Asianet Suvarna News Asianet Suvarna News

ಆದಿಲ್ ಜೊತೆ ನನ್ನ ಮದುವೆ ಉಳಿಸಿದ್ದು ಸಲ್ಮಾನ್ ಖಾನ್; ರಾಖಿ ಸಾವಂತ್

ಆದಿಲ್ ಜೊತೆ ನನ್ನ ಮದುವೆ ಉಳಿಸಿದ್ದು ಸಲ್ಮಾನ್ ಖಾನ್ ಎಂದು ರಾಖಿ ಸಾವಂತ್ ಬಹಿರಂಗ ಪಡಿಸಿದ್ದಾರೆ.

Rakhi Sawant reveals Salman Khan saved her marriage with Adil Khan sgk
Author
First Published Jan 17, 2023, 1:40 PM IST

ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿಯನ್ನು ಮದುವೆಯಾಗಿರುವ ರಾಕಿ ಸಾವಂತ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮದುವೆ ಫೋಟೋ, ವಿಡಿಯೋ ವೈರಲ್ ಆಗುತ್ತಿದ್ದಂತೆ ಆದಿಲ್ ಮದುವೆ ಆಗಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದಿಲ್ ಇವಾಗ ಉಲ್ಟ ಹೊಡೆದಿದ್ದಾನೆ ಎಂದು ರಾಕಿ ಸಾವಂತ್ ಅಳುತ್ತಾ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದರು. ಬಳಿಕ ಆದಿಲ್ ಮದುವೆಯಾಗಿರುವುದಾಗಿ ಒಪ್ಪಿಕೊಂಡರು. ರಾಖಿ ಸಾವಂತ್ ಮದುವೆ ಡ್ರಾಮಾ ಇನ್ನೂ ಮುಗಿದ ಹಾಗೆ ಕಾಣುತ್ತಿಲ್ಲ. ಮದುವೆ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ರಾಖಿ ಫತೀಮಾ ಆಗಿ ಬದಲಾಗಿದ್ದಾರೆ. ಇತ್ತೀಚಿಗಷ್ಟೆ ಮುಂಬೈನಲ್ಲಿ ಪಾಪಾರಾಜಿಗಳ ಮುಂದೆ ಪತಿ ಆದಿಲ್ ಜೊತೆ ಹಾಜರಾದ ರಾಕಿ ಸಾವಂತ್ ತಮ್ಮ ಮದುವೆ ಉಳಿಸಿದ್ದು ಸಲ್ಮಾನ್ ಖಾನ್ ಎಂದು ಹೇಳಿದ್ದಾರೆ. ಆದಿಲ್ ತನ್ನನ್ನು ಸ್ವಾಕರಿಸಲು ನಿರಾಕರಿಸಿದಾಗ ಸಲ್ಮಾನ್ ಖಾನ್ ಕರೆ ಮಾಡಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. 

ಸಲ್ಮಾನ್ ಖಾನ್ ಅವರನ್ನು ಸಹೋದರ ಎನ್ನುವ ರಾಖಿ ಸಾವಂತ್ ತನ್ನ ಮದುವೆಯನ್ನು ಉಳಿಸಿದರು ಎಂದು ಹೇಳಿದ್ದಾರೆ. ಪಾಪರಾಜಿಯೊಂದಿಗೆ ಮಾತನಾಡಿದ ರಾಖಿ, 'ನನ್ನ ಸಹೋದರ (ಸಲ್ಮಾನ್) ಅವರನ್ನು ತುಂಬಾ ಪ್ರೀತಿಸುತ್ತೇನೆ.  ಖಂಡಿತವಾಗಿಯೂ ಅವನಿಗೆ ನನ್ನ ಸಹೋದರನಿಂದ ಕರೆ ಬಂದಿದೆ. ಇದನ್ನು ಸರಿ ಮಾಡಿದ್ದು ಅವರೆ ನಿಮಗೆ ಗೊತ್ತ' ಎಂದು ಹೇಳಿದರು. 'ಅವನು ಸಲ್ಮಾನ್ ಸಹೋದರಿಯ ಮದುವೆಯನ್ನು ನಿರಾಕರಿಸಬಹುದು ಎಂದು ನೀವು ಭಾವಿಸುತ್ತೀರಾ?, ಸಹೋದರನ ಫೋನ್ ಕರೆಯ ಬಳಿಕ ಒಪ್ಪಿಕೊಂಡಿದ್ದಾನೆ' ಎಂದು ರಾಖಿ ಹೇಳಿದ್ದಾರೆ. 

ನಾನೀಗ ವಿವಾಹಿತೆ... ದೂರ ನಿಲ್ಲಪ್ಪಾ... ಅಭಿಮಾನಿಗಳಿಗೆ ಹೀಗೆಂದ ರಾಖಿ ಸಾವಂತ್

ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ ಆದಿಲ್, ಅವರು ತುಂಬಾ ಒಳ್ಳೆಯವರು, ವಿನಮ್ರ ವ್ಯಕ್ತಿ. ಅವರು ನನಗೆ ಕೆಲವು ವಿಷಯಗಳನ್ನು ಹೇಳಿದರು. ನಾನು ಕೂಡ ಓಕೆ ಎಂದು ಹೇಳಿದೆ' ಎಂದು ಆದಿಲ್ ಹೇಳಿದರು. ಬಳಿಕ ಮತ್ತೆ ಮಾತನಾಡಿದ ರಾಖಿ ಸಾವಂತ್, 'ನನ್ನ ಸಹೋದರ ಸಲ್ಮಾನ್ ನನಗೆ ಸಹಾಯ ಮಾಡಿದರು' ಎಂದು ಹೇಳಿದರು. ರಾಖಿ ಸಾವೆಂತ್ ಮತ್ತು ಆದಿಲ್ ಖಾನ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಸಲ್ಮಾನ್ ಖಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. 

ಕೇಸರಿ ಬುರ್ಖಾ ಧರಿಸಿ ಬಂದ ರಾಖಿ ಸಾವಂತ್​ ಹೇಳಿದ್ದೇನು?

ರಾಖಿಗೆ 2ನೇ ಮದುವೆ

ಅಂದಹಾಗೆ ರಾಖಿ ಸಾವಂತ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಮೊದಲು ರಿತೇಶ್ ಎನ್ನುವವರ ಜೊತೆ ರಾಖಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಕೆಲವೇ ಸಮಯಕ್ಕೆ ರಿತೇಶ್‌ರಿಂದ ದೂರ ಆಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಆದಿಲ್ ಜೊತೆ ಪ್ರೀತಿಯಲ್ಲಿದ್ದರು. ಇದೀಗ ಮದುವೆಯಾಗಿದ್ದಾರೆ.

 

Follow Us:
Download App:
  • android
  • ios