ಸಿಎಂ ಯೋಗಿ ಜೊತೆ ರಜನೀಕಾಂತ್ ಜೈಲರ್ ವೀಕ್ಷಣೆ: ತಲೈವಾ ಹೇಳಿದ್ದೇನು?
ನಟ ರಜನೀಕಾಂತ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೊತೆ ಜೈಲರ್ ವೀಕ್ಷಿಸಲಿದ್ದಾರೆ. ನಟ ಹೇಳಿದ್ದೇನು?

ಟಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ (Jailer) ಚಿತ್ರ ಬಹುತೇಕ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾ ರಿಲೀಸ್ ಆಗಿ ಶುಕ್ರವಾರ 9ನೇ ದಿನ. ಅಂದು ಸಿನಿಮಾ ಭಾರತದಲ್ಲಿ 10 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ವಾರದ ಜೈಲರ್ ಕಲೆಕ್ಷನ್ 235.65 ಕೋಟಿ ಇದ್ದು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ದು ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ಈ ಸಿನಿಮಾದ ಸದ್ಯದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ. ಜೈಲರ್ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದು ಅದರ ಕಾವಲಾಯ್ಯ ಹಾಡು. ಒಂದೆಡೆ (Rajinikanth) ಅವರ ಅಭಿನಯಕ್ಕೆ ಜನ ಸೋತಿದ್ದರೆ, ಇನ್ನೊಂದೆಡೆ ಕಾವಾಲ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ ಜುಲೈ 6ರಂದು ಈ ಬಿಡುಗಡೆಯಾಗಿತ್ತು. ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿರುವುದು ಇತಿಹಾಸ. ಈಗಲೂ ಈ ಹಾಡಿನ ಹವಾ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ.
ಹೀಗೆ ಹಾಡಿನಿಂದ ಹಿಡಿದು ಚಿತ್ರದ ಪ್ರತಿಯೊಂದು ದೃಶ್ಯಕ್ಕೂ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ ಜೈಲರ್. ಹಾಡುಗಳು, ಸೀನ್ಗಳು ವೈರಲ್ ಆಗಿವೆ. ಸಿನಿಮಾ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೈಲರ್ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಅವರು ಡ್ಯಾನ್ಸ್ ಮಾಡಿದ್ದು, ಇದರಲ್ಲಿ ಶಿವರಾಜ್ಕುಮಾರ್ ಹಾಗೂ ಮೋಹನ್ಲಾಲ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿ ಪತ್ನಿಯಾಗಿ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರವನ್ನೂ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಜೈಲರ್ ಸೀಕ್ವೆಲ್ ಬರುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.
ರಜನೀಕಾಂತ್ ಭೇಟಿಯಾಗಲು 55 ದಿನ ಹಿಮಾಲಯದವರೆಗೆ ನಡೆದ ಅಭಿಮಾನಿ!
ಇನ್ನು ಜೈಲರ್ ಚಿತ್ರದ ಕುರಿತು ಹೇಳುವುದಾದರೆ, ಇದು ಬ್ಲಾಕ್ಬಸ್ಟರ್ ಎಂದು ಇದಾಗಲೇ ಸಾಬೀತಾಗಿದೆ. 2 ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚೆನ್ನೈ ಹಾಗೂ ಬೆಂಗಳೂರಿನ ಕೆಲ ಕಚೇರಿಗಳಲ್ಲಿ ಜೈಲರ್ ಸಿನಿಮಾ ವೀಕ್ಷಣೆಗೆ ಮೊದಲ ದಿನವೇ ರಜೆಯನ್ನು ಕೂಡ ಘೋಷಣೆ ಮಾಡಲಾಗಿತ್ತು! ಆರಂಭದಲ್ಲಿಯೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್ ಬುಕಿಂಗ್ ಮಾಡಲಾಗಿತ್ತು. ನೆಲ್ಸನ್ ದಿಲೀಪ್‌ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ.
ಇವೆಲ್ಲವುಗಳ ನಡುವೆಯೇ ಈಗ ಕುತೂಹಲದ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ ರಜನೀಕಾಂತ್ ಅವರು ಜೈಲರ್ ಸಿನಿಮಾವನ್ನು ಇದುವರೆಗೆ ವೀಕ್ಷಿಸಿಲ್ಲ. ಏಕೆಂದರೆ ಇತ್ತ ಜೈಲರ್ ಹವಾ ಸೃಷ್ಟಿಸುತ್ತಿದ್ದರೆ, ಅತ್ತ ರಜನೀಕಾಂತ್ ಹಿಮಾಲಯ ಪ್ರವಾಸದಲ್ಲಿದ್ದರು. ಚಿತ್ರದ ಬಿಡುಗಡೆಯ ದಿನವೇ ಹಿಮಾಲಯಕ್ಕೆ ಹೋಗಿ ಅಲ್ಲಿ ಸಾಧುಗಳ ದರ್ಶನ ಪಡೆಯುತ್ತಿದ್ದರು. ಈಗ ಅವರು ಚಿತ್ರ ವೀಕ್ಷಣೆಗೆ ಮುಂದಾಗಿದ್ದಾರೆ. ಅದು ಯಾರ ಜೊತೆ ಎನ್ನುವುದು ಈಗಿರುವ ಕುತೂಹಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೊತೆಗೂಡಿ ಇಂದು (ಆಗಸ್ಟ್ 19) ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಹಿಮಾಲಯದಿಂದ ಉತ್ತರ ಪ್ರದೇಶದ ಲಖನೌಗೆ ಬಂದಿಳಿದಿರುವ ರಜನಿಕಾಂತ್ ಅವರು, ಚಿತ್ರ ವೀಕ್ಷಣೆಯನ್ನು ಸಿಎಂ ಜೊತೆ ಮಾಡಲಿರುವುದಾಗಿ ತಿಳಿಸಿದ್ದಾರೆ.
ಜೈಲರ್ ಪಾರ್ಟ್ 2 ಸಿನಿಮಾ ಬರ್ತಿದೆ.... ಹೀರೋ ಯಾರು?