ರಾಖಿ ಸಾವಂತ್ ಕಂಗನಾ ರಣಾವತ್‌ಗೆ ಹೊಸದೊಂದು ಮನವಿ ಮಾಡಿದ್ದಾರೆ. ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಲು ಸಹಾಯ ಮಾಡಲು ಮುಂದೆ ಬರಬೇಕೆಂದು ಬಿಗ್ ಬಾಸ್ 14 ಸ್ಪರ್ಧಿ ಕ್ವೀನ್‌ ಕಂಗನಾರನ್ನು ಕೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ, ಕೋವಿಡ್ -19 ಎರಡನೇ ಅಲೆಯ ಮಧ್ಯೆ ಈ ಹೋರಾಟದಲ್ಲಿ ಸಿನಿಮಾ ಸೆಲೆಬ್ರಿಟಿಗಳು ದೇಶಕ್ಕೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಸೋನುಸೂದ್, ಅಕ್ಷಯ್, ಸುನಿಲ್ ಶೆಟ್ಟಿ ಸೇರಿ ಬಹಳಷ್ಟು ಜನ ಜನರ ನೆರವಿಗೆ ಧಾವಿಸಿದ್ದಾರೆ.

ದಳಪತಿ ವಿಜಯ್ ಸಾಂಗ್‌ಗೆ ಕೆನಡಾ ಹುಡುಗರ ಸಖತ್ ಸ್ಟೆಪ್ಸ್

ರಾಖಿ ಮುಂಬೈ ಪಾಪರಾಜಿಯೊಂದಿಗೆ ಮಾತನಾಡಿದಾಗ ವ್ಯಕ್ತಿಯೊಬ್ಬರು, ಕಂಗನಾ ಈಗೀಗ ದೇಶದ ಸ್ಥಿತಿ ಭಾರೀ ಕೆಟ್ಟದಾಗಿದೆ. ದೇಶದಲ್ಲಿ ಆಕ್ಸಿಜನ್ ಸಿಗುತ್ತಿಲ್ಲ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ರಾಖಿ ತಮ್ಮ ಈಸೀ ಸ್ಟೈಲ್‌ನಲ್ಲಿ, ಓಹೋ ಸಿಗುತ್ತಿಲ್ಲವಾ? ಕಂಗನಾಜಿ ನೀವು ಈ ದೇಶದ ಸೇವೆ ಮಾಡಿ, ದಯವಿಟ್ಟು ಸಹಾಯ ಮಾಡಿ, ನಿಮ್ಮಲ್ಲಿ ಅಷ್ಟು ಕೋಟಿ ರೂಪಾಯಿ ಇದೆ. ಆಕ್ಸಿಜನ್ ಖರೀದಿಸಿ ಜನರಿಗೆ ಹಂಚಿ. ನಾವು ಇದನ್ನೇ ಮಾಡುತ್ತಿದ್ದೇವೆ ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona