ಇತ್ತೀಚೆಗಷ್ಟೇ ಮೃತಪಟ್ಟ ಟಾಲಿವುಡ್ ನಟ ಪವನ್ ಕಲ್ಯಾಣ್ ಫ್ಯಾನ್ಸ್‌ ಕುಟುಂಬಕ್ಕೆ ನಟ ರಾಮ್ ಚರಣ್ ನೆರವಾಗಿದ್ದಾರೆ.

ಟಾಲಿವುಡ್ ನಟ ರಾಮ್ ಚರಣ್ ಇತ್ತೀಚೆಗಷ್ಟೇ ಮೃತಪಟ್ಟ ಪವನ್ ಕಲ್ಯಾಣ ಫ್ಯಾನ್ಸ್ ಕುಟುಂಬಕ್ಕೆ 7.5 ಲಕ್ಷ ರೂಪಾಯಿ ನೀಡಿದ್ದಾರೆ. ಪವನ್ ಕಲ್ಯಾಣ್ ಬರ್ತ್‌ಡೇ ದಿನ ಬ್ಯಾನರ್ ಕಟ್ಟುವ ಸಂದರ್ಭ ಲೈವ್ ವಯರ್‌ನ ಸಂಪರ್ಕಕ್ಕೆ ಸಿಕ್ಕಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು.

ಶನಿವಾರ ರಾಮ್ ಚರಣ್ ನಡೆಗೆ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಸೈನಿಕ ಕುಟುಂಬಗಳಿಗೆ 2.5 ಲಕ್ಷದಂತೆ 7.5 ಲಕ್ಷ ರೂಪಾಯಿ ಕಳುಹಿಸಿದ ರಾಮ್ ಚರಣ್‌ಗೆ ಧನ್ಯವಾದಗಳು, ಇದನ್ನು ಸದಾ ನೆನಪಿನಲ್ಲಿಡುತ್ತೇನೆ. ಚಿತ್ತೋರ್‌ನಲ್ಲಿ ನಡೆದ ದುರಂತ ಘಟನೆಯಲ್ಲಿ ನೆರವಾಗಿದ್ದನ್ನು ನೆನಪಿಡುತ್ತೇನೆ. ಥಾಂಕ್ಯೂ ಎಂದು ಟ್ವೀಟ್ ಮಾಡಿದ್ದಾರೆ.

ಡ್ರಗ್ಸ್ ಮಾಫಿಯಾ: ನಟಿ ಸಾರಾ, ರಾಕುಲ್‌ ಪ್ರೀತ್‌ಗೆ NCB ನೋಟಿಸ್..!

ಕುಪ್ಪಮ್ ಕ್ಷೇತ್ರದಲ್ಲಿ ನಡೆದ ಘಟನೆ ಅತ್ಯಂತ ಬೇಸರವೆನಿಸುತ್ತಿದೆ. ನಿಮ್ಮ ಆರೋಗ್ಯ ಮತ್ತು ಜೀವಕ್ಕಿಂತ ದೊಡ್ಡದು ಬೇರೇನೂ ಇಲ್ಲ. ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದರು.

Scroll to load tweet…

ನಾವು ಮಾಡುವ ಯಾವ ಕೆಲಸವೂ ಹೋದ ಜೀವಕ್ಕೆ ಸಮವಾಗದು. ನಾವು ಅವರ ಕುಟುಂಬದ ಜೊತೆ ನಿಲ್ಲಬಹುದಷ್ಟೇ. ಮೃತರ ಕುಟುಂಬಕ್ಕೆ ನಾನು ತಲಾ 2.5 ಲಕ್ಷ ನೀಡುತ್ತೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದರು.

ಸ್ಟಾರ್ ನಟನ ಹುಟ್ಟು ಹಬ್ಬದ ಸಂಭ್ರಮ ; ಕರೆಂಟ್ ಶಾಕ್ ಗೆ ಮೂವರು ಅಭಿಮಾನಿಗಳ ಸಾವು

ಪವನ್ ಕಲ್ಯಾಣ್ ಕೂಡಾ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೆರವು ನೀಡಿದ್ದು, ವಕೀಲ್ ಸಾಬ್ ಸಿನಿಮಾ ತಂಡವೂ ಪ್ರತಿ ಕುಟುಂಬಕ್ಕೆ 2 ಲಕ್ಷದ ನೆರವಿನ ಭರವಸೆ ನೀಡಿದೆ.