Asianet Suvarna News Asianet Suvarna News

ರಜನೀಕಾಂತ್ ಭೇಟಿಯಾಗಲು 55 ದಿನ ಹಿಮಾಲಯದವರೆಗೆ ನಡೆದ ಅಭಿಮಾನಿ!

ಸದ್ಯ ಹಿಮಾಲಯದಲ್ಲಿರುವ ನಟ ರಜನೀಕಾಂತ್​ ಅವರನ್ನು ಭೇಟಿಯಾಗಲು ಅವರ ಅಭಿಮಾನಿಯೊಬ್ಬರು ಚೆನ್ನೈನಿಂದ ಹಿಮಾಲಯಕ್ಕೆ 55 ದಿನ ನಡೆದುಕೊಂಡು ಹೋಗಿದ್ದಾರೆ. 
 

Fan Walks From Chennai To Uttarakhand To Meet Rajinikanth suc
Author
First Published Aug 16, 2023, 11:39 AM IST

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ದಿನದಿಂದ ದಿನಕ್ಕೆ ತಮ್ಮ  ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಇತ್ತ ಅವರ ಅಭಿನಯದ ಜೈಲರ್​ ಚಿತ್ರ ಬಾಕ್ಸ್​ ಆಫೀಸ್​ ಕೊಳ್ಳೆಹೊಡೆಯುತ್ತಿದ್ದರೆ, ಅತ್ತ ರಜನಿಕಾಂತ್ ಹಿಮಾಲಯದಲ್ಲಿ ಪ್ರವಾಸದಲ್ಲಿದ್ದಾರೆ. ಇವರು ಹಿಮಾಲಯಕ್ಕೆ ಭೇಟಿ ನೀಡುವುದನ್ನು ತಿಳಿದ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನನ್ನು ನೋಡಲು 55 ದಿನಗಳವರೆಗೆ ಪಾದಯಾತ್ರೆ ಮಾಡಿ ಹಿಮಾಲಯವನ್ನು ತಲುಪಿದ್ದಾರೆ. ಹೌದು!   55 ದಿನಗಳ ಕಾಲ ಚೆನ್ನೈನಿಂದ ಉತ್ತರಾಖಂಡಕ್ಕೆ ನಡೆದುಕೊಂಡು ಹೋಗಿರುವ ಈ  ಅಭಿಮಾನಿಗೆ, ರಜನಿಕಾಂತ್ ಅವರನ್ನು ಭೇಟಿಯಾಗುವ ಸೌಭಾಗ್ಯ ಒದಗಿ ಬಂದಿದೆ. ರಜನಿಕಾಂತ್ ಅವರು ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೋವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ಹೋಗಿರಲಿಲ್ಲ. ಆದರೆ ಈಗ  ‘ಜೈಲರ್’ ಸಿನಿಮಾ ರಿಲೀಸ್ ಬೆನ್ನಲ್ಲೇ ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ.


 
 ರಜನಿಕಾಂತ್ ಅವರನ್ನು ಭೇಟಿಯಾಗಿರುವ ವ್ಯಕ್ತಿಯ ಹೆಸರು  ರಾ.ಅರ್ಜುನಮೂರ್ತಿ (Anjanamurthy) ಅವರು.  ಉತ್ತರಾಖಂಡದಲ್ಲಿ ರಜನಿ ಅವರನ್ನು ಭೇಟಿಯಾದ ನಂತರ ಅವರು ಚಿತ್ರವನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ಭೇಟಿಯಾಗಲು ತಾವು  ಚೆನ್ನೈನಿಂದ ಉತ್ತರಾಖಂಡದ ಮಹಾವತಾರ್ ಬಾಬಾಜಿಯ ಗುಹೆಗೆ 55 ದಿನಗಳ ಕಾಲ ನಡೆದು ಬಂದಿರುವುದಾಗಿ ತಿಳಿಸಿದ್ದಾರೆ.  ತಮ್ಮನ್ನು ಭೇಟಿಯಾಗಲು ಬರುತ್ತಿರುವ ವಿಷಯ ತಿಳಿಯುತ್ತಲೇ ರಜನೀಕಾಂತ್​ ಅವರು, ಅಭಿಮಾನಿಯನ್ನು ಭೇಟಿಯಾಗಿ ಅವರ ಜೊತೆ ಮಾತುಕತೆ ನಡೆಸಿದರು. ಅಷ್ಟೇ ಅಲ್ಲದೇ ಅವರಿಗೆ  ಆರ್ಥಿಕವಾಗಿ ಸಹಾಯ ಕೂಡ ಮಾಡಿದರು. ಅಷ್ಟೇ ಅಲ್ಲ, ಕೊರೆಯುವ ಚಳಿಯಲ್ಲಿ ಮರದ ಕೆಳಗೆ ಮಲಗಿದ್ದ ಆ ವ್ಯಕ್ತಿಗೆ ಸನ್ಯಾಸಿಯೊಂದಿಗೆ ಚಿಕ್ಕ ಜಾಗಕ್ಕೆ ತೆರಳಲು ರಜನಿಕಾಂತ್ ಕೂಡ ಸಹಾಯ ಮಾಡಿದರು ಎನ್ನಲಾಗಿದೆ. 

ಜೈಲರ್ ಪಾರ್ಟ್‌ 2 ಸಿನಿಮಾ ಬರ್ತಿದೆ.... ಹೀರೋ ಯಾರು?

ಈಗ ವೈರಲ್ ಆಗಿರೋ ಫೋಟೋದಲ್ಲಿ, ರಜನಿಕಾಂತ್ ಆ ವ್ಯಕ್ತಿಯನ್ನು ಪ್ರೀತಿಯಿಂದ ಹಿಡಿದುಕೊಂಡು ಗುಹೆಯ ಹೊರಗೆ ಅವರೊಂದಿಗೆ ಚಿತ್ರವನ್ನು ಕ್ಲಿಕ್ಕಿಸುತ್ತಿರುವುದನ್ನು ಕಾಣಬಹುದು. ಅಷ್ಟಕ್ಕೂ ರಜನೀಕಾಂತ್​ ಅವರಿಗೆ ಹಿಮಾಲಯದ (Himalaya) ನಂಟು ಬೆಳೆದಿರುವುದು ಅವರು 1992-93ರ ಸಂದರ್ಭದಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿಯಾದಾಗ ಎನ್ನಲಾಗಿದೆ. ಚೆನ್ನೈನಲ್ಲಿ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದ ರಜನಿಕಾಂತ್  ಅವರಿಂದ ಪ್ರಭಾವಕ್ಕೆ ಒಳಗಾಗಿ ಹಿಮಾಲಯಕ್ಕೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆಗ ಸ್ವಾಮೀಜಿ, ಅಲ್ಲಿ ಓಡಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವ ಮೂಲಕ ನಕಲಿ ಸ್ವಾಮಿಗಳ ಕುರಿತೂ ಎಚ್ಚರಿಕೆ ನೀಡಿದ್ದರು. ಬಂದಾಗ ಹೃಷಿಕೇಶದಲ್ಲಿರುವ ತಮ್ಮ ಆಶ್ರಮದಲ್ಲೇ ಇರುವಂತೆ ಹೇಳಿದ್ದರು. ಹೀಗೆ ರಜನೀಕಾಂತ್​ ಅವರಿಗೆ  ಹೃಷಿಕೇಶದ ನಂಟು ಬೆಳೆದಿದ್ದು, ಅಲ್ಲಿಯೇ ನೆಲೆಸುತ್ತಾರೆ. ಹೃಷಿಕೇಶದಲ್ಲಿ ರಜನಿ ಒಬ್ಬರೇ ಬಂದಿದ್ದರು. ಯಾವುದೇ ಬೌನ್ಸರ್​ಗಳು ಇರಲಿಲ್ಲ. 

 

 ಇನ್ನು ಜೈಲರ್​ ಚಿತ್ರದ ಕುರಿತು ಹೇಳುವುದಾದರೆ, ಇದು ಬ್ಲಾಕ್​ಬಸ್ಟರ್​ ಎಂದು ಇದಾಗಲೇ ಸಾಬೀತಾಗಿದೆ. 2 ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚೆನ್ನೈ ಹಾಗೂ ಬೆಂಗಳೂರಿನ ಕೆಲ ಕಚೇರಿಗಳಲ್ಲಿ ಜೈಲರ್ ಸಿನಿಮಾ ವೀಕ್ಷಣೆಗೆ ಮೊದಲ ದಿನವೇ ರಜೆಯನ್ನು ಕೂಡ ಘೋಷಣೆ ಮಾಡಲಾಗಿತ್ತು! ಆರಂಭದಲ್ಲಿಯೇ  ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್‌ ಬುಕಿಂಗ್‌ ಮಾಡಲಾಗಿತ್ತು. ನೆಲ್ಸನ್‌ ದಿಲೀಪ್‌ಕುಮಾರ್‌ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ಶಿವರಾಜ್ ಕುಮಾರ್ ಕೂಡ ರಜನಿಕಾಂತ್ ಜೊತೆ ಕಾಣಿಸಿಕೊಂಡಿದ್ದಾರೆ.  ರಜನಿಕಾಂತ್ ಮುಂದಿನ ಚಿತ್ರ ತಲೈವರ್‌ 170 ಚಿತ್ರದ ಶೂಟಿಂಗ್ ತಯಾರಿ ನಡೆಯುತ್ತಿದೆ.

 

Follow Us:
Download App:
  • android
  • ios