಹಾಸ ಸೃಷ್ಟಿಸ್ತಾರಾ ರಾಜಮೌಳಿ?

ಆರ್‌ಜಿವಿ ಮಾಡಿರುವ ಟ್ಟೀಟ್‌ಗೆ ರಾಜಮೌಳಿಯಿಂದದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ನೆಟ್ಟಿಗರು ಮಾತ್ರ ಟಾಂಗ್‌ ಕೊಡುತ್ತಿದ್ದಾರೆ. ಅರೇ ಈ ಭೂಮಿಯಲ್ಲಿ ಬೆಳೆದ ನಿರ್ದೇಶಕರು, ನಮ್ಮ ಭೂಮಿ ಮಣ್ಣನ್ನು ಮಟ್ಟಲ್ಲ ಎನ್ನುತ್ತಾರೆ. ಸಿನಿಮಾದಲ್ಲಿ ಮಾತ್ರ ರೈತರ ಬಗ್ಗೆ ಎಲ್ಲಾ ಬೋಧನೆ ಮಾಡುವುದಾ, ಎಂದು ಕಾಲು ಎಳೆದಿದ್ದಾರೆ. 

ಮನುಷ್ಯ  ಒಂದಲ್ಲ ಒಂದು ದಿನ ಭೂಮಿಯಲ್ಲಿ ಮಣ್ಣಾಗಲೇ ಬೇಕಲ್ಲವೇ?