ರಜಿನಿಕಾಂತ್ ಚಿತ್ರಗಳೇ ಹಾಗೆ ಟಾಲಿವುಡ್-ಕಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ನಲ್ಲೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತದೆ. ದಚ್ಚು - ಕಿಚ್ಚನ ಚಿತ್ರಗಳಿಗೆ ಮಾತ್ರವಲ್ಲ ರಜನಿ ಚಿತ್ರಕ್ಕೂ ಕನ್ನಡ ಸಿನಿ ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿ ಸುತ್ತಿದ್ದಾರೆ...

ಸಂಭಾವನೆಯಲ್ಲಿ ರಜನೀಕಾಂತ್ ಹಿಂದಿಕ್ಕಿದ ತಮಿಳು ನಟ ವಿಜಯ್‌?

ಮಾಯಾಜಾಲ್ ಮಲ್ಟಿಪ್ಲೆಕ್ಸ್‌  ರಜನಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಟ್ಟಿತ್ತು, ಈ ಮಲ್ಟಿಪ್ಲೆಕ್ಸ್‌ನಲ್ಲಿ ಒಟ್ಟು  6 ಸ್ಕ್ರೀನ್‌ಗಳಿದ್ದು ಎಲ್ಲಾ 16 ಸ್ಕ್ರೀನ್‌ಗಳಲ್ಲಿ ದರ್ಬಾರ್  ಪ್ರದರ್ಶನವಾಗುತ್ತಿದೆ.

ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'; ತಲೈವಾ ಸಿನಿಮಾಗಷ್ಟೆ ಇಂಥಾ ಕ್ರೇಜ್!

ಇನ್ನು ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ದರ್ಬಾರ್ ಪ್ರದರ್ಶನವಾಗುತ್ತಿದ್ದು ಈಗಾಗಲೆ ಬಹುತೇಕ ಶೋಗಳು ಸೋಲ್ಡ್‌ಔಟ್‌ ಆಗಿದೆ. ಅದರಲ್ಲೂ ಮಗ್ರಾಥ್ ರಸ್ತೆಯಲ್ಲಿರುವ ಐನಾಕ್ಸ್‌ ಚಿತ್ರಮಂದಿರದಲ್ಲಿ  ಮೊದಲ ದಿನವೇ 16 ಶೋಗಳ ಪ್ರದರ್ಶನವಾಗುತ್ತಿದೆ ಹಾಗೂ ಟಿಕೆಟ್‌ಗಳ ಬೆಲೆ ಸುಮಾರು 230,1000, 1200 ಹಾಗೂ 1500 ನಿಗದಿಯಾಗಿದೆ. ಇನ್ನು ಕೋರಮಂಗಳದ PVRನಲ್ಲಿ ಗೋಲ್ಡ್‌ ಕ್ಲಾಸ್‌ ಟಿಕೆಟ್‌ಗಳು 1200 ಮತ್ತು 1500ರೂ ಹಾಗೂ 8 ಶೋಗಳಿಗೆ  ಸಾಮಾನ್ಯ ವೀಕ್ಷಣೆಗೆ 700,800ರೂ ನಿಗದಿಯಾಗಿದೆ. 

ಎ ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದರ್ಬಾರ್‌ ಚಿತ್ರ ಒಟ್ಟು ಬಜೆಟ್‌ 250 ಕೋಟಿ ಆಗಿದ್ದು ರಜನಿಕಾಂತ್ 100 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಮಾತುಗಳಿದೆ. ಇನ್ನು ಚಿತ್ರದಲ್ಲಿ ರಜನಿ ಸೂಪರ್ ಕಾಪ್‌ ಆಗಿ ಕಾಣಿಸಿಕೊಂಡು ನಿಗೂಢ ಕೊಲೆಯನ್ನು ಪತ್ತೆ ಮಾಡುತ್ತಾರೆ ಎಂದು ಓನ್‌ ಲೈನ್‌ನಲ್ಲಿ ಕಥೆ ಹೇಳಲಾಗಿದೆ.