ರಾಮ್ ಚರಣ್ ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 3ಡಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ರಾಮ್ ಚರಣ್ ಹೊಸ ಹೇರ್ ಸ್ಟೈಲ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. 

ಟಾಲಿವುಡ್ ಸ್ಟಾರ್ ರಾಮ್ ಚರಣ್ (Ram charan) ಆರ್ ಆರ್ ಆರ್ (RRR) ಸಿನಿಮಾದ ಬಿಗ್ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಅನೇಕ ತಿಂಗಳಾಗಿದೆ ಆದರೂ ಸಂತಸ ಅಲೆಯಲ್ಲಿ ತೇಲುತ್ತಿದ್ದಾರೆ ರಾಮ್ ಚರಣ್. ಈ ಸಿನಿಮಾ ಬಳಿಕ ಬಂದ ಆಚಾರ್ಯ (Acharya) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತು. ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ವಿಫಲವಾಯಿತು. ಇದೀಗ ರಾಮ್ ಚರಣ್ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 3ಡಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದು ರಾಮ್ ಚರಣ್ ನಟನೆಯ 15ನೇ ಸಿನಿಮಾವಾಗಿದೆ. ಈಗಾಗಲೇ ಚಿತ್ರೀಕರಣದಲ್ಲಿ ನಿರತರಾಗಿರುವ ರಾಮ್ ಚರಣ್ ಇದೀಗ ಹೊಸ ಹೇರ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೌದು ಟಾಲಿವುಡ್ ಸ್ಟಾರ್ ರಾಮ್ ಚರಣ್ ಹೊಸ ಹೇರ್ ಸ್ಟೈಲ್ ಅಭಿಮಾನಿಗಳ ಹೃದಯ ಗೆದ್ದಿದೆ. ಪ್ರಸಿದ್ಧ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಾಕಿಮ್ (Aalim Hakim), ಸೌತ್ ಸ್ಟಾರ್ ರಾಮ್ ಚರಣ್‌ಗೆ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ. 

ರಾಮ್ ಚರಣ್ ಹೊಸ ಲುಕ‌್ ಅನ್ನು ಆಲಿಮ್ ಹಾಕಿಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆಲಿಮ್ ಹಾಕಿಮ್ ಈಗಾಗಲೇ ಅನೇಕ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ಯಶ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಸೇರಿದಂತೆ ಅನೇಕರಿಗೆ ಹೇರ್ ಸ್ಟೈಲ್ ಮಾಡಿ ಅಭಿಮಾನಿಗಳ ಹೃದಯ ಗೆದ್ದದಿದ್ದರು. ಇದೀಗ ರಾಮ್ ಚರಣ್ ಅವರಿಗೆ ಹೊಸ ಲುಕ್ ಕೊಟ್ಟಿದ್ದಾರೆ. 

ಬಾಲಿವುಡ್‌ಗೆ ಹಾರಿದ ರಾಮ್ ಚರಣ್; ಸಲ್ಮಾನ್ ಜೊತೆ ನಟನೆ

ಅಂದಹಾಗೆ ರಾಮ್ ಚರಣ್ ಈ ಹೊಸ ಲುಕ್ ಮುಂದಿನ ಸಿನಿಮಾಗಾಗಿ. ಆರ್ ಆರ್ ಆರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಮ್ ಚರಣ್ ಇದೀಗ ತಲೆ ಕೂದಲು ಮತ್ತು ದಾಡಿಯನ್ನು ಮತ್ತಷ್ಟು ಸ್ಟೈಲಿಶ್ ಮಾಡಿಸಿದ್ದಾರೆ. ಸಂಪೂರ್ಣವಾಗಿ ವಿಭಿನ್ನ ಲುಕ್‌ನಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ತನ್ನ ಹೊಸ ಲುಕ್ ಶೇರ್ ಮಾಡಿ ಕೆಲಸದಲ್ಲಿ ಜಾದುಗಾರ ಎಂದು ಬರೆದುಕೊಂಡಿದ್ದಾರೆ. ಇನ್ನು ಆಲಿಮ್ ಹಾಕಿಮ್ ಕೂಡ ರಾಮ್ ಚರಣ್ ಫೋಟೋ ಶೇರ್ ಮಾಡಿ RC15 ಸಿನಿಮಾಗೆ ಹೊಸ ಲುಕ್ ಸೆಶನ್ ಎಂದು ಬರೆದುಕೊಂಡಿದ್ದಾರೆ.

View post on Instagram

ಕಾರು ಚಾಲಕನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ರಾಮ್ ಚರಣ್; ಫೋಟೋ ವೈರಲ್

ರಾಮ್ ಚರಣ್ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಸೂಪರ್ ಎನ್ನುತ್ತಿದ್ದಾರೆ. ಇನ್ನು ಅನೇಕರು ಮಾಸ್ ಲುಕ್ ಎನ್ನುತ್ತಿದ್ದಾರೆ. ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ RC15 (ತಾತ್ಕಾಲಿಕ ಹೆಸರು) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. 3ಡಿಯಲ್ಲಿ ಬರ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.