ಸ್ಟಾರ್ ನಟರ ಬರ್ತಡೇ ಅಂದ್ರೆ ಅವರ ಅಭಿಮಾನಿಗಳಿಗೆ ತಿಂಗಳಿಡೀ ಹಬ್ಬವಿದ್ದಂತೆ. ಬ್ಯಾನರ್‌ ಕಟ್ಟುತ್ತಾ, ಪೋಸ್ಟರ್‌ ರೆಡಿ ಮಾಡಿಕೊಂಡು ಸಂಭ್ರಮಿಸುತ್ತಾರೆ. ಆದರೆ ಈ ಸಂಭ್ರಮದಲ್ಲಿ ಒಬ್ಬರಿಗಾದರೂ ಅನಾಹುತ ತಪ್ಪಿದಲ್ಲ.

ಕಾಲುಗಳಿಲ್ಲದ ಬೆಕ್ಕನ್ನು ದತ್ತು ಪಡೆದ ನಟ ಪವನ್ ಕಲ್ಯಾಣ್ ಪುತ್ರಿ!

ಹೌದು! ಇಂದು  ಟಾಲಿವುಡ್‌ ಪವರ್ ಸ್ಟಾರ್‌ ಪವನ್ ಕಲ್ಯಾಣ್‌ ಹುಟ್ಟು ಹಬ್ಬದ ವಿಶೇಷವಾಗಿ ಮೂವರು ಅಭಿಮಾನಿಗಳು ಚಿತ್ತೂರಿನ ಶಾಂತಿಪುರಂನಲ್ಲಿ ಬ್ಯಾನರ್ ಕಟ್ಟುತ್ತಿದ್ದರು. ಅವರ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರೂ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಳಕಿಗೆ ಬಂದಿದೆ.

ಮೃತಪಟ್ಟವರು ಸೋಮಶೇಖರ್ (30), ರಾಜಶೇಖರ್ (32) ಮತ್ತು ಅರುಣಾಚಲಂ(28) ಎಂದು ಗುರುತಿಸಲಾಗಿದೆ. ಅವರ ಕುಟುಂಬಕ್ಕೆ ಜನಾ ಸೇನಾ ಪಕ್ಷದಿಂದ ತಲೆ 2 ಲಕ್ಷ ಕುಟುಂಬದವರಿಗೆ ಕೊಡಲಾಗುತ್ತದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.  ಪೊಲೀಸರು ನೀಡಿರು ಮಾಹಿತಿ ಪ್ರಕಾರ ಈ ಘಟನೆ ರಾತ್ರಿ 8.30ಕ್ಕೆ ಸಂಭವಿಸಿದ್ದು ಪಕ್ಕದಲ್ಲಿದ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ಯಾನರ್‌ ಕಟ್ಟಲು ಎತ್ತರದಲ್ಲಿ ನಿಂತಿದ್ದ ವ್ಯಕ್ತಿಗಳು ಕೆಳಗೆ ಬಿದ್ದಿದ್ದು  ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆ ಉಸಿರೆಳೆದಿದ್ದರು ಎನ್ನಲಾಗಿದೆ.

ತೆಲುಗು ಸೂಪರ್​ಸ್ಟಾರ್​ ಭೇಟಿಯಾದ ಕರ್ನಾಟಕದ ಯುವ ಸಂಸದರು: ಕಾರಣ..?

ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ 2018ರಲ್ಲಿ ವಿಶಾಖಪಟ್ನಂನ  ಇಬ್ಬರು ಅಭಿಮಾನಿಗಳು ಅತಿ ಎತ್ತರದ ಬ್ಯಾನರ್‌ ಕಟ್ಟಲು ಹೋಗಿ ವಿದ್ಯುತ್ ತಂತಿಯಿಂದ ಮೃತಪಟ್ಟಿದ್ದರು.

"