ಮಾದಕವಸ್ತು ನಿಯಂತ್ರಣ ದಳ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಡಿಸೈನರ್ ಸೈಮನ್ ಕಂಬಟ್ಟಾ, ಸುಶಾಂತ್ ಮಾಜಿ ಮ್ಯಾನೇಜರ್ ರೋಹಿಣಿ ಐಯರ್‌, ಸಿನಿಮಾ ನಿರ್ದೇಶಕ ಮುಖೇಶ್ ಚಬ್ರಾಗೆ ನೋಟಿಸ್ ಕಳುಹಿಸಿದೆ.

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಎನ್‌ಸಿಬಿ ವಿಚಾರಣೆಯಲ್ಲಿ ಈ ಹೆಸರುಗಳನ್ನು ಬಾಯ್ಬಿಟ್ಟ ಹಿನ್ನೆಲೆಯಲ್ಲಿ ತನಿಖಾ ತಂಡ ಈ ಮೇಲಿನ ಸೆಲೆಬ್ರಟಿಗಳಿಗೆ ನೋಟಿಸ್ ಕಳುಹಿಸಿದೆ.

ಡ್ರಗ್ಸ್ ಮಾಫಿಯಾ: ಮುಂಬೈ, ಗೋವಾದ 7 ಪ್ರದೇಶಗಳಲ್ಲಿ ಎನ್‌ಸಿಬಿ ರೈಡ್..!

ಈ ಐದು ಸೆಲೆಬ್ರಟಿಗಳು ಬಾಲಿವುಡ್ ಪಾರ್ಟಿಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ರಿಯಾ ತನಿಖೆಯ ಸ<ದರ್ಭ ಬಾಯ್ಬಿಟ್ಟಿರುವುದಾಗಿ ತಿಳಿದು ಬಂದಿದೆ. ಎನ್‌ಸಿಬಿ ಬಾಲಿವುಡ್‌ನ 25 ಸೆಲೆಬ್ರಟಿಗಳಿಗೆ ನೋಟಿಸ್ ಕಳುಹಿಸುವ ಸಾಧ್ಯತೆ ಬಗ್ಗೆ ಈಗಾಗಲೇ ವರದಿಯಾಗಿತ್ತು.

"

ರಿಯಾ ಚಕ್ರವರ್ತಿ ಹೇಳಿದಂತೆ ಬಾಲಿವುಡ್‌ ಶೇ.80ರಷ್ಟು ಸೆಲೆಬ್ರಿಟಿಗಳು ಡ್ರಗ್ಸ್ ಸೇವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಇವರಲ್ಲಿ ಹೆಚ್ಚಿನವರು ಬಿ ಕ್ಯಾಟಗರಿ ಕಲಾವಿದರು ಎನ್ನಲಾಗಿದೆ. ಈಗಾಗಲೇ ಎನ್‌ಸಿಬಿ ಮುಂಬೈ, ಗೋವಾದ 7 ಪ್ರದೇಶಗಳಲ್ಲಿ ರೈಡ್ ನಡೆಸಿದೆ. ಇಂದು ಈ ಸಂಬಂಧ ಮಹತ್ವದ ಸಭೆಯೂ ನಡೆಯಲಿದೆ ಎನ್ನಲಾಗಿದೆ.