Asianet Suvarna News Asianet Suvarna News

ಮೈಸೂರು ಹುಡುಗನ ಜೊತೆ ವಿವಾಹ ಬಳಿಕ ಫಾತೀಮಾ ಆಗಿ ಬದಲಾದ ನಟಿ ರಾಖಿ ಸಾವಂತ್

ಕಳೆದ ವರ್ಷ ಮೈಸೂರು ಮೂಲದ ತಮ್ಮ ಪ್ರಿಯಕರ ಆದಿಲ್‌ ಖಾನ್‌ ದುರಾನಿಯನ್ನು ಮದುವೆಯಾಗಿದ್ದ ನಟಿ ರಾಖಿ ಸಾವಂತ್‌, ವಿವಾಹದ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. 

Rakhi Sawant changes name to Fatima after marrying beau Adil Durrani sgk
Author
First Published Jan 13, 2023, 3:50 PM IST

ಕಳೆದ ವರ್ಷ ಮೈಸೂರು ಮೂಲದ ತಮ್ಮ ಪ್ರಿಯಕರ ಆದಿಲ್‌ ಖಾನ್‌ ದುರಾನಿಯನ್ನು ಮದುವೆಯಾಗಿದ್ದ ನಟಿ ರಾಖಿ ಸಾವಂತ್‌, ವಿವಾಹದ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.  ರಾಖಿ ಸಾವಂತ್‌ ಈಗ ಫಾತಿಮಾ ಆಗಿ  ಬದಲಾಗಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಮದುವೆಯಾಗಿ 7 ತಿಂಗಳ ಬಳಿಕ ತಮ್ಮಿಬ್ಬರ ನಡುವೆ ನಿಖಾ ಆಗಿಲ್ಲ ಎಂದು ಆದಿಲ್‌ ವಾದಿಸುತ್ತಿದ್ದಾನೆ ಎಂದು ರಾಖಿ ನೋವು ತೋಡಿಕೊಂಡಿದ್ದಾರೆ.

ಕಳೆದ ವರ್ಷದ ಮೇ 29ರಂದು ಮುಂಬೈನ ತಮ್ಮ ಮನೆಯಲ್ಲೇ ರಾಖಿ ಆದಿಲ್‌ರನ್ನು ವರಿಸಿದ್ದರು. ರಹಸ್ಯವಾಗಿಯೇ ನಡೆದ ಮದುವೆಯ ವಿಷಯವನ್ನು ಕೆಲ ತಿಂಗಳ ಬಳಿಕ ರಾಖಿ ಬಹಿರಂಗಪಡಿಸಿದ್ದರು. ಆದರೆ ಇದೀಗ ಅಂದು ನಡೆದ ಮದುವೆಯ ಫೋಟೋ, ವಿಡಿಯೋಗಳನ್ನು ರಾಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಖಿ-ಆದಿಲ್‌ ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಿರುವ, ಮೌಲಾನಾ ಇಸ್ಲಾಂ ಶೈಲಿಯಲ್ಲಿ ಮದುವೆ ಮಾಡಿಸುತ್ತಿರುವ ದೃಶ್ಯಗಳಿವೆ. ಜೊತೆಗೆ ನಿಖಾನಾಮದಲ್ಲಿ ತಮ್ಮ ಹೆಸರನ್ನು ರಾಖಿ ಸಾವಂತ್‌ ಫಾತಿಮಾ ಎಂದು ಬದಲಾಯಿಸಿಕೊಂಡಿರುವ ವಿಷಯವನ್ನೂ ರಾಖಿ ಬಹಿರಂಗಪಡಿಸಿದ್ದಾರೆ.

ಫೋಟೋ, ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿರುವ ರಾಖಿ, ‘ತನ್ನ ಸೋದರಿಯರ ವಿವಾಹ ಆಗುವವರೆಗೂ ನಮ್ಮಿಬ್ಬರ ಮದುವೆ ವಿಷಯ ಬಹಿರಂಗ ಮಾಡದಂತೆ ಆದಿಲ್‌ ಕೋರಿದ್ದ. ಹಾಗಾಗಿ ನಾನು ಮೊದಲಿಗೆ ಈ ವಿಷಯ ಬಹಿರಂಗಪಡಿಸಿರಲಿಲ್ಲ. ಬಳಿಕ ನಾನ್‌ ಬಿಗ್‌ಬಾಸ್‌ ಮನೆಗೆ ಹೋದೆ. ಅಲ್ಲಿಂದ ಬಂದ ಮೇಲೆ ನಮ್ಮಿಬ್ಬರಿಗೆ ಮದುವೆಯೇ ಆಗಿಲ್ಲ. ನಿಖಾಹ್‌ ನಕಲಿ ಎಂದು ಆದಿಲ್‌ ವಾದಿಸುತ್ತಿದ್ದಾನೆ. ಹಾಗಿದ್ದರೆ ಫೋಟೋ, ವಿಡಿಯೋ ಏನು’ ಎಂದು ಕಣ್ಣೀರಿಡುತ್ತಾ ಪ್ರಶ್ನಿಸಿದ್ದಾರೆ.

‘ಆದಿಲ್‌ಗಾಗಿ ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ, ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡೆ, ಆತನನ್ನು ಪ್ರೀತಿಸಿದೆ, ಹರಾಂ ಬದಲು ಹಲಾಲ್‌ ಮಾಡಿದೆ. ಇಷ್ಟೆಲ್ಲಾ ಮಾಡಿದ ಮೇಲೂ ನನ್ನ ತಪ್ಪೇನು ಎಂದು ನನಗೆ ಗೊತ್ತಾಗುತ್ತಿಲ್ಲ’ ಎಂದು ರಾಖಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಖಿಗೂ ಮದ್ವೆಗೂ ಆಗಿ ಬರೋಲ್ವಾ? ಏಕೆ ಯಾವಾಗಲೂ ಮೋಸ ಹೋಗ್ತಾರೆ?

ರಾಖಿಗೆ 2ನೇ ಮದುವೆ

ಅಂದಹಾಗೆ ರಾಖಿ ಸಾವಂತ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಮೊದಲು ರಿತೇಶ್ ಎನ್ನುವವರ ಜೊತೆ ರಾಖಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಕೆಲವೇ ಸಮಯಕ್ಕೆ ರಿತೇಶ್‌ರಿಂದ ದೂರ ಆಗಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಆದಿಲ್ ಜೊತೆ ಪ್ರೀತಿಯಲ್ಲಿದ್ದರು. ಇದೀಗ ಮದುವೆಯಾಗಿದ್ದಾರೆ. 

ಮತ್ತೆ ಮದುವೆಯಾದ ರಾಖಿ ಸಾಮಂತ್; ಮೈಸೂರು ಮೂಲದ ಆದಿಲ್ ಜೊತೆ ರಿಜಿಸ್ಟರ್ ಮ್ಯಾರೇಜ್

ಆಸ್ಪತ್ರೆಯಲ್ಲಿ ರಾಖಿ ಸವಂತ್ ತಾಯಿ 

ರಾಖಿ ಸಾವಂತ್ ತಾಯಿ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಯಿ ಜಯ್ ಸಾವಂತ್ ಅವರ ವಿಡಿಯೋವನ್ನು ರಾಖಿ ಸಾವಂತ್ ಇತ್ತೀಚಿಗಷ್ಟೆ ಶೇರ್ ಮಾಡಿದ್ದರು. ಅಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಹೇಳಿದ್ದರು. ತಾಯಿಯ ಅನಾರೋಗ್ಯದ ಬೆನ್ನಲ್ಲೇ ಮದುವೆ ಸುದ್ದಿ ವೈರಲ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ರಾಖಿ ಸಾವಂತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

Follow Us:
Download App:
  • android
  • ios