ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಹಬ್ಬದ ಪೋಸ್ಟ್‌. ನೆಗೆಟಿವ್ ಕಾಮೆಂಟ್‌ಗಿಂತ ಪಾಸಿಟಿವ್ ಹೇಳಿದ್ದವರೇ ಹೆಚ್ಚು..... 
 

Mission Majnu Rashmika Mandanna Sankranti Festival wishes in 8 language gets positive and Negative comment vcs

ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಭಾಷೆಯ ಅಭಿಮಾನಿಗಳಿಗೂ ವಿಶ್ ಮಾಡಿದ್ದಾರೆ. ತುಂಬಾ ಕ್ಯೂಟ್ ಆಗಿ ಕಾಣಿಸುವ ರಶ್ಮಿಕಾಗಿಂತ 8 ಭಾಷೆಯಲ್ಲಿ ಬರೆದಿರುವ ಸಾಲಿಗಳು ಸಖತ್ ವೈರಲ್ ಆಗುತ್ತಿದೆ. ಕನ್ನಡ ಗೊತ್ತಿಲ್ಲ ಕನ್ನಡ ಬರಲ್ಲ ಎಂದು ಹೇಳುವ ರಶ್ಮಿಕಾ ಈ ಒಂದು ಪೋಸ್ಟ್‌ನಿಂದ ಮತ್ತೊಮ್ಮೆ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ. 

ಹೌದು! 'ಸಂಕ್ರಾಂತಿಯ ಶುಭಾಶಯಗಳು!
அனைவருக்கும் இனிய 
பொங்கல் திருநாள் 
நல்வாழ்த்துக்கள்!
संक्रांति की शुभकामनाएं!
సంక్రాంతి శుభాకాంక్షలు!
പൊങ്കൽ ആശംസകൾ!
Happy Sankranti!' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಕನ್ನಡವನ್ನು ಮೊದಲು ಬರೆದಿರುವುದಕ್ಕೆ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಪಂಚ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಭಾರತದಲ್ಲಿರುವ ಪ್ರಮುಖ ಭಾಷೆಗಳಲ್ಲಿ ವಿಶ್ ಮಾಡಿದ್ದಾರೆ. ಕನ್ನಡ, ತಮಿಳು, ತೆಗುಲು, ಮಲಯಾಳಂ, ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. 

ವಿಜಯ್ ದಳಪತಿ- ಸಂಗೀತಾ ದಾಂಪತ್ಯ ಕಲಹಕ್ಕೆ ಕಾರಣವಾದ್ರಾ ರಶ್ಮಿಕಾ ಮಂದಣ್ಣ?

'ಚಿನ್ನದಂತಹ ಹುಡುಗಿಗೆ ಸಂಕ್ರಾಂತಿ ಹಬ್ಬ','ಕನ್ನಡದ ಮುದ್ದು ಕುವರಿ, ದೇಶದ ಯುವಕರ ಪ್ರೀತಿಯ ಸಂಕೇತ, ಕೊಡಗಿನ ಕಾವೇರೆ ನಿಮ್ಮ ಕನ್ನಡ ಪ್ರೀತಿ ಯಾವಾಗಲೂ ಹೀಗೆ ಮೊದಲಿರಲಿ' ಎಂದು ಅನೇಕರು ಪಾಸಿಟಿವ್ ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು 'ನೀ ಏಷ್ಟೇ ಬಕೆಟ್ ಹಿಡಿದ್ರು ನಾವ ಮಾತ್ರಾ ನೀ ಮಾತಾಡಿದು, ಮಾಡಿದ್ದು ಮರೆಯೋಕ್ಕೆ ಆಗಲ್ಲಾ ನಮ್ಗೆ ನಾವು ಕನ್ನಡಿಗರು  ಎಲ್ಲಾದರು ಇರೂ  ಎಂತಾದರು ಇರು ಎಂದೆಂದಿಗೂ ನೀ ಮೊದಲು ಕನ್ನಡಿಗನಾಗಿರು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಗಾಸಿಪ್, ಟ್ರೋಲ್‌ಗೆ ರಶ್ಮಿಕಾ ರಿಯಾಕ್ಷನ್:

 ರಶ್ಮಿಕಾ ವಿರುದ್ಧ ಅನೇಕರ ಆಕ್ರೋಶ ಹೊರಹಾಕಿತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ನಕಾರಾತ್ಮಕತೆಯ ಬಗ್ಗೆ ರಶ್ಮಿಕಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 'ದಿನ ಕೊನೆಯಲ್ಲಿ ನಾವು ಮನರಂಜನೆ ನೀಡುತ್ತೇವೆ. ಜನರನ್ನು ರಂಜಿಸಲು ಸಿನಿಮಾ ಮಾಡುತ್ತೇವೆ. ನಾವು ಸೃಜನಶೀಲ ಕ್ಷೇತ್ರಕ್ಕೆ ಬರಲು ಇದು ಮುಖ್ಯ ಕಾರಣವಾಗಿದೆ. ನಿಮ್ಮ ಕೆಲಸವನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಮೇಲೆ ಇದು ಅಲಂಬಿತವಾಗಿದೆ. ಜನರು ನಾವು ಯಾರೆಂದು ನಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯ ಸಿನಿಮಾ ಮಾಡಿದ್ರೆ ಜನರು ನಿಮ್ಮನ್ನು ಇಷ್ಟ ಪಡುತ್ತಾರೆ. ಉತ್ತಮ ಸಿನಿಮಾ ಮಾಡಿಲ್ಲ ಅಂದರೆ ಏನ್ ಮಾಡಿದ್ದೀರಾ ಎಂದು ಕೇಳುತ್ತಾರೆ. ನಮ್ಮ ಜೀವನ ಒಂದೇ ಸಿನಿಮಾದ ಮೇಲೆ ನಿಂತಿಲ್ಲ. ಇದೊಂದು ಪಯಣ' ಎಂದು ಹೇಳಿದ್ದಾರೆ.   

ಪಬ್ಲಿಕ್‌ ಫಿಗರ್‌ ಆದಾಗ ಹೂವಿನ ಜೊತೆ ಮೊಟ್ಟೆಯೂ ಬೀಳುತ್ತೆ: ಸುದೀಪ್‌

ಟ್ರೋಲ್ ಮತ್ತು ನೆಗೆಟಿವಿಟಿ ತನ್ನ ಜೀವನ ಮತ್ತು ವೃತ್ತಿ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ರಶ್ಮಿಕಾ ಮಾತನಾಡಿದ್ದಾರೆ. ಈಗ ಹೇಗೆ ಎದುರಿಸಬೇಕೆಂದು ಕಲಿತಿದ್ದೇನೆ ಎಂದು ರಶ್ಮಿಕಾ ಹೇಳಿದರು. 'ಇದು ನಮ್ಮ ಕೆಲಸದ ಜೊತೆಯೇ ಬರುತ್ತಿದೆ. 10 ವರ್ಷಗಳ ಹಿಂದೆ ಪಾಪರಾಜಿ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಆಗ ಜನ ಸ್ಟಾರ್‌ಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗಬೇಕಿತ್ತು. ಆದರೆ ಈಗ ಹಾಗಿಲ್ಲ. ಇದು ನಮ್ಮ ದೃಶ್ಯದ ಒಂದು ಭಾಗವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರೆಯ ಬೇಕು' ಎಂದು ಹೇಳಿದ್ದಾರೆ.   

 

Latest Videos
Follow Us:
Download App:
  • android
  • ios