ಮುಸ್ಲಿಂ ಧರ್ಮ ಸ್ವೀಕರಿಸಿ ಗಂಡನನ್ನೇ ಟ್ರ್ಯಾಪ್ ಮಾಡಿದ್ರಾ ರಾಖಿ? ಮಾಜಿ ಪತಿ ಹೇಳಿದ್ದೇನು?
ಜೈಲಿನಿಂದ ಹೊರಬಂದಿರುವ ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್, ಪತ್ರಿಕಾಗೋಷ್ಠಿ ಕರೆದು ಎಲ್ಲಾ ಸತ್ಯವನ್ನೂ ಬಹಿರಂಗಗೊಳಿಸುವುದಾಗಿ ಹೇಳಿದ್ದಾರೆ. ಅವರು ಹೇಳಿದ್ದೇನು?
ರಾಖಿ ಸಾವಂತ್ Rakhi Sawant ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಅವರು ಬಿಡುಗಡೆಗೊಂಡಿದ್ದಾರೆ.
ಇದಾದ ಬಳಿಕ ರಾಖಿ ಹಿಜಾಬ್ (Hijab) ಧರಿಸಿ ಬಂದು ಇಸ್ಲಾಂ ಸ್ವೀಕರಿಸಿರುವ ಬಗ್ಗೆ ಜಗಜ್ಜಾಹೀರ ಮಾಡಿದ್ದರು. ವಿಡಿಯೋ ಹಂಚಿಕೊಂಡಿದ್ದು, ಅದರ ಶೀರ್ಷಿಕೆಯಲ್ಲಿ 'ನನ್ನ ಮೊದಲ ರೋಸಾ' ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಅವರು, 'ಎಲ್ಲರಿಗೂ ಸಲಾಮ್ ವಾಲೇಕುಮ್. ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ, 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ ನನಗೆ ಹಸಿವಾಗುತ್ತಿಲ್ಲ. ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ. ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ' ಎಂದಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು. ಅದಾದ ಬಳಿಕ ಮತ್ತೊಬ್ಬ ಹುಡುಗ ತಮ್ಮ ಬಾಳಲ್ಲಿ ಎಂಟ್ರಿ ಕೊಟ್ಟಿರೋದಾಗಿ ನಟಿ ಹೇಳಿಕೊಂಡಿದ್ದರು. ದುಬೈನಲ್ಲಿ 'ನಾನೊಬ್ಬರನ್ನು ಭೇಟಿಯಾಗಿದ್ದೇನೆ, ಆದರೆ ಅವರ ಜೊತೆ ಹೊಸ ಜೀವನ ಶುರು ಮಾಡಲು ಭಯ ಆಗುತ್ತಿದೆ, ನಾನಿನ್ನೂ ರೆಡಿ ಇಲ್ಲ. ಆದರೆ ಅವರು ತುಂಬ ಒಳ್ಳೆಯವರು. ನನ್ನ ಜೀವನದಲ್ಲಿಯೂ ಖುಷಿ ಬೇಕು' ಎಂದಿದ್ದರು.
ಪ್ರಧಾನಿಯಾಗಲು ರಾಹುಲ್ ಗಾಂಧಿ ಏನ್ ಮಾಡ್ಬೇಕು? ರಾಖಿ ಸಾವಂತ್ ಕೊಟ್ಟ ಟಿಪ್ಸ್ ಇದು
ಇದೆಲ್ಲವುಗಳ ನಡುವೆ ಇದೇ ಮೊದಲ ಬಾರಿಗೆ ಜೈಲಿನಿಂದ ಹೊರಕ್ಕೆ ಬಂದ ಬಳಿಕ ಆದಿಲ್ ಖಾನ್ ಪತ್ರಕರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ರಾಖಿ ಸಾವಂತ್ ಕುರಿತು ಕೇಳಿದ ಪ್ರಶ್ನೆಗೆ ಅವರು, ನನ್ನನ್ನು ರಾಖಿ ಮತ್ತು ಆಕೆಯ ಸ್ನೇಹಿತರು ಸೇರಿ ಟ್ರ್ಯಾಪ್ ಮಾಡಿದ್ದಾರೆ. ನನ್ನನ್ನು ಹೇಗೆ ಸಿಲುಕಿಸಿದರು ಎನ್ನುವುದನ್ನು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ವಿವರಿಸುತ್ತೇನೆ. ನಿಜವಾಗಿಯೂ ಏನು ನಡೆದಿತ್ತು ಎಂದು ಸವಿಸ್ತಾರವಾಗಿ ಹೇಳುತ್ತೇನೆ ಎಂದಿದ್ದಾರೆ. ಈಗ ವಿಚ್ಛೇದನ ಆಗಿರುವ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಕೋಟ್ಯಂತರ ರೂಪಾಯಿ ಪರಿಹಾರಕ್ಕೆ ಕೇಳಬಹುದು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿರುವ ಆದಿಲ್, ನೋಡಿ ಏನು ಆಗಿದೆ ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತೇನೆ. ನಂತರ ಕೋಟಿ ಹಣ ನಾನು ಅವಳಿಗೆ ನೀಡಬೇಕೋ ಅಥವಾ ಅವಳೇ ನನಗೆ ನೀಡಬೇಕೋ ಎನ್ನುವುದು ನಿರ್ಧಾರವಾಗುತ್ತದೆ ಎಂದಿದ್ದಾರೆ.
ಇನ್ನು ರಾಖಿಯನ್ನು ಮತ್ತೆ ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡದೆ, ಈಗಲೇ ಆ ವಿಷಯ ಹೇಳುವುದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಸವಿಸ್ತಾರವಾಗಿ ಹೇಳುತ್ತೇನೆ. ಹೇಗೆ ನನ್ನನ್ನು ಟ್ರ್ಯಾಪ್ (Trap)ಮಾಡಲಾಯಿತು ಎನ್ನುವುದನ್ನೂ ಹೇಳುತ್ತೇನೆ ಎಂದಿದ್ದಾರೆ. ಇದೀಗ ಆದಿಲ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ವಿವಿಧ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ರಾಖಿ ಸಾವಂತ್ಗೆ ಏನೋ ಕಾದಿದೆ ಎನ್ನುತ್ತಿದ್ದಾರೆ ಹಲವರು. ಇವರು ಬಿಗ್ಬಾಸ್ಗೆ ಹೋಗಲು ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ.
ಸೆರಗು ಜಾರಬಾರದು ಅಂತಾನೇ ಸೇಫ್ಟಿ ಪಿನ್ ಇರೋದು, ರಾಖಿಗೆ ನೆಟ್ಟಿಗರ ಫ್ಯಾಷನ್ ಪಾಠ
ಅಂದಹಾಗೆ, ರಾಖಿ ಸಾವಂತ್ ಆದಿಲ್ ಖಾನ್ ಅವರನ್ನು ಮೇ 2022 ರಲ್ಲಿ ವಿವಾಹವಾದರು. 7 ತಿಂಗಳ ನಂತರ ಜನವರಿ 2023 ರಲ್ಲಿ ರಾಖಿ ಮದುವೆಯನ್ನು ಘೋಷಿಸಿದ್ದರು. ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡು ಅದನ್ನು ಬಹಿರಂಗಪಡಿಸಿದ್ದರಯ, ನಂತರ ಆದಿಲ್ಗೆ ವಿಚ್ಛೇದನ ನೀಡಲಿದ್ದೇನೆ ಎಂದು ಕಳೆದ ತಿಂಗಳು ರಾಖಿ ಹೇಳಿದ್ದರು.