ರಜನಿಕಾಂತ್ 'ಜೈಲರ್' ಕರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್: ಮತ್ತೆ ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಶಿವಣ್ಣ?

ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಸೇಲ್ ಆಗಿದ್ದು ಜಯಣ್ಣ ಪಾಲಾಗಿದೆ. ಈ ಮೂಲಕ ಮತ್ತೆ ಶಿವರಾಜ್ ಕುಮಾರ್, ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಎಂದು ಕಾದುನೋಡಬೇಕು.

Rajinikanth starrer Jailer movie Karnataka distribution rights sold out sgk

ಕನ್ನಡ ಸಿನಿಮಾರಂಗದ ಟಾಪ್ ನಿರ್ಮಾಣ ಸಂಸ್ಥೆಯಲ್ಲಿ ಜಯಣ್ಣ ಕಂಬೈನ್ಸ್  ಕೂಡ ಒಂದು.  ಆದರೆ ಇತ್ತೀಚಿನ ದಿನಗಳಲ್ಲಿ ಜಯಣ್ಣ ಕಂಬೈನ್ಸಿನಿಂದ ಯಾವುದೇ ಹಿಟ್ ಸಿನಿಮಾಗಳು ಬಂದಿಲ್ಲ. ಒಂದು ಕಾಲದಲ್ಲಿ ಸಿನಿಮಾಗಳು ಶತದಿನೋತ್ಸವ ಆಚರಣೆ ಮಾಡುತ್ತಿದ್ವು. ಆದರೆ ನಂತರದ ದಿನಗಳಲ್ಲಿ ಮಾಯವಾಗಿದ್ದ ಜಯಣ್ಣ ಮಫ್ತಿ‌ ಸಿನಿಮಾ ಮೂಲಕ ಮತ್ತೆ ಕಮ್‌ ಬ್ಯಾಕ್ ಮಾಡಿದ್ದರು. ಮಫ್ತಿ ಬಂದು ಈಗ ಆರು ವರ್ಷದ ನಂತ್ರ ಮತ್ತೆ ಕಮಾಲ್ ಮಾಡಲು ಬರ್ತಿದ್ದಾರೆ ಜಯಣ್ಣ. ಮಫ್ತಿ ಸಿನಿಮಾ ಜಯಣ್ಣ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಹಾಗೆ ಜೈಲರ್ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. 

ಜೈಲರ್ ಸಿನಿಮಾದಿಂದ ಜಯಣ್ಣ ಕೈ‌ಹಿಡಿದ ಶಿವ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಕಮಾಲ್ ಮಾಡಿರೋ ಜೈಲರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಿದೆ..ಈ ಮೂಲಕ‌ ಮತ್ತೆ ಜಯಣ್ಣ ಕಂಬೈನ್ಸ್ ಮತ್ತೆ ಸುದ್ದಿಯಲ್ಲಿದೆ.

ಟ್ರೆಂಡಿಂಗ್ ನಲ್ಲಿದೆ  ಕಾವಾಲ ಸಾಂಗ್

ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಕಾವಾಲ ಸಾಂಗ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡಿಗೆ ತಮ್ಮನ್ನ ಡಾನ್ಸ್ ಮಾಡಿದ್ದು ಇದೇ ಮೊದಲ ಬಾರಿಗೆ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಯಾರ್ ನೋಡಿದ್ರು ಈ ಹಾಡಿಗೆ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. 

Tamannah Bhatia: ‘ಕಾವಾಲಾ’ ಹಾಡಿನ ಹವಾ; ಏರ್​ಪೋರ್ಟ್​​ನಲ್ಲೇ ಡ್ಯಾನ್ಸ್​ ಮಾಡಿದ ಮಿಲ್ಕಿ ಬ್ಯೂಟಿ

ಜೈಲರ್ ಜೊತೆಯಲ್ಲಿ ಶಿವರಾಜ್ ಕುಮಾರ್ 

ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜೊತೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದು ಇದೇ ಕಾರಣಕ್ಕೆ  ಕನ್ನಡಿಗರಿಗೂ ಕೂಡ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.

ಮಾಲ್ಡೀವ್ಸ್‌ನಲ್ಲಿ ರಜನಿಕಾಂತ್: ಕೆಂಪು ಟಿ ಶರ್ಟ್, ಕಪ್ಪು ಚಡ್ಡಿಯಲ್ಲಿ ತಲೈವ ಮಸ್ತ್ ಎಂಜಾಯ್

ಜೈಲರ್ ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು, ಮಲಯಾಳಂ ಸ್ಟಾರ್ ಮೋಹನ್ ಬಾಬು ಸೇರಿದಂತೆ ಅನೇಕರು ನಟಿಸಿದ್ದಾರೆ. ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ ನಲ್ಲಿ ತೆರೆಗೆ ಬರಲಿದೆ ಜೈಲರ್.

Latest Videos
Follow Us:
Download App:
  • android
  • ios